ಸಂತ ಸೆಬಾಸ್ಟಿಯನ್‌

ಆತ ಓರ್ವ ವೀರ, ಧೀರ ಕಟ್ಟುಮಸ್ತಾದ ಯುವಕ. ಯೇಸುವಿನಲ್ಲಿ ಅಚಲ ನಂಬಿಕೆ ಆತನಲ್ಲಿತ್ತು. ವೀರಸೈನಿಕನಾಗುವ ಇಚ್ಚೆ ಆತನಲ್ಲಿ ಪ್ರಬಲವಾಗಿತ್ತಾದರೂ ಅದಕ್ಕಿಂತ ಹೆಚ್ಚಾಗಿ ದೇವರ ಸೈನಿಕನಾಗುವ ಅಭಿಲಾಷೆಗೆ ಆತ ಶರಣಾಗಿದ್ದ. ಕ್ರಿ.. 283ರಲ್ಲಿ ಆತ ರೋಮ್ ಚಕ್ರವರ್ತಿಯ ಸಹಾಯಕನಾಗಿ ಕೆಲಸಕ್ಕೆ ಸೇರುತ್ತಾನೆ. ಆತನ ಹೆಸರೇ 'ಸೆಬಾಸ್ಟಿಯನ್;' ಕೇವಲ ನಾಲ್ಕು ವರ್ಷಗಳ ಕಾಲ ಸೇವೆಯಲ್ಲಿದ್ದು ಯೇಸುವಿಗಾಗಿ ತನ್ನ ಪ್ರಾಣವನ್ನೇ ಬಲಿಯರ್ಪಿಸಿದ ಈತನ ಬಗೆಗೆ ನಮಗೆ ತಿಳಿದು ಬರುವುದು ನಾಲ್ಕು ವರ್ಷದ ಮಾಹಿತಿಗಳು ಮಾತ್ರವೇ. ಈತನ ಬಾಲ್ಯದ ಕುರಿತಾಗಲಿ, ಹೆತ್ತವರ ಬಗ್ಗೆಯಾಗಲಿ ಏನೂ ತಿಳಿದು ಬರುವುದಿಲ್ಲ. ಹುಟ್ಟಿದ್ದು 'ಗ್ಯಾಲಿಯ ನಾರ್ಬೋನೆಸಿಸ್‌' ಎಂಬ ಪ್ರಾಂತದಲ್ಲಿ; ಕ್ರಿ..256ರಲ್ಲಿ ಎಂದು ಊಹಿಸಲಾಗಿದೆ.

ಚಕ್ರವರ್ತಿಯ ಸಹಾಯಕನಾಗಿ ಸೆಬಾಸ್ಟಿಯನ್ಕೆಲಸಕ್ಕೆ ಸೇರಿದಾಗ ರೋಮನ್ನು ಆಳುತ್ತಿದ್ದವನು 'ಮಾರ್ಕುಸ್ಔರೇಲಿಯುಸ್ಕಾರಿನಸ್‌' ಎಂಬಾತ. ರೋಂನ ಐವತ್ತನೆಯ ಚಕ್ರವರ್ತಿಯೆಂಬ ಹೆಗ್ಗಳಿಕೆಯನ್ನು ಹೊಂದಿದ್ದ ಈತ ಅದೇ ಹೆಗ್ಗಳಿಕೆಯನ್ನು ಆಳುವುದರಲ್ಲಿ ತೋರಿಸಲಿಲ್ಲ. ಅವನು ತೋರಿದ್ದು ಸ್ತ್ರೀಯರ ಮೇಲಿನ ವ್ಯಾಮೋಹವನ್ನು. ಪ್ರಾಯಶಃ ಅದೇ ಕಾರಣಕ್ಕೆ ಅವನು ಮೃತನಾದನು ಎಂದು ಹೇಳಲಾಗುತ್ತಿದೆ. ಅದೇನೇ ಇರಲಿ ರೋಮ್ ಚಕ್ರವರ್ತಿಗಳಲ್ಲೇ ಅತ್ಯಂತ ಅಸಮರ್ಥ ಚಕ್ರವರ್ತಿ ಎಂಬ ಬಿರುದು ಈತನಿಗೆ ಲಭ್ಯವಾಗಿತ್ತು. ಒಂಬತ್ತು ಜನ ಉಪಪತ್ನಿಯರ ಸಹವಾಸದಲ್ಲಿ ಮುಳುಗಿರುತ್ತಿದ್ದ ಆತ 285ರಲ್ಲಿ ಆಕಸ್ಮಿಕನಾಗಿ ಮೃತನಾದನೆಂದು ಹೇಳಲಾಗುತ್ತಿದೆ. ಅವನ ಬಳಿಕ ಚಕ್ರವರ್ತಿಯ ಪಟ್ಟಕ್ಕೇರಿದವನೇ, 'ಡಯಾಕ್ಲೇಷಿಯನಸ್ಅಗಸ್ತುಸ್‌'. 'ಡಯಾಕ್ಲೇಷಿಯನ್‌' ಎಂದೇ ಕರೆಯಲ್ಪಡುವ ಈತ ಕ್ರೈಸ್ತ ವಿರೋಧಿಯಾಗಿದ್ದ. ಕ್ರೈಸ್ತರನ್ನು ಮಟ್ಟ ಹಾಕುವುದೇ ಅವನ ಗುರಿಯಾಗಿತ್ತು.

ಸೆಬಾಸ್ಟಿಯನ್ ಧೈರ್ಯ ಮತ್ತು ಮುತ್ಸುದ್ದಿತನವನ್ನು ಕಂಡ ಡಯೋಕ್ಲೇಷಿಯನ್‌, ಸಹಾಯಕ ಹುದ್ದೆಯಲ್ಲಿದ್ದ ಸೆಬಾಸ್ಟಿಯನ್ಗೆ ಮುಂಬಡ್ತಿಯನ್ನು ನೀಡುತ್ತಾನೆ. ಬಂಧಿಖಾನೆಯ ಖೈದಿಗಳನ್ನು ನೋಡುವ ಮತ್ತು ಲೆಕ್ಕವಿಡುವ ಸಿಬ್ಬಂದಿಯನ್ನಾಗಿ ಆತನನ್ನು ನೇಮಿಸುತ್ತಾನೆ. ಆದರೆ ಚಕ್ರವರ್ತಿಗೆ ತಿಳಿಯದು, ಸೆಬಾಸ್ಟಿಯನ್ಓರ್ವ ಕ್ರೈಸ್ತ ಮತಾವಲಂಬಿಯೆಂಬುದು. ಕೇವಲ ಕ್ರೈಸ್ತಮತಾವಲಂಬಿಯಾಗದೆ ಸೆಬಾಸ್ಟಿಯನ್ತನ್ನ ಪ್ರಾಣವನ್ನು ಒತ್ತೆಯಾಗಿಟ್ಟು, ಚಕ್ರವರ್ತಿ ಕಾರಿನಸ್ಕಾಲದ ಎರಡು ವರ್ಷಗಳು ಮತ್ತು ಡಯೋಕ್ಲೇಷಿಯನ್ ಕಾಲದ ಎರಡು ವರ್ಷಗಳು ಸೇರಿದಂತೆ ಒಟ್ಟು ನಾಲ್ಕು ವರ್ಷಗಳ ಅವಧಿಯಲ್ಲಿ ಕ್ರೈಸ್ತಮತಪ್ರಚಾರಕನೂ ಆಗಿ ಹಲವರನ್ನು ಕ್ರೈಸ್ತಮತದತ್ತ ಸೆಳೆಯುತ್ತಾನೆ.

ಒಂದು ಅಭಿಪ್ರಾಯದ ಪ್ರಕಾರ, ಮಾರ್ಕುಸ್ಮತ್ತು ಮರ್ಸೀಲಿಯುಸ್ಎಂಬ ಈರ್ವರು ಅವಳಿ ಕ್ರೈಸ್ತ ಸಹೋದರರು ರೋಮನ್ದೇವತೆಗಳಿಗೆ ಬಲಿಯರ್ಪಿಸಲು ನಿರಾಕರಿಸಿದರು ಎಂಬ ಕಾರಣಕ್ಕೆ ಅವರನ್ನು ಬಂಧಿಸಿ ಕಾರಾಗೃಹಕ್ಕೆ ತಳ್ಳಲಾಗುತ್ತದೆ. ಸಹೋದರರನ್ನು ಕ್ರೈಸ್ತಮತ ತ್ಯಜಿಸುವಂತೆ ಒತ್ತಾಯಿಸಲು ಅವರ ಹೆತ್ತವರಾದ ಟ್ರಾಂಕಿಲಿನ್ಮತ್ತು ಮರ್ಷಿಯಾ ಎಂಬವರು ಸೆರೆಮನೆಗೆ ಧಾವಿಸಿ ಬರುತ್ತಾರೆಅವರು ಸೋದರರ ಮನಸ್ಸಿನ ಮೇಲೆ ಅನೇಕ ರೀತಿಯ ಒತ್ತಡವನ್ನು ಹೇರುತ್ತಾರೆ. ಅದನ್ನು ಕಂಡ ಸೆಬಾಸ್ಟಿಯನ್ ಸೋದರರ ಸಹಾಯಕ್ಕೆ ಬಂದು ಅವರ ಮನಪರಿವರ್ತನೆಗೆ ಪ್ರಯತ್ನಿಸಿದವರನ್ನೇ ಪರಿವರ್ತನೆಗೊಳಿಸುತ್ತಾನೆ ಮಾತ್ರವಲ್ಲ ಅವರನ್ನೂ ಸಹ ಕ್ರೈಸ್ತಮತದ ತೆಕ್ಕೆಗೆ ಸೇರಿಸುತ್ತಾನೆ.

ಸೆರೆಮನೆಯ ಅಧಿಕಾರಿಯಲ್ಲೊಬ್ಬನಾದ 'ನಿಕೋಸ್ಟ್ರಾಸ್‌' ಎಂಬಾತನ ಪತ್ನಿ ಜ಼ೋ ಎಂಬಾತಳು ಸ್ವಯಂ ಕ್ರೈಸ್ತಮತವನ್ನಪ್ಪಲು ಮುಂದಾಗಿ ಸೆಬಾಸ್ಟಿಯನ್ನಲ್ಲಿ ಸಹಾಯ ಕೋರಿ ಕ್ರೈಸ್ತಮತವನ್ನು ಸ್ವೀಕರಿಸುತ್ತಾಳೆ. ಅವಳನ್ನು ಅನುಸರಿಸಿ ಅವಳ ಪತಿಯೂ ಅದೇ ಹಾದಿಯನ್ನು ಹಿಡಿಯುತ್ತಾನೆ ಮಾತ್ರವಲ್ಲ ಹದಿನಾರು ಕೈದಿಗಳಿಗೆ ಕ್ರೈಸ್ತಮತವನ್ನಪ್ಪಲು ಸಹಾಯ ಮಾಡುತ್ತಾನೆ. ಅದೇ ಸೆರೆಮನೆಯ ಇನ್ನೋರ್ವ ಅಧಿಕಾರಿ 'ಕ್ರೋಮತಿಯುಸ್‌' ಎಂಬಾತನಿಗೆ 'ತೈಬರ್ತಿಯುಸ್‌(ಸಂತ ತೈಬರ್ತಿಯುಸ್‌) ಎಂಬ ಮಗನಿರುತ್ತಾನೆ. ಸೆಬಾಸ್ಟಿಯನ್ಅವನಿಗೂ ಕ್ರೈಸ್ತಮತವನ್ನು ಸ್ವೀಕರಿಸಲು ಪ್ರೇರೇಪಿಸುತ್ತಾನೆ. ಮಗ ಕ್ರೈಸ್ತಮತಾವಲಂಬಿಯಾದಾಗ ಅವನ ತಂದೆ ಕ್ರೋಮತಿಯುಸ್ನೂ ಸಹ ಯೇಸುವಿನಲ್ಲಿ ನಂಬಿಕೆಯನ್ನಿರಿಸಿ ಕ್ರೈಸ್ತಮತವನ್ನಪ್ಪುತ್ತಾನಲ್ಲದೆ ಮುಂದೆ ತನ್ನ ಸೆರೆಮನೆಯಲ್ಲಿದ್ದ ಎಲ್ಲಾ ಕೈದಿಗಳನ್ನೂ ಬಿಡುಗಡೆಗೊಳಿಸಿ, ತನ್ನ ಹುದ್ದೆಯನ್ನೂ ತ್ಯಜಿಸಿ ಹೊರಟುಹೋಗುತ್ತಾನೆ.

ಇವೆಲ್ಲದುದರ ಪರಿಣಾಮ ಸೆಬಾಸ್ಟಿಯನ್ ಮೇಲಾಗುತ್ತದೆ. ಚಕ್ರವರ್ತಿಯ ಕಿವಿಗೆ ವಿಷಯವೆಲ್ಲಾ ತಲುಪುತ್ತದೆ. ನಂಬಿಕೆದ್ರೋಹದ ಆರೋಪದಡಿ ಸೆಬಾಸ್ಟಿಯನ್ ಬಂಧನವಾಗುತ್ತದೆ. ಬಿಲ್ಲುಗಾರಿಕೆಯ ತರಬೇತಿಯನ್ನು ನೀಡಲಾಗುವ ಸ್ಥಳದಲ್ಲಿ ಮರವೊಂದಕ್ಕೆ ಸೆಬಾಸ್ಟಿಯನ್ನನ್ನು ಬಿಗಿದು ಶಸ್ತ್ರಾಭ್ಯಾಸಕ್ಕೆ ಅವಕಾಶಮಾಡಿಕೊಡಲಾಗುತ್ತದೆ. ಮೈತುಂಬಾ ಬಾಣಗಳಿಂದ ಜರ್ಜರಿತನಾದ ಸೆಬಾಸ್ಟಿಯನ್ಪ್ರಜ್ಞೆ ತಪ್ಪುತ್ತಾನೆ. ಸೆಬಾಸ್ಟಿಯನ್ಸತ್ತುಹೋದನೆಂದು ಭಾವಿಸಿ ಎಲ್ಲರೂ ಹೊರಟುಹೋದ ಬಳಿಕ ಅಲ್ಲಿಗೆ ಬರುವ, ಡಯೋಕ್ಲೇಷಿಯನ್ ಕ್ರೈಸ್ತವಿರೋಧಿ ನೀತಿಗೆ ಬಲಿಯಾದ 'ಕಾಸ್ತುಲಸ್‌(ಸಂತ ಕಾಸ್ತುಲಸ್‌)‌' ಪತ್ನಿ 'ಐರಿನ್‌'(ಸಂತ ಐರಿನ್‌), ಸೆಬಾಸ್ಟಿಯನ್ಇನ್ನೂ ಜೀವಂತನಾಗಿರುವುದನ್ನು ತಿಳಿದು ದೇಹವನ್ನು ಹೊಕ್ಕಿದ್ದ ಬಾಣಗಳನ್ನು ತೆಗೆದು ಅವನನ್ನು ಉಪಚರಿಸಿ ಅಲ್ಲಿಂದ ಕರೆದೊಯ್ಯುತ್ತಾಳೆ. ಸೆಬಾಸ್ಟಿಯನ್ಮೃತ್ಯುವಿನಿಂದ ಪಾರಾಗುತ್ತಾನೆ.

ಇದೇ ಅವಧಿಯಲ್ಲಿ ಮಾರ್ಕುಸ್‌, ಮರ್ಸಿಲಿಯುಸ್‌, ಕಾಸ್ತುಲಸ್‌, ಜ಼ೋ, ನಿಕೋಸ್ಟ್ರಾಸಸ್ಮತ್ತು ತೈಬರ್ತಿಯುಸ್ಮುಂತಾದವರ ವಧೆಯೂ ಆಗುತ್ತದೆ.

ಬದುಕುಳಿದ ಸೆಬಾಸ್ಟಿಯನ್ಡಯೋಕ್ಲೇಷಿಯನ್ ಮುಂದೆ ಹೋಗಿ ದಿಟ್ಟತನದಿಂದ ನಿಲ್ಲುತ್ತಾನೆ. ಅವನನ್ನು ಕಂಡ ಚಕ್ರವರ್ತಿ ದಿಗ್ಬ್ರಾಂತನಾಗುತ್ತಾನೆ. ಸೆಬಾಸ್ಟಿಯನ್ಚಕ್ರವರ್ತಿಯ ದುಷ್ಕೃತ್ಯಗಳನ್ನು ಬಹಿರಂಗವಾಗಿ ಖಂಡಿಸುತ್ತಾನೆ. ಆದರೆ ಚಕ್ರವರ್ತಿಯ ಆಗ್ರಹಕ್ಕೆ ತುತ್ತಾದ ಸೆಬಾಸ್ಟಿಯನ್ನನ್ನು ಚಕ್ರವರ್ತಿಯ ಸೇವಕರು ತುಂಡರಿಸಿ ಕೊಂದು ದೂರ ಎಸೆದು ಬರುತ್ತಾರೆ.

ಮೃತ ಸೆಬಾಸ್ಟಿಯನ್ ಶರೀರವನ್ನು ಕಂಡ 'ಲೂಸಿನ' ಎಂಬ ಮಹಿಳೆ ಅದನ್ನು ತೆಗೆದುಕೊಂಡು ಹೋಗಿ ರೋಂನ ನೆಲಮಾಳಿಗೆಯ ಸಮಾಧಿಯೊಂದರಲ್ಲಿ ಇರಿಸುತ್ತಾಳೆ. ರಕ್ತಸಾಕ್ಷಿಯಾದ ಸೆಬಾಸ್ಟಿಯನ್ಸಂತನ ಪಟ್ಟವನ್ನು ಅಲಂಕರಿಸುತ್ತಾನೆ.
ಸುಮಾರು ಎಂಬತ್ತು ವರ್ಷ(ಕ್ರಿ..367ರಲ್ಲಿ)ಗಳ ಬಳಿಕ ಅಂದಿನ ಜಗದ್ಗುರು ಒಂದನೆಯ ಡಮಾಸಸ್‌, ಸಂತ ಸೆಬಾಸ್ಟಿಯನ್ ಶರೀರದ ಕೆಲವು ಅವಶೇಷಗಳನ್ನು ತಾವೇ ನಿರ್ಮಿಸಿದ್ದ ರೋಂನ ಬಸಿಲಿಕಾದಲ್ಲಿ ಇರಿಸುತ್ತಾರೆ. ಕಪಾಲವನ್ನು ಜರ್ಮನಿಯ ವಿರಕ್ತಮಠಕ್ಕೆ ಕಳುಹಿಸಿಕೊಡುತ್ತಾರೆ. ಉಳಿದ ಅವಶೇಷಗಳನ್ನು ಫ್ರಾನ್ಸ್ ವಿರಕ್ತಮಠವೊಂದಕ್ಕೆ ನೀಡಲಾಗುತ್ತದೆ.

ಸಂತ ಸೆಬಾಸ್ಟಿಯನ್ರನ್ನು 'ಪ್ಲೇಗ್ರೋಗವನ್ನು ನಿಯಂತ್ರಿಸಲು ಶಕ್ತನಾದ ಸಂತ' ಎಂದು ಹೇಳುತ್ತಾರೆ. ಕ್ರಿ..680ರಲ್ಲಿ ರೋಂ ನಗರವು ಪ್ಲೇಗಿಗೆ ತುತ್ತಾದಾಗ ಸಂತ ಸೆಬಾಸ್ಟಿಯನ್ ಹೆಸರಿನಲ್ಲಿ ಬಲಿಪೀಠವೊಂದನ್ನು ಕಟ್ಟಿಸಿದಾಗ ರೋಗವು ನಿಯಂತ್ರಣಕ್ಕೆ ಬಂದಿತು ಎನ್ನಲಾಗುತ್ತಿದೆ.


ಜನವರಿ 20ರಂದು ಕಥೋಲಿಕ ಕ್ರೈಸ್ತರು ಸಂತ ಸೆಬಾಸ್ಟಿಯನ್ನರ ಹಬ್ಬವನ್ನು ಆಚರಿಸುತ್ತಾರೆ. ಡಿಸೆಂಬರ್‌ 18ರಂದು ಪಾಶ್ಚಿಮಾತ್ಯ ಆರ್ಥೋಡೆಕ್ಸ್ಪಂಥದವರು ಇವರ ಹಬ್ಬವನ್ನು ಆಚರಿಸುತ್ತಾರೆ. ಇವರನ್ನು ಸೈನಿಕರ, ಪ್ಲೇಗ್ರೋಗಿಗಳ, ಕ್ರೀಡಾಪಟುಗಳ, ಒಳ್ಳೆಯ ಮರಣವನ್ನು ಬಯಸುವವರ ಪಾಲಕ ಸಂತರನ್ನಾಗಿ ಧರ್ಮಸಭೆಯು ಘೋಷಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ