ಅಲ್ಲೆಲೂಯ

ಇದೊಂದು ಸೆಮೆಟಿಕ್‌ ಭಾಷೆಯ ಪದ. 'ಅಲ್ಲೆಲೂಯ' ಅಥವಾ 'ಹಲ್ಲೆಲೂಯ' ಎಂಬ ಪದಗಳು ಹೀಬ್ರೂ ಭಾಷೆಯಲ್ಲಿ 'ಸರ್ವೇಶ್ವರನಿಗೆ ಸ್ತೋತ್ರ' ಅಥವಾ 'ಸರ್ವೇಶ್ವರನಿಗೆ ಸ್ತುತಿಯು ಸಲ್ಲಲಿ' ಎಂಬ ಅರ್ಥಗಳನ್ನು ಬಿಂಬಿಸುವ ಪದಗಳಾಗಿವೆಉಚ್ಚಾರಣೆಯು ಭಿನ್ನವಾಗಿದ್ದರೂ ಅವುಗಳು ಒಂದೇ ಅರ್ಥವನ್ನು ಬಿಂಬಿಸುತ್ತವೆ. ಈ ಪದವು ಮೂಲತಃ ಹೀಬ್ರೂ ಭಾಷೆಯ ಎರಡು ಪದಗಳ ಸೇರ್ಪಡೆಯ ಏಕಪದವಾಗಿದ್ದು ಮೊದಲರ್ಧವಾದ 'ಹಲ್ಲೆಲು'(Hallelu) ಪದವು ‘ಸ್ತೋತ್ರವು ಸಲ್ಲಲಿ’ ಎಂಬ ಅರ್ಥವನ್ನು ವ್ಯಕ್ತ ಪಡಿಸಿದರೆ ದ್ವಿತೀಯಾರ್ಧ ಪದವಾದ 'ಯಾಹ್‌' ('iah' ಅಥವಾ 'jah' )' ಪದವು ಯೆಹೋವ, ಸರ್ವೇಶ್ವರ ಅಥವಾ ದೇವರು ಎಂಬ ಅರ್ಥವನ್ನು ಸೂಚಿಸುತ್ತದೆ. ಹೀಬ್ರೂಬೈಬಲ್ 'ಕೀರ್ತನೆ'ಯಲ್ಲಿ 24 ಬಾರಿ ಪದವು ಕಂಡು ಬಂದರೆ, 'ಹೊಸ ಒಡಂಬಡಿಕೆ' 'ಯೊವಾನ್ನನ ಪ್ರಕಟಣೆ'ಯಲ್ಲಿ 4 ಬಾರಿ ಪದವನ್ನು ಬಳಸಲಾಗಿದೆ

ಈ ಪದ ಬಳಕೆಯು ಕ್ರೈಸ್ತರ ಪ್ರಾರ್ಥನೆಗಳಲ್ಲಿ ಮೂರು ವಿಧಗಳಲ್ಲಿ; 
೧. ಪ್ರತಿಕ್ರಿಯಾತ್ಮಕವಾಗಿ, 
೨.ಘೋಷಣಾತ್ಮಕವಾಗಿ ಹಾಗೂ, 
೩.ಸಂವಾದಗೀತೆಯ ರೂಪವಾಗಿಯೂ 
ಬಳಸಲ್ಪಡುತ್ತಿದೆ. ಬಲಿಪೂಜೆಯ ಸಂದರ್ಭದಲ್ಲಿ ಸುಸಂದೇಶಕ್ಕೆ ಮೊದಲು ಘೋಷಣೆಯಾಗಿ ಇದನ್ನು ಹಾಡಲಾಗುತ್ತದೆ. ಪಾಸ್ಕ ಕಾಲದ ತ್ರಿಕಾಲ ಪ್ರಾರ್ಥನೆಯಲ್ಲೂ ಈ ಪದವನ್ನು ಬಳಸಲಾಗುತ್ತದೆ.








ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ