ಹೀಬ್ರೂ
ಭಾಷೆಯ ಈ ಪದದ ಅರ್ಥ
'ವಂಚಕ(ಆದಿ25:26)', 'ಹಿಮ್ಮಡಿಯನ್ನು
ಹಿಡಿದವನು' ಎಂಬ ಅರ್ಥಗಳನ್ನು ಬೈಬಲ್
ನೀಡುತ್ತದೆ. ತನ್ನ ಸೋದರ 'ಎಸಾವ(ಅರ್ಥ:ತುಂಬಾ ಕೂದಲುಳ್ಳ)'ನ ಹಿಮ್ಮಡಿಯನ್ನು ಹಿಡಿದು
ಹುಟ್ಟಿದ ಕಾರಣ ಅಥವಾ ಅವನಿಗೆ
ವಂಚನೆ ಮಾಡಿ ಅವನಿಂದ 'ಜ್ಯೇಷ್ಟತನ'ವನ್ನು ಕಿತ್ತುಕೊಂಡ ಕಾರಣಕ್ಕೆ
ಆ ಹೆಸರು ಬಂದಿರಬೇಕು.
ಇವನು 'ಇಸಾಕ ಮತ್ತು ರೆಬೆಕ್ಕ'ರ ಅವಳಿ ಮಕ್ಕಳಲ್ಲಿ
ಕಿರಿಯ. ರೆಬೆಕ್ಕಾಳಿಗೆ ಇವನ ಮೇಲೆ ಅಧಿಕ
ಪ್ರೀತಿಯಿತ್ತು.
ಯೇಸುವಿನ
ಸಾಕು ತಂದೆ 'ಜೋಸೆಫ'ನ
ತಂದೆಯ ಹೆಸರು ಸಹ 'ಯಕೋಬ'.
'ಯಕೋಬ' ಎಂಬ ಹೆಸರಿನಿಂದ ಹೊಸ
ಒಡಂಬಡಿಕೆಯಲ್ಲಿ ಮುಖ್ಯವಾಗಿ ಇಬ್ಬರು ವ್ಯಕ್ತಿಗಳು ನಮ್ಮ ಗಮನವನ್ನು
ಸೆಳೆಯುತ್ತಾರೆ.
1)
ಜೆಬೆದೇಯನ ಇಬ್ಬರು ಮಕ್ಕಳಲ್ಲಿ ಒಬ್ಬನ
ಹೆಸರು 'ಯಕೋಬ'. ತಾಯಿಯ ಹೆಸರು
ಸಲೋಮೆ. ಇವನು ಯೇಸುವಿನ ಪ್ರೇಷಿತ
ಹಾಗೂ ಅವರ ಆಪ್ತವಲಯದ ಮೂವರಲ್ಲಿ
ಓರ್ವ; ಇವನ ಸೋದರ 'ಯೊವಾನ್ನ'
ಹಾಗೂ 'ಸಿಮೋನ ಪೇತ್ರ' ಉಳಿದ
ಇಬ್ಬರು ಯೇಸುವಿನ ಪರಮಾಪ್ತರು. ಯೊವಾನ್ನ ಮತ್ತು ಯಕೋಬರಿಗೆ ಯೇಸು ಇಟ್ಟ ಹೆಸರು
'ಬೊವನೆರ್ಗಸ್' ಅಂದರೆ ಸಿಡಿಲಮರಿಗಳು(ಮಾರ್ಕ3:17), ಪ್ರಾಯಶಃ ತರುಣರೂ
ಆದ ಇವರಿಬ್ಬರೂ ಉತ್ಸಾಹ ಮತ್ತು ಹುಮ್ಮಸ್ಸಿನಿಂದ
ಕಾರ್ಯನಿರ್ವಹಿಸುತ್ತಿದ್ದ ಕಾರಣಕ್ಕೆ ಇರಬಹುದು. ಯಕೋಬನನ್ನು 'ಹಿರಿಯ ಯಕೋಬ' ಎಂದೂ
ಹೇಳಲಾಗುತ್ತದೆ. ಯೇಸುವಿನ ಹನ್ನೆರಡು ಮಂದಿ
ಪ್ರೇಷಿತರಲ್ಲಿ ಮೊದಲು ಹುತಾತ್ಮನಾಗುವವನು ಇವನೇ.
ಕ್ರಿ.ಶ.44ರಲ್ಲಿ ಹೆರೋದ್
ಅಗ್ರಿಪ್ಪನು ಇವನ ತಲೆಯನ್ನು ಖಡ್ಗದಿಂದ
ಕತ್ತರಿಸಲು ಆಜ್ಞಾಪಿಸುತ್ತಾನೆ.
2) ಯೇಸುವಿನ ಮಾತೆ ಮೇರಿಯ ಸಹೋದರಿಯ ನಾಲ್ಕು
ಮಕ್ಕಳಲ್ಲಿ ಓರ್ವನಾದ ಯಕೋಬನನ್ನು 'ಕಿರಿಯ
ಯಕೋಬ' ಎಂದೂ ಕರೆಯಲಾಗುತ್ತದೆ. ಇವನ
ಮೂವರು ಸಹೋದರರ ಹೆಸರು: ಯೋಸೆ,
ಸೈಮನ್ ಮತ್ತು ಯೂದ.
ಸೆರೆಮನೆಗೆ ಹಾಕಲ್ಪಟ್ಟ ಪೇತ್ರನನ್ನು ಹೆರೋದನ ಕೈಯಿಂದ ದೇವದೂತರು ಬಿಡುಗಡೆಗೊಳಿಸಿದಾಗ ಪೇತ್ರನು ನೇರವಾಗಿ ನಡೆದದ್ದು ಮಾರ್ಕನೆಂದು ಹೆಸರಾದ ಯೊವಾನ್ನನ ತಾಯಿಯ ಮನೆಗೆ. ಅಲ್ಲಿಗೆ ಧಾವಿಸಿದ ಪೇತ್ರನು ತಾನು ಬಿಡುಗಡೆಗೊಂಡ ಸುದ್ದಿಯನ್ನು ಯೇಸುವಿನ ಸಹೋದರ 6'ಯಕೋಬನಿಗೂ ಮತ್ತಿತರ ಸಹೋದರ'ರಿಗೂ ತಿಳಿಸುವಂತೆ ಹೇಳಿ ಅಲ್ಲಿಂದ ಹೊರಡುತ್ತಾನೆ. ಇದೇ ಯಕೋಬನು ಮುಂದೆ ಜೆರುಸಲೇಮಿನ ಧರ್ಮಾಧ್ಯಕ್ಷನೂ ಆಗುತ್ತಾನೆ. ಜೆರುಸಲೇಮಿನಲ್ಲಿ ಪೇತ್ರ, ಪೌಲ, ಬಾರ್ನಬರು ಸೇರಿದಂತೆ ಅನೇಕರು ಪಾಲ್ಗೊಂಡ 7ಸಮ್ಮೇಳನದಲ್ಲಿ ಅಂತಿಮ ತೀರ್ಮಾನವನ್ನು ಕೈಗೊಳ್ಳುವವನೂ ಯಕೋಬನೇ. ಪೌಲನು ಗಲಾತಿಯರಿಗೆ ಬರೆದ ಪತ್ರದಲ್ಲಿ ಪೇತ್ರ(ಕೇಫ) ಮತ್ತು ಯೊವಾನ್ನರೂ ಸೇರಿದಂತೆ ಯೇಸುವಿನ ಸೋದರ ಯಕೋಬನನ್ನು 8'ಸಭಾಸ್ಥಂಭ'ಗಳು ಎಂದು ಕರೆದಿದ್ದಾನೆ.
ಕ್ರೈಸ್ತ ಸಭೆಯೊಂದಕ್ಕೆ ಸ್ವಯಂ ಯಕೋಬನು ಬರೆದ ಪತ್ರದ ಪೀಠಿಕೆಯಲ್ಲಿ ತನ್ನನ್ನು 'ದೇವರ ಹಾಗೂ ಪ್ರಭು ಯೇಸುಕ್ರಿಸ್ತರ ದಾಸನಾದ ಯಕೋಬ' ಎಂದು ಹೇಳಿಕೊಂಡಿದ್ದಾನೆ. ಅವನು ಬರೆದ ಪತ್ರವು ಸ್ವಾರಸ್ಯಕರವಾಗಿಯೂ, ಮನೋಜ್ಞವಾಗಿಯೂ ಇದೆ.
ಕ್ರೈಸ್ತ ಸಭೆಯೊಂದಕ್ಕೆ ಸ್ವಯಂ ಯಕೋಬನು ಬರೆದ ಪತ್ರದ ಪೀಠಿಕೆಯಲ್ಲಿ ತನ್ನನ್ನು 'ದೇವರ ಹಾಗೂ ಪ್ರಭು ಯೇಸುಕ್ರಿಸ್ತರ ದಾಸನಾದ ಯಕೋಬ' ಎಂದು ಹೇಳಿಕೊಂಡಿದ್ದಾನೆ. ಅವನು ಬರೆದ ಪತ್ರವು ಸ್ವಾರಸ್ಯಕರವಾಗಿಯೂ, ಮನೋಜ್ಞವಾಗಿಯೂ ಇದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ