ಪಾಪಿರಸ್‌


ಈಜಿಪ್ಟಿನಲ್ಲಿ ಹರಿಯುವ ನದಿಯ ದಂಡೆಯಲ್ಲಿ ಬೆಳೆಯುವ ಜೊಂಡಿನಂತಹ ಗಿಡದ ಹೆಸರು 'ಪಾಪಿರಸ್‌'. ಜೊಂಡಿನ ತಿರುಳಿನಿಂದ ಕಾಗದವನ್ನು ತಯಾರಿಸುವ ವಿಧಾನ ಈಜಿಪ್ಟಿನ ಜನರಿಗೆ ಕರಗತವಾಗಿತ್ತು. ಅವರು ತಮ್ಮ ಆರಾಧ್ಯ ದೈವಗಳ ಚಿತ್ರಗಳನ್ನು ಬಿಡಿಸಲು ಬಳಸುತ್ತಿದ್ದುದು ಪಾಪಿರಸ್ನಿಂದ ತಯಾರಾದ ಕಾಗದಗಳನ್ನು. ಹೀಗೆ ಕಾಗದ ತಯಾರಿಕೆಯನ್ನು ಜಗತ್ತಿಗೆ ಮೊದಲು ತೋರಿಸಿಕೊಟ್ಟವರು ಈಜಿಪ್ಟಿನವರು.

ಅದನ್ನು ತಯಾರಿಸುವ ವಿಧಾನವೂ ವಿಶಿಷ್ಟವೇ! ಜೊಂಡನ್ನು ಕತ್ತರಿಸಿ ಅದರ ತಿರುಳನ್ನು ತೆಗೆದು ಗಟ್ಟಿಯೂ, ಸಮತಟ್ಟೂ, ನಯವೂ ಆದ ಹೊರಮೈಯಿರುವ ಹಲಗೆ ಅಥವಾ ವಸ್ತುವಿನ ಮೇಲೆ ಒಂದರ ಮೇಲೊಂದರಂತೆ ಎರಡು ಪದರಗಳಾಗಿ ಜೋಡಿಸಿಡುವುದು. ನಂತರ ಗಟ್ಟಿಯಾದ ವಸ್ತುವಿನಿಂದ ಹೊಡೆದು ಒಂದನ್ನೊಂದು ಬೆಸೆಯುವಂತೆ ಮಾಡಿ ಒಣಗಿಸುವುದು. ಹೀಗೆ ತಯಾರಾದ ಕಾಗದದ ಮೇಲೆ ವಿಶೇಷವಾಗಿ ತಯಾರಿಸಿದ ಮಸಿಯನ್ನು ಉಪಯೋಗಿಸಿ  ದಾಖಲೆಗಳನ್ನು ಬರೆದಿಡಲಾಗುತ್ತಿತ್ತು.


ಪಾಪಿರಸ್‌ ಹಾಳೆಗಳ ತಯಾರಿಕೆ
ಫಿನಿಷಿಯನ್ನರು ಸಹ ತಮ್ಮ ನಾಡಿನ ಜೌಗು ಪ್ರದೇಶಗಳಲ್ಲಿ ಹೇರಳವಾಗಿ ಬೆಳೆಯುತ್ತಿದ್ದ ಪಾಪಿರಸ್ಜೊಂಡನ್ನು ಕಂಡು ತಾವೂ ಕಾಗದವನ್ನು ತಯಾರಿಸಲು ಮುಂದಾದರು. ಅದು ವಿದೇಶಗಳಿಗೆ ರಪ್ತು ಮಾಡುವಷ್ಟು ದೊಡ್ಡ ಪ್ರಮಾಣದಲ್ಲೇ ತಯಾರಾಗತೊಡಗಿತು. ಹೀಗೆ ತಯಾರಾದ ಹಾಳೆಗಳಿಗೆ ‘ಪಾಪಿರಸ್‌ ಹಾಳೆ’ ಎನ್ನಲಾಗುತ್ತಿದ್ದು ಬಳಿಕ ಅದು ಆಂಗ್ಲ ಭಾಷೆಯಲ್ಲಿ ‘ಪೇಪರ್‌’ ಆಯಿತು.


ಫಿನಿಷಿಯಾದಲ್ಲಿ ತಯಾರಾದ ಈ ಕಾಗದಕ್ಕೆ ಹೆಚ್ಚಿನ ಬೇಡಿಕೆ ಬಂದದ್ದು ಗ್ರೀಸ್ ಮತ್ತು ರೋಮ್ ದೇಶಗಳಿಂದ. ಹಡಗಿನಲ್ಲಿ ಇತರ ದೇಶಗಳಿಗೆ ಸಾಗಿಸಲು ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಉದ್ಯಮವನ್ನು 'ಬೈಬ್ಲೋಸ್' ಎಂಬ ರೇವು ಪಟ್ಟಣದ ಬಳಿ ಸ್ಥಾಪಿಸಲಾಯಿತು. ಕ್ರೈಸ್ತರ 'ಪವಿತ್ರ ಗ್ರಂಥ'ವನ್ನು ಪ್ರಪ್ರಥಮವಾಗಿ ಸಿದ್ಧಪಡಿಸಲು ಕಾಗದವನ್ನೇ ಉಪಯೋಗಿಸಲಾಯಿತು. ಹಾಗಾಗಿ ಗ್ರಂಥಕ್ಕೆ ‘ಬೈಬಲ್‌’ ಎಂಬ ಹೆಸರು ಬಂತೆಂದು ಹೇಳಲಾಗುತ್ತಿದೆ. ಮೊದಲು ಅದನ್ನು ಗ್ರೀಕ್‌ ಭಾಷೆಯಲ್ಲಿ 'ಬಿಬ್ಲಿಯ' ಅಥವಾ ' ಬಿಬ್ಲಿಯ' ಎನ್ನಲಾಯಿತು. '-ಬಿಬ್ಲಿಯ'ವೇ ಮುಂದೆ  'ದಿ ಬೈಬಲ್' ಆಗಿ ಜನಪ್ರಿಯವಾಯಿತು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ