ಗ್ರೀಕ್‌(ಭಾಷೆ)

ಗ್ರೀಕ್ಭಾಷೆಯು ಇಂಡೋ-ಯೂರೋಪ್ ಭಾಷಾ ಕುಟುಂಬಕ್ಕೆ ಸೇರಿದ ಒಂದು ಸ್ವತಂತ್ರ ಭಾಷೆ. ಇದು ಗ್ರೀಸ್ದೇಶದ ಜನರ ಮುಖ್ಯ ಭಾಷೆಯಾಗಿತ್ತು, ದಕ್ಷಿಣ ಬಾಲ್ಕನ್ಸ್ಮೂಲದಿಂದ ಹುಟ್ಟಿದ ಭಾಷೆಯು ಏಷ್ಯಾ ಮೈನರ್ ಪಶ್ಚಿಮ, ವಾಯುವ್ಯ ಭಾಗಗಳಲ್ಲೂ. ದಕ್ಷಿಣ ಇಟಲಿ, ಆಲ್ಬೇನಿಯಾ, ಸೈಪ್ರಸ್ಗಳಲ್ಲಿ ಬಳಕೆಯಲ್ಲಿತ್ತುಸುಮಾರು 34 ಶತಮಾನಗಳ ಲಿಖಿತ ದಾಖಲೆಯನ್ನು ಹೊಂದಿರುವ ಭಾಷೆಯು ಇತರ ಇಂಡೋ-ಯೂರೋಪ್ ಭಾಷೆಗಳಿಗಿಂತಲೂ ದೀರ್ಘಕಾಲದ ದಾಖಲೆಯ ಚರಿತ್ರೆಯನ್ನು ಹೊಂದಿದೆ. ಇದರ ಬರವಣಿಗೆಯ ವಿಧಾನವು ಪ್ರಸ್ತುತ ಗ್ರೀಕ್ ಅಕ್ಷರಮಾಲೆಯಿಂದ ಕೂಡಿದ್ದರೂ ಆರಂಭದಲ್ಲಿ ಲೀನಿಯರ್-ಬಿ ಮತ್ತು ಸಿಪ್ರಿಯೋಟ್ ಕಾಗುಣಿತ ಪದ್ದತಿಗಳನ್ನು ಬಳಸಲಾಗುತ್ತಿತ್ತು. ಭಾಷೆಯ ಅಕ್ಷರಮಾಲೆಯು ಫಿನೀಶಿಯನ್ ಲಿಪಿಯಿಂದ ಉಗಮಗೊಂಡಿತ್ತಾದರೂ ನಂತರ ಲ್ಯಾಟಿನ್, ಸಿರಿಲಿಕ್, ಕೋಪ್ಟಿಕ್, ಮತ್ತು ಇತರ ಬರಹ ಪದ್ದತಿಗಳಿಗೆ ಈ ಭಾಷೆಯೇ ಮೂಲವಾಯಿತು.

ಗ್ರೀಕ್ ಭಾಷೆಯು 'ಪಾಶ್ಚಿಮಾತ್ಯ' ಪ್ರಪಂಚವಾದ ಯೂರೋಪ್, ಮತ್ತು ಕ್ರೈಸ್ತ ಚರಿತ್ರೆಯಲ್ಲಿ ಪ್ರಮುಖವಾದ ಸ್ಥಾನಮಾನವನ್ನು ಹೊಂದಿದೆ. ಪ್ಲೇಟೋನ ಸಂಭಾಷಣೆಗಳು ಮತ್ತು ಅರಿಸ್ಟಾಟಲ್ ಬರಹಗಳಂತಹ ಪಾಶ್ಚಿಮಾತ್ಯ ತತ್ವಜ್ಞಾನದ ಮೂಲಭೂತ ಗ್ರಂಥಗಳನ್ನು ಗ್ರೀಕ್ ಭಾಷೆಯಲ್ಲಿ ರಚಿಸಲಾಗಿದೆ. ಕೈಸ್ತರ ಧರ್ಮಗ್ರಂಥವಾದ ಬೈಬಲ್ 'ಹೊಸಒಡಂಬಡಿಕೆ'ಯು ಕೊಯಿನ್(ಪುರಾತನ) ಗ್ರೀಕ್ ಭಾಷೆಯಲ್ಲಿ ಬರೆಯಲ್ಪಟ್ಟಿದೆ. ಹಲವಾರು ಕ್ರೈಸ್ತ ಪಂಗಡಗಳು, ವಿಶೇಷವಾಗಿ ಪೂರ್ವ ಸಂಪ್ರದಾಯಸ್ಥ ಪಂಗಡದವರು ಮತ್ತು ಕಥೋಲಿಕ ಪಂಗಡದವರು ಗ್ರೀಕ್ ಪದ್ದತಿಯನ್ನು ಅನುಸರಿಸುತ್ತಿದ್ದರು; ತಮ್ಮ ಕ್ರೈಸ್ತ ಪೂಜಾವಿಧಿ ವಿಧಾನಗಳನ್ನು ಭಾಷೆಯಲ್ಲಿ ಆಚರಣೆ ಮಾಡುವುದನ್ನು ಮುಂದುವರೆಸಿದ್ದರು.

ಗ್ರೀಕ್ ಭಾಷೆಯು ಮೆಡಿಟರೇನಿಯನ್ ಭಾಗಗಳಲ್ಲಿ ವ್ಯಾಪಕವಾಗಿ ಮಾತನಾಡುತ್ತಿದ್ದ ಭಿನ್ನ ಜನಾಂಗಗಳ ಭಾಷೆಯಾಗಿತ್ತು. ಕಾಲಾಂತರದಲ್ಲಿ ಬೈಜಾಂಟಿನ್ ಸಾಮ್ರಾಜ್ಯದ ಅಧಿಕೃತ ಆಡುಭಾಷೆಯೂ ಇದಾಯಿತು. ಭಾಷೆಯ ಆಧುನಿಕ ರೂಪವು ಇಂದು ಗ್ರೀಸ್ ಮತ್ತು ಸೈಪ್ರಸ್ ದೇಶಗಳ ಅಧಿಕೃತ ಭಾಷೆಯಾಗಿದೆ. ಯೂರೋಪ್ ಒಕ್ಕೂಟದ 23 ಅಧಿಕೃತ ಭಾಷೆಗಳಲ್ಲಿ ಇದೂ ಒಂದಾಗಿದೆ. ಇಂದು ಗ್ರೀಸ್, ಸೈಪ್ರಸ್ ಮತ್ತು ಪ್ರಪಂಚದ ಹಲವಾರು ಭಾಗಗಳಿಗೆ ಹಂಚಿಹೋದ ಜನಾಂಗಗಳಲ್ಲಿ ಸುಮಾರು 13 ಮಿಲಿಯನ್ ಜನರು ಗ್ರೀಕ್ ಭಾಷೆಯಲ್ಲಿ ಮಾತನಾಡುವವರಾಗಿದ್ದಾರೆ. ಆಂಗ್ಲ ಭಾಷೆಯಂತಹ ಅನೇಕ ಆಧುನಿಕ ಭಾಷೆಗಳು ಗ್ರೀಕ್ ಭಾಷೆಯ ಅನೇಕ ಪದಗಳನ್ನು ತನ್ನದಾಗಿಸಿಕೊಂಡಿವೆ.


ಆಂಗ್ಲ ಭಾಷೆಯ ನಿಘಂಟಿನಲ್ಲಿರುವ, ವಿಶೇಷವಾಗಿ ವಿಜ್ಞಾನ ಮತ್ತು ವೈದ್ಯಕೀಯ ಶಾಸ್ತ್ರದ 50,000 ಕ್ಕೂ ಹೆಚ್ಚು ಪದಗಳು ಗ್ರೀಕ್ ಭಾಷೆಯ ಮೂಲದಿಂದ ಬಂದವುಗಳಾಗಿವೆ. ಲ್ಯಾಟೀನ್ ಭಾಷೆಯೊಂದಿಗೆ ಗ್ರೀಕ್ ಭಾಷೆಯನ್ನೂ ಸಹ ಇಂದಿನ ಆಧುನಿಕ ಭಾಷೆಗಳಲ್ಲಿ ನೂತನ ಪದಗಳನ್ನು ರಚಿಸಲು ಬಳಸುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ