ಬೈಬಲ್ನ ಅನೇಕ ಭಾಗಗಳಲ್ಲಿ
'ವಂಶಾವಳಿ'ಗಳನ್ನು ನೀಡಲಾಗಿದೆ. ಹಳೆಯ
ಒಡಂಬಡಿಕೆಯ 'ಆದಿಕಾಂಡ'ದ ಐದನೆಯ ಅಧ್ಯಾಯದಲ್ಲಿ,
ಜಲಪ್ರಳಯಕ್ಕೆ ಮುಂಚೆ ಬದುಕಿದ್ದ ಹತ್ತು
ತಲೆಮಾರುಗಳನ್ನೂ, ಹತ್ತನೆಯ ಅಧ್ಯಾಯದಲ್ಲಿ ಜಲಪ್ರಳಯದ
ನಂತರ ನೋಹನ ಮಕ್ಕಳಿಂದ ಉತ್ಪತ್ತಿಯಾದ
ಜನಾಂಗಗಳ ಪಟ್ಟಿಯನ್ನೂ ಕಾಣಬಹುದು. ಅಬ್ರಹಾಮನ ತನಕದ ಶೇಮನ ವಂಶಾವಳಿಯು
ಆದಿಕಾಂಡದ ಹನ್ನೊಂದನೆಯ ಅಧ್ಯಾಯದಲ್ಲಿದೆ. ಅದೇ ರೀತಿಯಲ್ಲಿ 'ಪೂರ್ವಕಾಲದ
ಇತಿಹಾಸ'ದ ಎರಡೂ ಕೃತಿಗಳರ್ಳಳು
'ಎಜ್ರ', 'ನೆಹೆಮೀಯ' ಮತ್ತು 'ಎಸ್ತೆರ'ಳ
ಕೃತಿಗಳಲ್ಲೂ ವಂಶಾವಳಿಗಳನ್ನು ಕಾಣಬಹುದು. ಹೊಸ ಒಡಂಬಡಿಕೆಯಲ್ಲೂ ವಂಶಾವಳಿಗಳನ್ನೂ ನೀಡಲಾಗಿದೆ. ಮತ್ತಾಯ ಮತ್ತು ಲೂಕನ
ಸುಸಂದೇಶಗಳಲ್ಲಿ 'ಯೇಸುವಿನ ವಂಶಾವಳಿ'ಯ
ಪಟ್ಟಿಯಿದೆ. ಲೂಕನು, ಆದಾಮನಿಂದ ಆರಂಭವಾಗುವ ಯೇಸುವಿನ ವಂಶಾವಳಿಯನ್ನು ಹಿಂದು
ಮುಂದಾಗಿ ತನ್ನ ಕೃತಿಯಲ್ಲಿ ಅಳವಡಿಸಿಕೊಂಡರೆ
ಮತ್ತಾಯನು ನೇರವಾಗಿಯೇ ಆದರೆ ಅಬ್ರಹಾಮನಿಂದ ಆರಂಭಗೊಳ್ಳುವ ಯೇಸುವಿನ ವಂಶಾವಳಿಯನ್ನು ನೀಡಿದ್ದಾನೆ.
ಲೂಕನ ಕೃತಿಯಲ್ಲಿ ದಾವೀದನ ನಂತರದ ವಂಶಾವಳಿಯು
ನಾತಾನನ ಮೂಲಕ ಸಾಗಿದರೆ ಮತ್ತಾಯನ
ವಂಶಾವಳಿಯು ಸೊಲೊಮೋನನ ಮೂಲಕ ಮುಂದೆ ಸಾಗುತ್ತದೆ.
ಇಬ್ಬರ ವಂಶಾವಳಿಯು ಶೆಲಥಿಯೇಲನ ಪೀಳಿಗೆಯಲ್ಲಿ ಸಂಧಿಸಿ ಜೆರುಬ್ಬಾಬೆಲನೊಂದಿಗೆ ಮತ್ತೆ
ಎರಡು ದಿಕ್ಕುಗಳನ್ನು ಹಿಡಿಯುತ್ತದೆ. ಹೀಗೆ ಸಾಗಿದ ಎರಡೂ
ವಂಶಾವಳಿಗಳು ಮತ್ತೆ ಒಂದುಗೂಡುವುದು ಯೇಸುವಿನ
ಸಾಕುತಂದೆ ಜೋಸೆಫನಲ್ಲಿ. ಆದರೆ ಮತ್ತಾಯನು 'ಯಕೋಬನಿಗೆ
ಮರಿಯಳ ಪತಿಯಾದ ಜೋಸೆಫನು ಹುಟ್ಟಿದನು',
ಎಂದು ಹೇಳಿದರೆ, ಲೂಕನು, 'ಜೋಸೆಫನು ಹೇಲಿಯ
ಮಗ' ಎಂದಿದ್ದಾನೆ. ಆದರೆ ನಿಜಕ್ಕೂ 'ಹೇಲಿ'ಯು ಮರಿಯಮ್ಮನ ಪಿತನಾಗಬೇಕು.
ಅಳಿಯನೂ ಮಗನಂತೆ ಎಂದು ಗ್ರಹಿಸುವುದಾದರೆ
ಲೂಕನ ಅಭಿಪ್ರಾಯವೂ ಸರಿಯೇ.
ದಾವೀದನ ಪೂರ್ವದ ವಂಶಾವಳಿ(ಯೇಸುವಿನ
ದಿಕ್ಕಿನಲ್ಲಿ)
ಆದಾಮನ
ಪುತ್ರ ಆಬೇಲನು ಕಾಯಿನನಿಂದ ಹತ್ಯೆಯಾದ
ನಂತರ ಕಾಯಿನನು ಅಲೆನಾಡು(ನೋದ್)
ಎಂಬ ಸ್ಥಳಕ್ಕೆ ಹೊರಟುಹೋಗುತ್ತಾನೆ. ಅದಾದ ಬಳಿಕ ಆದಾಮ್
ಮತ್ತು ಏವಳಿಗೆ 'ಸೇತ್ ' ಎಂಬ
ಮಗನು ಹುಟ್ಟುತ್ತಾನೆ. ಆಗ ಆದಾಮನ ವಯಸ್ಸು
130 ವರ್ಷವಾಗಿರುತ್ತದೆ ಎಂದು ಆದಿಕಾಂಡದಲ್ಲಿ ದಾಖಲಾಗಿದೆ(5:5-32).
ಸೇತ್(ಶೇತ್)ನಿಗೆ ಎನೋಷ
ಎಂಬ ಮಗನು ಹುಟ್ಟುತ್ತಾನೆ. ಎನೋಷನ
ವಂಶಾವಳಿಯು ಹೀಗೆ ಮುಂದುವರಿಯುತ್ತದೆ; ಕೇನಾನ್,
ಮಹಲಿಲೇಲ್, ಯೆರೆದ್, ಹನೋಕ್, ಮೆತೂಷಲಹ, ಲೆಮೆಕ್,
ನೋಹ, ಶೇಮ್(ಆದಿ 5:1-32, 1ಪೂರ್ವ
1:1-4).
ಈ ವಂಶಾವಳಿಯು ಮುಂದುವರಿದು;
ಅರ್ಪಕ್ಷಾದ್, ಶೆಲಹ,
ಎಬರ, ಪೆಲಗ್(ಆದಿ 10:21-25; ಆದಿ
11:10-18; 1ಪೂರ್ವ 1:17-19)ಎಂಬುದಾಗಿಯೂ; ಮುಂದುವರಿದ ಪೆಲಗನ ವಂಶಾವಳಿ: ರೆಯೂ(ರೆಗೂವ), ಸೆರೂಗ್, ನಾಹೋರ್,
ತೆರಹ ಮತ್ತು ಅಬ್ರಾಮ್(ಅಬ್ರಹಾಮ)(ಆದಿ 11:18-26; 1ಪೂರ್ವ 1:24)ಎಂಬುದಾಗಿಯೂ ಅನಂತರ, ಅಬ್ರಹಾಮನ ಮಗ ಇಸಾಕನೂ (ಆದಿ
2:1-3; 1ಪೂರ್ವ 1:28) ಇಸಾಕನ ಮಗ ಯಕೋಬನೂ
(ಆದಿ 25:26; 1ಪೂರ್ವ 1:34) ಯಕೋಬನ ಮಗ ಯೂದ(ಯೆಹೂದ) (ಆದಿ 29:35; 1ಪೂರ್ವ
2:1)ಎಂಬುದಾಗಿಯೂ ವಿವರಗಳು ದೊರಕುತ್ತವೆ.
ಬಳಿಕ ಯಕೋಬನ ವಂಶದಲ್ಲಿ
ಯೆಹೂದನು ಯಕೋಬನ ಮೊದಲ ಹೆಂಡತಿ
ಲೇಯಳಿಗೆ ನಾಲ್ಕನೆಯ ಮಗನಾಗಿ ಹುಟ್ಟುತ್ತಾನೆ, ಯೆಹೂದನಿಗೆ
ಅವನ ಸೊಸೆ ತಾಮಾರಳಲ್ಲಿ ಹುಟ್ಟಿದ
ಮಗ ಪೆರಜ್(ಪೆರಚ). ಪೆರಚನಿಂದ
ಹೆಬ್ರೋನ್ ಹುಟ್ಟುತ್ತಾನೆ(1ಪೂರ್ವ 2:5) ಎಂದೂ ವಿವರಣೆಯಿದೆ.
ಹೆಬ್ರೋನ್ನಿಂದ ದಾವೀದನ ಪಿತ
ಜೆಸ್ಸೆಯವರೆಗಿನ ವಂಶಾವಳಿಯನ್ನು 1ಪೂರ್ವಕಾಲ ಇತಿಹಾಸದಲ್ಲಿ ನಿಚ್ಛಳವಾಗಿ ದಾಖಲಿಸಲಾಗಿದೆ. ಅದು: ಹೆಬ್ರೋನ್, ರಾಮ್,
ಅಮ್ಮಿನದಾಬ್, ನಹಶೋನ್, ಸಲ್ಮನ(ಸಲ್ಮ), ಬೋವಜ,
ಓಬೇದ, ಜೆಸ್ಸೆ(1ಪೂರ್ವ 2:9-10). ಜೆಸ್ಸೆಯ
ಏಳುಜನ ಮಕ್ಕಳಲ್ಲಿ ದಾವೀದನೂ ಒಬ್ಬ(1ಪೂರ್ವ
2:13-15). ದಾವೀದನಿಗೆ ಏಳುಜನ ಪತ್ನಿಯರೂ, ಅನೇಕ
ಉಪಪತ್ನಿಯರೂ ಇದ್ದರು(1ಪೂರ್ವ 3:1-9). ಅವರಲ್ಲಿ
ದಾವೀದನಿಂದ ಊರಿಯನ ಹೆಂಡತಿ ಬೆತ್ಸೆಬೆಗೆ
ಹುಟ್ಟಿದ ನಾಲ್ವರು ಮಕ್ಕಳಲ್ಲಿ ಸೊಲೊಮೋನ್
ಮತ್ತು ನಾತಾನ್ ಪ್ರಮುಖರು. ಇಲ್ಲಿಂದ
ಜೋಸೆಫ್ ಮತ್ತು ಮೇರಿಯ ವಂಶಾವಳಿಗಳು ಬೇರೆ ಬೇರೆ ದಿಕ್ಕುಗಳನ್ನು ಹಿಡಿಯುತ್ತವೆ. ಯೇಸುವಿನ ಸಾಕುತಂದೆ ಜೋಸೆಫ್ ಸೊಲೊಮೋನನ ವಂಶಜನಾದರೆ,
ಮಾತೆ ಮೇರಿ ನಾತಾನನ ವಂಶಜಳಾಗುತ್ತಾಳೆ; ಅಂದರೆ ಇವರಿಬ್ಬರೂ ದಾವೀದನ ವಂಶಜರೆ.
ಸೊಲೊಮೋನನ
ಮುಂದುವರಿದ ವಂಶ ಇಂತಿದೆ; ರೆಹಬ್ಬಾಮ,
ಅಬೀಯ, ಆಸ, ಯೆಹೋಷಾಫಾಟ್, ಯೆಹೋರಾಮ್,
ಅಹಜ್ಯ, ಯಹೋವಾಷ್, ಅಮಚ್ಯ, ಅಜರ್ಯ(ಉಜ್ಜೀಯ),
ಯೋತಾಮ್, ಅಹಾಜ್, ಹಿಜ್ಕೀಯ, ಮನಸ್ಸೆ,
ಅಮೋನ್, ಯೋಷಿಯ. ಯೆಹೋಯಾಕಿಂ, ಯೆಕೂನ್ಯ(1ಪೂರ್ವ 3:10-16). ನಂತರದ ಪೀಳಿಗೆಗಳಾದ ಶೆಲ್ತಿಯೇಲ್
ಮತ್ತು ಜೆರುಬ್ಬಾಬೆಲ್ ಬ್ಯಾಬಿಲೋನಿಯರಿಂದ ಬಂಧನಕ್ಕೀಡಾಗುತ್ತಾರೆ. ಸೈರಸ್ಸನ ಕಾಲದಲ್ಲಿ ಬಂಧನದಿಂದ
ಬಿಡುಗಡೆಯಾಗುವ ಜೆರುಬ್ಬಾಬೆಲ್ ಬ್ಯಾಬಿಲೋನಿಯರಿಂದ ನೆಲಸಮವಾದ ಜೆರುಸಲೇಮಿನ ಮಹಾದೇವಾಲಯವನ್ನು ಪುನಃ ಕಟ್ಟಿಸುತ್ತಾನೆ. ಅನಂತರದ
ಪೀಳಿಗೆಗಳು ಬೈಬಲ್ನ ಹಳೆಯ ಒಡಂಬಡಿಕೆಯಲ್ಲಿ ಅಸ್ಪಷ್ಟ.
ಆದರೆ
ಹೊಸ ಒಡಂಬಡಿಕೆಯಲ್ಲಿ ಮುಂದುವರಿದ ಪೀಳಿಗೆಯನ್ನು ಮತ್ತಾಯ ಮತ್ತು ಲೂಕರು
ಜೆರುಸಲೇಮಿನ ಅಧಿಕಾರಿಗಳ ಕಚೇರಿಯಲ್ಲಿ ದೊರೆಕಿದ ದಾಖಲೆಗಳಿಂದ ಸಂಗ್ರಹಿಸಿರಬಹುದಾದ
ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ