ಯೇಸುವಿನ ಮಾತೆ ಮೇರಿ |
ಮೇರಿ ಮತ್ತು ಆಕೆಯ ಪತಿ ಜೋಸೆಫ್ ಈರ್ವರೂ ಜೂದ ಪಂಗಡದ ದಾವೀದನ ವಂಶಜರು. ಮೇರಿಯ
ತಂದೆ ಮತ್ತು ತಾಯಿಯ ಬಗ್ಗೆ ಅಧಿಕೃತ ವಿವರಗಳು ಲಭ್ಯವಿಲ್ಲದಿದ್ದರೂ 'ಜೋಕಿಂ' ಅಥವಾ 'ಹೇಲಿ'ಯನ್ನು ಮೇರಿಯ ತಂದೆಯೆಂದೂ ಹಾಗೂ 'ಆನ್ನ'ಳನ್ನು ತಾಯಿಯೆಂದೂ ಹೇಳಲಾಗುತ್ತಿದೆ. ಸುಸಂದೇಶಗಳಲ್ಲಿ ಇದರ ಬಗ್ಗೆ ಖಚಿತ ಮಾಹಿತಿಗಳಿಲ್ಲದಿದ್ದರೂ ಲೂಕನ ಸುಸಂದೇಶದಲ್ಲಿ 'ಜೋಸೆಫನು ಹೇಲಿಯನಿಗೆ ಹುಟ್ಟಿದನು'(ಲೂಕ 3:23) ಎನ್ನಲಾಗಿದೆ. ಆದರೆ ಮತ್ತಾಯನ ಸುಸಂದೇಶದಲ್ಲಿ, ಯಕೋಬನಿಗೆ ಮರಿಯಳ ಪತಿಯಾದ ಜೋಸೆಫನು ಹುಟ್ಟಿದ್ದು(ಮತ್ತಾಯ 1:15) ಎನ್ನುವ ವಿವರ ದೊರೆಯುತ್ತದೆ. ಇವೆರಡೂ ತದ್ವಿರುದ್ಧವಾದ ವಿವರಗಳು.
ಮಾತೆ ಮೇರಿಗೆ ಓರ್ವ ಸಹೋದರಿಯೂ ಇದ್ದಾಳೆ ಎಂಬುದರ ಬಗ್ಗೆ ಯೊವಾನ್ನನ ಸುಸಂದೇಶ(19:25)ವು ತಿಳಿಸುತ್ತದೆ. ಆದರೆ ಇತಿಹಾಸಜ್ಞ ಹೆಗೆಸಿಪ್ಪಸ್‌ನ ಪ್ರಕಾರ ಆಕೆ ಮರಿಯಮ್ಮನ ಸಹೋದರಿಯಲ್ಲ; ಜೋಸೆಫನ ಸಹೋದರ ಕ್ಲೆಯೋಫನ ಹೆಂಡತಿ. ಹೆಗೆಸಿಪ್ಪಸ್‌ನ ಹೇಳಿಕೆ ಏನೇ ಆಗಿದ್ದರೂ ಆಕೆ ಯೇಸುವಿನ ಮಾತೆಗೆ ಸಹೋದರಿಯ ಸಮಾನವೇ ಆಗುತ್ತಾಳೆ. ಮೇರಿಗೆ ಇನ್ನೂ ಓರ್ವ ಸಂಬಂಧಿಕಳಿದ್ದು ಆಕೆಯ ಹೆಸರು, 'ಎಲಿಜಬೆತ್'. ಆಕೆ ಜೆರುಸಲೇಮಿನ ಮಹಾದೇವಾಲಯದ ಅರ್ಚಕ 'ಜಕರಿಯ'ನ ಹೆಂಡತಿ. ಆಕೆಯು ಮುದಿಪ್ರಾಯದಲ್ಲಿ ಗರ್ಭ ಧರಿಸುತ್ತಾಳೆಂದು ಜಕರಿಯನಿಗೆ ಗ್ಯಾಬ್ರಿಯೇಲ್ ದೂತನಿಂದ ತಿಳಿದುಬರುತ್ತದೆ, ಎನ್ನುವುದು ಲೂಕನ ಸುಸಂದೇಶ(1:13)ದಿಂದ ತಿಳಿದು ಬರುತ್ತದೆ. ಸ್ನಾನಿಕ ಯೊವಾನ್ನ ಅವರಿಬ್ಬರ ಮಗ.
ಮಾತೆ ಮೇರಿಗೆ ಓರ್ವ ಸಹೋದರಿಯೂ ಇದ್ದಾಳೆ ಎಂಬುದರ ಬಗ್ಗೆ ಯೊವಾನ್ನನ ಸುಸಂದೇಶ(19:25)ವು ತಿಳಿಸುತ್ತದೆ. ಆದರೆ ಇತಿಹಾಸಜ್ಞ ಹೆಗೆಸಿಪ್ಪಸ್‌ನ ಪ್ರಕಾರ ಆಕೆ ಮರಿಯಮ್ಮನ ಸಹೋದರಿಯಲ್ಲ; ಜೋಸೆಫನ ಸಹೋದರ ಕ್ಲೆಯೋಫನ ಹೆಂಡತಿ. ಹೆಗೆಸಿಪ್ಪಸ್‌ನ ಹೇಳಿಕೆ ಏನೇ ಆಗಿದ್ದರೂ ಆಕೆ ಯೇಸುವಿನ ಮಾತೆಗೆ ಸಹೋದರಿಯ ಸಮಾನವೇ ಆಗುತ್ತಾಳೆ. ಮೇರಿಗೆ ಇನ್ನೂ ಓರ್ವ ಸಂಬಂಧಿಕಳಿದ್ದು ಆಕೆಯ ಹೆಸರು, 'ಎಲಿಜಬೆತ್'. ಆಕೆ ಜೆರುಸಲೇಮಿನ ಮಹಾದೇವಾಲಯದ ಅರ್ಚಕ 'ಜಕರಿಯ'ನ ಹೆಂಡತಿ. ಆಕೆಯು ಮುದಿಪ್ರಾಯದಲ್ಲಿ ಗರ್ಭ ಧರಿಸುತ್ತಾಳೆಂದು ಜಕರಿಯನಿಗೆ ಗ್ಯಾಬ್ರಿಯೇಲ್ ದೂತನಿಂದ ತಿಳಿದುಬರುತ್ತದೆ, ಎನ್ನುವುದು ಲೂಕನ ಸುಸಂದೇಶ(1:13)ದಿಂದ ತಿಳಿದು ಬರುತ್ತದೆ. ಸ್ನಾನಿಕ ಯೊವಾನ್ನ ಅವರಿಬ್ಬರ ಮಗ.
ಮಗ್ದಲದ ಮೇರಿ |
2. ಮಗ್ದಲದ
ಮೇರಿಯು ಪ್ರಾಯಶಃ ಮಗ್ದಲ ಎಂಬ
ಊರಿನ ಮೇರಿಯಿರಬೇಕು. ಯೇಸುವಿಗೆ ಅನೇಕರು ಅನುಯಾಯಿಗಳಿದ್ದರು. ಬಹುತೇಕರು
ಪುರುಷರು. ಸ್ತ್ರೀಯರು ಇದ್ದರಾದರೂ ಅವರಲ್ಲಿ ಪ್ರಮುಖರಾದವರಲ್ಲಿ ಮಗ್ದಲದ
ಮೇರಿಯೂ ಒಬ್ಬಳು. ಆಕೆಯಲ್ಲದೆ ಹೆರೋದನ ಅರಮನೆಯ ಮೇಲ್ವಿಚಾರಕ ಕೂಜನ
ಹೆಂಡತಿ ಯೊವಾನ್ನ ಮತ್ತು ಇನ್ನೊಬ್ಬಾಕೆ
ಸೂಸಾನ್ನ ಎಂಬುವವರೂ ಯೇಸುವಿನ ಅನುಯಾಯಿಗಳಾಗಿದ್ದರು. ಇವರು ತಮ್ಮ ಆಸ್ತಿಪಾಸ್ತಿಗಳನ್ನು
ಮಾರಿ ಬಂದ ಹಣದಲ್ಲಿ ಯೇಸುವಿಗೂ
ಮತ್ತು ಯೇಸುವಿನ ಶಿಷ್ಯರಿಗೂ ಉಪಚಾರ
ಮಾಡುತ್ತಿದ್ದರು. ಮಗ್ದಲದ ಮೇರಿಯಂತೂ ಯೇಸುವನ್ನು
ಅತ್ಯಂತ ನಿಷ್ಟೆಯಿಂದ ಅನುಸರಿಸುತ್ತಿದ್ದ ಮಹಿಳಾ ಅನುಯಾಯಿ ಮತ್ತು
ಅಭಿಮಾನಿಯೂ ಸಹ. ಯೇಸು ಈಕೆಯಿಂದ
ಏಳು ದೆವ್ವಗಳನ್ನು ಬಿಡಿಸಿದರು ಎಂದು ಸುಸಂದೇಶ(ಲೂಕ
8:2; ಮಾರ್ಕ 16:9)ಗಳು ಹೇಳುತ್ತವೆ. ಯೇಸುವನ್ನು
ಶಿಲುಬೆಗೆ ಏರಿಸುವಾಗ, ಸಮಾಧಿ ಮಾಡುವಾಗ ಈಕೆ
ಹಾಜರಿರುತ್ತಾಳೆ. ಮೂರು ದಿನಗಳ ಬಳಿಕೆ
ಸಮಾಧಿಯ ಬಳಿಗೆ ಬಂದು ತೆರೆದಿದ್ದ
ಸಮಾಧಿಯನ್ನು ಬಗ್ಗಿ ನೋಡಿ ಯೇಸು ಸಮಾಧಿಯಲ್ಲಿಲ್ಲವೆಂಬುದನ್ನು ತಿಳಿದು ಗಾಬರಿಯಾಗಿ ಅಳುತ್ತಾಳೆ.
ಆಗ ಶ್ವೇತವಸ್ತ್ರಧಾರಿಯಾದ ದೇವದೂತರನ್ನು ಕಾಣುತ್ತಾಳೆ. "ಏಕೆ ಅಳುತ್ತಿರುವೆ?" ಎಂದವರು
ಪ್ರಶ್ನಿಸಿದಾಗ, "ನನ್ನ ಪ್ರಭುವನ್ನು ತೆಗೆದುಕೊಂಡು
ಹೋಗಿಬಿಟ್ಟಿದ್ದಾರೆ. ಎಲ್ಲಿ ಇಟ್ಟಿದ್ದಾರೋ ತಿಳಿಯದು,"
ಎನ್ನುತ್ತಾಳೆ. ಹಾಗೆ ಹೇಳಿದವಳೇ ಹಿಂದಕ್ಕೆ
ತಿರುಗಿದಾಗ ಅಲ್ಲೇ ಯೇಸು ನಿಂತಿರುವುದನ್ನು
ಕಾಣುತ್ತಾಳೆ. ಆದರೆ ಅವರಾರೆಂದು ಆಕೆಗೆ
ತಿಳಿಯುವುದಿಲ್ಲ. ಅವರೂ ಸಹ, "ಏಕಮ್ಮಾ
ಅಳುತ್ತಿರುವೆ? ಏನನ್ನು ಹುಡುಕುತ್ತಿರುವೆ?", ಎಂದು ಕೇಳುತ್ತಾರೆ.
ಅವರು ಯಾರೋ ತೋಟಗಾರನಿರಬೇಕೆಂದು ಭಾವಿಸಿ
ಮರಿಯಳು, "ಅಯ್ಯಾ, ನೀವೇನಾದರೂ ಅವರನ್ನು
ಕೊಂಡೊಯ್ದಿದ್ದರೆ ಎಲ್ಲಿ ಇಟ್ಟಿರುವಿರೆಂದು ಹೇಳಿ,
ನಾನು ತೆಗೆದುಕೊಂಡು ಹೋಗುತ್ತೇನೆ," ಎನ್ನುತ್ತಾಳೆ. ಆಗ ಯೇಸು, "ಮರಿಯಾ"
ಎಂದು ಕರೆಯುತ್ತಾರೆ. ಆಗವಳಿಗೆ ತಾನು ಕಂಡದ್ದು ಯೇಸು ಎಂದು ಮನವರಿಕೆಯಾಗಿ, "ಗುರುದೇವ!"
ಎಂದು ಹೇಳುತ್ತಾಳೆ. ಅನಂತರ ಯೇಸುವಿನ ಆಜ್ಞೆಯ
ಮೇರೆಗೆ ಶಿಷ್ಯರ ಬಳಿಗೆ ಬಂದು
ತಾನು ಯೇಸುವನ್ನು ಕಂಡ ಬಗ್ಗೆ ತಿಳಿಸುತ್ತಾಳೆ(ಯೊವಾನ್ನ 20:11-18). ಹೀಗೆ
'ಪುನರುತ್ಥಾನರಾದ ಯೇಸು ಪ್ರಪ್ರಥಮ ಬಾರಿಗೆ
ಆಕೆಗೆ ಕಾಣಿಸಿಕೊಳ್ಳುತ್ತಾರೆ'(ಮಾರ್ಕ 16:9) ಎಂಬುದು ಗಮನಾರ್ಹ.
3. ಯೇಸುವನ್ನು
ಶೀಲುಬೆಗೇರಿಸಿದಾಗ ಶಿಲುಬೆಯ ಬುಡದಲ್ಲಿ ಮೂವರು
ಸ್ತ್ರೀಯರಿರುತ್ತಾರೆ. ಆ ಮೂವರಲ್ಲಿ ಒಬ್ಬಳು ಯೇಸುವಿನ ತಾಯಿ, ಮತ್ತೊಬ್ಬಾಕೆ ಕ್ಲೋಪನ
ಹೆಂಡತಿ ಮೇರಿ ಅಂದರೆ ಯೇಸುವಿನ
ಮಾತೆಯ ಸೋದರ ಸಂಬಂಧಿ ಹಾಗೂ
ಮೂರನೆಯವಳು ಮಗ್ದಲದ ಮೇರಿ. ಯೇಸುವಿನ
ಮಾತೆ ಮೇರಿಯ ಸಹೋದರಿ(ಸಂಬಂಧಿ)ಯ ಹೆಸರೂ ಸಹ
ಮೇರಿ. ಈಕೆಯ ಪತಿ 'ಕ್ಲೋಫ'
ಅಥವಾ 'ಕ್ಲೆಯೋಫ'. ಈತ ಯೇಸುವಿನ ಸಾಕುತಂದೆಯಾದ
ಜೋಸೆಫನ ಸಹೋದರ ಎನ್ನಲಾಗುತ್ತಿದೆ. ಯೇಸುವಿನ
ಸಹೋದರರೆಂದು ಹೇಳಲಾಗುವ ಯಕೋಬ, ಯೋಸೆ, ಯೂದ
ಮತ್ತು ಸಿಮೋನ-ಈ ನಾಲ್ವರು
ಈಕೆಯ ಮಕ್ಕಳು. ಯೇಸು ಮರಣಹೊಂದಿ ಸಮಾಧಿ
ಮಾಡಿದ ಬಳಿಕ ಮೂರನೆಯ ದಿನ
ಮುಂಜಾವಿನ ವೇಳೆ ಮಗ್ದಲದ ಮರಿಯಳ
ಜೊತೆಗೆ ಸಮಾಧಿಯ ಬಳಿಗೆ ಬಂದವಳು
ಇದೇ ಮೇರಿ. ಪುನರುತ್ಥಾನರಾದ ಯೇಸು ಪ್ರಪ್ರಥಮ ಬಾರಿಗೆ ಮಗ್ದಲದ ಮರಿಯಳ
ಜೊತೆಗೆ ಕ್ಲೋಪನ ಹೆಂಡತಿ ಮೇರಿಗೂ
ಕಾಣಿಸಿಕೊಳ್ಳುತ್ತಾರೆ ಎಂಬುದು ಮತಾಯನ ಸುಸಂದೇಶ(28:9)ದಿಂದ ತಿಳಿದು ಬರುತ್ತದೆ.
4. ಯೇಸುವಿನ
ಆಪ್ತಶಿಷ್ಯರಾದ ಯೊವಾನ್ನ ಮತ್ತು ಅವನ
ಅಣ್ಣ ಯಕೋಬನ ತಾಯಿಯ ಹೆಸರು
ಮೇರಿ. ಈಕೆಯನ್ನು 'ಸಲೋಮೆ' ಎಂಬ ಹೆಸರಿನಿಂದಲೂ
ಕರೆಯಲಾಗುತ್ತದೆ. ಇವಳು ಜ಼ೆಬೆದೇಯನ ಹೆಂಡತಿ. ಯೇಸುವಿನ ಬಳಿಗೆ ತನ್ನ ಮಕ್ಕಳಾದ
ಯಕೋಬ ಮತ್ತು ಯೊವಾನ್ನರೊಂದಿಗೆ ಬಂದ
ಸಲೋಮೆಯು, ಯೇಸುವು ಸಿಂಹಾಸನಾರೂಢರಾಗುವಾಗ ತಮ್ಮ
ಮಕ್ಕಳಿಗೆ ಯೇಸುವಿನ ಎಡ ಮತ್ತ
ಬಲಭಾಗಗಳಲ್ಲಿ ಸ್ಥಾನ ನೀಡಬೇಕೆಂದು ಬೇಡಿಕೊಳ್ಳುತ್ತಾಳೆ(ಮತ್ತಾಯ 20:20).
ಮಾರ್ತಾ ಮತ್ತು ಮೇರಿ |
5. ಜೆರುಸಲೇಮಿನಿಂದ
ಕೇವಲ 2.5 ಕಿ.ಮೀ. ದೂರದಲ್ಲಿದೆ
ಬೆಥಾನಿ ಎಂಬ ಊರು. ಆ
ಊರಿನಲ್ಲಿ ಮಾರ್ತಾ ಮತ್ತು ಮೇರಿ
ಎಂಬ ಸಹೋದರಿಯರು ತನ್ನ ಸಹೋದರ ಲಾಜ಼ರನೊಂದಿಗೆ
ಇರುತ್ತಾರೆ. ಆ ಮೂವರೂ ಯೇಸುವಿಗೆ
ಅಚ್ಚುಮೆಚ್ಚಿನವರಾಗಿರುತ್ತಾರೆ(ಯೊವಾನ್ನ 11:5). ಯೇಸು ಒಮ್ಮೆ ಇವರ ಮನೆಗೆ ಭೇಟಿ
ನೀಡುತ್ತಾರೆ. ಆಗ ಮನೆಗೆ ಬಂದ
ಅತಿಥಿಯನ್ನು ಸತ್ಕರಿಸಲು ಮಾರ್ತಾ ಅಡಿಗೆ ಮಾಡುವುದರಲ್ಲಿ
ನಿರತಳಾದರೆ ಮೇರಿ ಯೇಸುವಿನ ಪಾದದ
ಬಳಿ ಕುಳಿತು ಯೇಸುವಿನ ಮಾತುಗಳನ್ನು
ಆಲಿಸುವುದರಲ್ಲಿ ತಲ್ಲೀನಳಾಗಿರುತ್ತಾಳೆ. ಅದನ್ನು ಕಂಡು ಮಾರ್ತಾ
ತನ್ನ ತಂಗಿ ಅಡಿಗೆಗೆ ಸಹಾಯ
ಮಾಡುತ್ತಿಲ್ಲವೆಂದು ಯೇಸುವಿನಲ್ಲಿ ದೂರುತ್ತಾಳೆ. ಯೇಸು ಅವಳು ಸರಿಯಾದುದನ್ನೇ ಆರಿಸಿದ್ದಾಳೆ
ಎನ್ನುತ್ತಾರೆ.
ಯೇಸು ಬೆಥಾನಿಯಾದಿಂದ ಬಹುದೂರದಲ್ಲಿದ್ದಾಗ ಲಾಜ಼ರನು ಅಸ್ವಸ್ಥನಾಗುತ್ತಾನೆ. ಈ
ವಿಷಯವನ್ನು ಮಾರ್ತಾ ಯೇಸುವಿಗೆ ತಿಳಿಸುತ್ತಾಳೆ. ಯೇಸು ಧಾವಿಸಿ ಬರುವಷ್ಟರಲ್ಲಿ ಲಾಜ಼ರನು
ಮೃತ್ಯುವನ್ನಪ್ಪಿ ಸಮಾಧಿ ಮಾಡಿ ನಾಲ್ಕು
ದಿನಗಳೇ ಕಳೆದು ಹೋಗಿರುತ್ತವೆ. ಬೆಥಾನಿಗೆ
ಬಂದ ಯೇಸುವನ್ನು ಆಗ ಸ್ವಾಗತಿಸಿದ್ದು ಮಾರ್ತ.
ತಕ್ಷಣವೇ ಆಕೆ ತನ್ನ ಸಹೋದರಿ
ಮೇರಿಗೂ ಸುದ್ದಿಯನ್ನು ಮುಟ್ಟಿಸುತ್ತಾಳೆ. ಓಡಿ
ಬಂದ ಮೇರಿ ಯೇಸುವಿನ ಕಾಲಿಗೆ
ಬಿದ್ದು, "ಪ್ರಭುವೇ, ನೀವಿಲ್ಲಿದ್ದಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ,"
ಎನ್ನುತ್ತಾಳೆ (ಯೊವಾನ್ನ11:32). ಯೇಸು ಕಣ್ಣೀರನ್ನು ಮಿಡಿದು,
ಸಮಾಧಿಯ ಬಳಿಗೆ ನಡೆದು ಕಲ್ಲನ್ನು
ತೆಗೆದು ಹಾಕುವಂತೆ ಆಜ್ಞಾಪಿಸಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ಬಳಿಕ ಗಟ್ಟಿಯಾದ ಧ್ವನಿಯಲ್ಲಿ,
"ಲಾಜ಼ರನೇ, ಹೊರಗೆ ಬಾ" ಎಂದು
ಕೂಗುತ್ತಾರೆ. ಹೀಗೆ ಮೇರಿ ಮತ್ತು
ಮಾರ್ತಳ ಸಹೋದರನು ಪುನರ್ಜೀವಂತನಾಗುತ್ತಾನೆ.
ಯೇಸುವಿನ ಕಾಲುಗಳಿಗೆ ತೈಲವನ್ನು ಹಚ್ಚಿ ತಲೆಗೂದಲಿನಿಂದ ಒರೆಸಿದವಳೂ ಇದೇ ಮೇರಿಯೇ(ಯೊವಾನ್ನ 12:3). ಆದರೆ ಲೂಕನ ಸುಸಂದೇಶದಲ್ಲಿ(7:36-38) ಪತಿತೆಯೊಬ್ಬಳು ಯೇಸುವಿನ ಕಾಲನ್ನು ಕಂಬನಿಯಿಂದ ತೊಳೆದು ತಲೆಗೂದಲಿನಿಂದ ಒರೆಸಿ ಸುಗಂಧತೈಲವನ್ನು ಹಚ್ಚಿದಳು ಎಂದಿದೆ. ಆದರೆ ಆಕೆ ಲಾಜ಼ರ್ ಮತ್ತು ಮಾರ್ತಾಳ ಸಹೋದರಿ ಮೇರಿಯಾಗಿರಲು ಸಾಧ್ಯವಿಲ್ಲ. ಜೊತೆಗೆ ಆಕೆಯ ಹೆಸರನ್ನು ಲೂಕನು ಸೂಚಿಸಿಲ್ಲ; ಅಲ್ಲದೆ ಆ ಘಟನೆ ಸಂಭವಿಸಿದ್ದು ಗಲಿಲೇಯದಲ್ಲಿ ಎಂಬುದು ಗಮನಿಸಬೇಕಾದ ಅಂಶ.
ಯೇಸುವಿನ ಕಾಲುಗಳಿಗೆ ತೈಲವನ್ನು ಹಚ್ಚಿ ತಲೆಗೂದಲಿನಿಂದ ಒರೆಸಿದವಳೂ ಇದೇ ಮೇರಿಯೇ(ಯೊವಾನ್ನ 12:3). ಆದರೆ ಲೂಕನ ಸುಸಂದೇಶದಲ್ಲಿ(7:36-38) ಪತಿತೆಯೊಬ್ಬಳು ಯೇಸುವಿನ ಕಾಲನ್ನು ಕಂಬನಿಯಿಂದ ತೊಳೆದು ತಲೆಗೂದಲಿನಿಂದ ಒರೆಸಿ ಸುಗಂಧತೈಲವನ್ನು ಹಚ್ಚಿದಳು ಎಂದಿದೆ. ಆದರೆ ಆಕೆ ಲಾಜ಼ರ್ ಮತ್ತು ಮಾರ್ತಾಳ ಸಹೋದರಿ ಮೇರಿಯಾಗಿರಲು ಸಾಧ್ಯವಿಲ್ಲ. ಜೊತೆಗೆ ಆಕೆಯ ಹೆಸರನ್ನು ಲೂಕನು ಸೂಚಿಸಿಲ್ಲ; ಅಲ್ಲದೆ ಆ ಘಟನೆ ಸಂಭವಿಸಿದ್ದು ಗಲಿಲೇಯದಲ್ಲಿ ಎಂಬುದು ಗಮನಿಸಬೇಕಾದ ಅಂಶ.
6. ಸುಸಂದೇಶಕರ್ತ
ಮಾರ್ಕನ ತಾಯಿಯ ಹೆಸರೂ ಸಹ 'ಮೇರಿ'.ಕ್ರೈಸ್ತ ವಿಶ್ವಾಸಿಗಳೂ ಪ್ರೇಷಿತರು ಸಭೆ ಸೇರುತ್ತಿದ್ದುದು ಈಕೆಯ
ಮನೆಯಲ್ಲೇ ಎಂಬುದು ಗಮನಾರ್ಹ. ಪೇತ್ರನು ಜೈಲಿನಿಂದ ಬಿಡುಗಡೆಯಾಗಿ
ಬಂದು ಸೇರಿದ್ದು ಈ ಮನೆಗೆ. ಎಲ್ಲದಕ್ಕೂ
ಮೊದಲು ಯೇಸು ತಮ್ಮ ಅಂತಿಮ
ಪಾಸ್ಕಭೋಜನವನ್ನು ಸ್ವೀಕರಿಸಲು ಆರಿಸಿಕೊಂಡ ಮನೆಯೂ ಈಕೆಯ ಮನೆಯೇ ಆಗಿರುತ್ತದೆ(ಮಾರ್ಕ 14:12-16. ಇಲ್ಲಿ ಕಂಡು ಬರುವ 'ನೀರಿನ ಕೊಡವನ್ನು ಹೊತ್ತವನು' ಮತ್ತಾರೂ ಅಲ್ಲ; ಸ್ವಯಂ ಮಾರ್ಕ ಎಂಬುದನ್ನು ಮಾರ್ಕನು ಸೂಚ್ಯವಾಗಿ ತಿಳಿಸಿದ್ದಾನೆ).