ಆಮೆನ್‌

ಇದು ಸಂಸ್ಕೃತದ 'ತಥಾಸ್ತು' ಎಂಬ ಪದದ ಬಳಕೆಯನ್ನು ಹೋಲುವ ಆಂಗ್ಲ ಮತ್ತು ಗ್ರೀಕ್ ಭಾಷೆಯ ಲಿಪ್ಯಂತರ ಪದ. ಮೂಲತಃ ಇದು ಹೀಬ್ರೂ ಭಾಷೆಯ ದೃಢೀಕರಣದ ಒಂದು ಘೋಷಣಾ ಪದ. ಸಾಮಾನ್ಯವಾಗಿ 'ಹಾಗೆಯೇ ಆಗಲಿ' ಅಥವಾ 'ಖಂಡಿತವಾಗಿಯೂ' ಎಂಬ ಅರ್ಥಗಳನ್ನು ಈ ಪದವು ಸೂಚಿಸುತ್ತದೆ. ಪದ ಬಳಕೆಯನ್ನು ಹೀಬ್ರೂ ಕ್ಯಾನೋನ್(ಹಳೆಯ ಒಡಂಬಡಿಕೆ) ಮತ್ತು ಹೊಸ ಒಡಂಬಡಿಕೆಗಳಲ್ಲೂ ಕಾಣಬಹುದಾಗಿದೆ.

ಹೀಬ್ರೂ ಜನಾಂಗವು ದಿನನಿತ್ಯದ ಪ್ರಾರ್ಥನೆಯ ವೇಳೆಯಲ್ಲಿ ಅಥವಾ ಸರ್ವೇಶ್ವರನನ್ನು ಕೀರ್ತಿಸಿ ಹಾಡುವಾಗ ಅಂತ್ಯದಲ್ಲಿ ಪದವನ್ನು ಬಳಸುತ್ತಾರೆ. ಈ ಪದಗಳ ಬಳಕೆಯನ್ನು ಪ್ರಾರ್ಥನೆ ಅಥವಾ ಕೀರ್ತನೆಗಳ ಅಂತ್ಯದಲ್ಲಿ ಬಳಸಿರುವುದನ್ನು 'ಹಳೆಯ ಒಡಂಬಡಿಕೆ'ಯ ಪೂರ್ವ ಕಾಲದ ಇತಿಹಾಸ ಮತ್ತು ಕೀರ್ತನೆಯ ಗ್ರಂಥಗಳಲ್ಲಿ  ಕಾಣಬಹುದು. ಇದನ್ನು 'ಸ್ತುತಿಯ ಪದ'ವಾಗಿಯೂ ಕೆಲವೆಡೆಗಳಲ್ಲಿ ಬಳಸಿರುವುದನ್ನು ಕಾಣಬಹುದು.

ಹೊಸ ಒಡಂಬಡಿಕೆ 'ಪ್ರಕಟಣೆ'ಯಲ್ಲಿ ಯೇಸುವನ್ನು ಪದವು ಪ್ರತಿನಿಧಿಸುತ್ತದೆ. ಅಂತೆಯೇ ಸ್ವರ್ಗೀಯ ಘಟನೆಯಲ್ಲಿ ಸೃಷ್ಟಿಗಳು ಯಜ್ಞದ ಕುರಿಮರಿಯನ್ನು ಹಾಡಿ ಸ್ತುತಿಸಿದ ಬಳಿಕ ಅಲ್ಲಿದ್ದ ನಾಲ್ಕು ಜೀವಿಗಳು ಹಾಗೂ ಇನ್ನೊಂದೆಡೆ ನಾಲ್ಕು ಜೀವಿಗಳ ಜೊತೆಗೆ ಅಲ್ಲಿದ್ದ ಸಭಾಸದರು 'ಅಮೆನ್‌' ಎಂದು ಹೇಳಿದರು ಎಂಬುದಾಗಿ ಪ್ರಕಟಣೆಯಲ್ಲಿ ಉಲ್ಲೇಖವಿದೆ. ಸಂತ ಪೌಲನು 'ದೇವರ ತಥಾಸ್ತು' ಎಂಬುದಾಗಿ ಪದ ಬಳಕೆಯನ್ನು ಮಾಡಿರುವುದು ಕೊರಿಂತಿಯರಿಗೆ ಬರೆದ ದ್ವಿತೀಯ ಪತ್ರದಲ್ಲಿ ಕಾಣಬಹುದು. ಪದದ ಬಳಕೆಯನ್ನು ಹೊಸ ಒಡಂಬಡಿಕೆಯಲ್ಲಿ; ವಿಶೇಷವಾಗಿ ಸಂತ ಪೌಲ(ಒಮ್ಮೆ ಪೇತ್ರ)ನು ಬರೆದ ಪತ್ರಗಳಲ್ಲಿ 'ಸ್ತುತಿ ಪದ'ವನ್ನಾಗಿಯೂ ಬಳಸಲ್ಪಟ್ಟಿರುವುದು ಕಂಡುಬರುತ್ತದೆ. 
ಇಸ್ಲಾಂ ಮತದಲ್ಲಿಯೂ  ಪದ(ಆಮಿನ್‌) ಬಳಕೆಯಲ್ಲಿದೆ.


ಉಲ್ಲೇಖ:
. ಸಂಖ್ಯಾ.5:22; 1ಅರಸು.1:36; ಯೆರೆ.11:5; 
. ಧರ್ಮೋ.27:15-26; 
. 1ಪೂರ್ವ.16:36; 
ಕೀರ್ತ.41:13, 72:19, 89:52, 106:48; 
ನೆಹೆ.8:6; 
. ಯೊ.ಪ್ರ.3:14; 
. ಯೊ.ಪ್ರ.5:14, 7:10-12; 
. ಕೊರಿಂ.1:19; 
. ರೋಮ.1:25; 16:27, ಎಫೆ. 3:21, 1ಪೇತ್ರ 4:11










ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ