ಬೈಬಲ್‌

ದೈವಿಕ ಸ್ಪೂರ್ತಿಯಿಂದ ಸೃಷ್ಟಿಸಲ್ಪಟ್ಟ ಪವಿತ್ರ ಕೃತಿ 'ಬೈಬಲ್‌' ಎಂಬುದು ಕ್ರೈಸ್ತವಿಶ್ವಾಸಿಗಳ ನಂಬುಗೆ. ಸಂತ ಪೌಲನು, 'ಪವಿತ್ರಗ್ರಂಥ ದೈವಪ್ರೇರಣೆಯಿಂದ ರಚಿತವಾದುದು. ಆದ್ದರಿಂದ ಅದು ಪ್ರಬೋಧನೆಗೂ ಖಂಡನೆಗೂ ತಿದ್ದುಪಡಿಗೂ ನೀತಿಬೋಧೆಗೂ ಉಪಯುಕ್ತವಾಗಿದೆ. ಅದರ ಮೂಲಕ ದೈವಭಕ್ತರು ಸಿದ್ಧರೂ ಸಕಲ ಸತ್ಕಾರ್ಯಗಳಿಗೆ ಸನ್ನದ್ಧರೂ ಆಗಬಲ್ಲರು'(2ತಿಮೋಥೇಯ16:17) ಎಂದಿದ್ದಾನೆ. ಇದೇ ಮಾತುಗಳನ್ನು ಸಂತ ಪೇತ್ರನು ಬೇರೊಂದು ರೀತಿಯಲ್ಲಿ ಪ್ರತಿಪಾದಿಸಿದ್ದಾನೆ; 'ಪವಿತ್ರಗ್ರಂಥದ ಯಾವ ಪ್ರವಾದನೆಯೂ ವೈಯುಕ್ತಿಕ ವ್ಯಾಖ್ಯಾನದ ವಿಷಯವಲ್ಲ. ಏಕೆಂದರೆ, ಅದರ ಯಾವ ಪ್ರವಾದನೆಯೂ ಎಂದೂ ಮಾನವ ಸಂಕಲ್ಪದಿಂದ ಬಂದುದಲ್ಲ; ಮನುಷ್ಯರು ಪವಿತ್ರಾತ್ಮರಿಂದ ಪ್ರೇರಿತರಾಗಿ ದೇವರಿಂದ ಪಡೆದ ವಾಕ್ಯವನ್ನೇ ಮಾತನಾಡಿದರು'(2ಪೇತ್ರ20:22) ಎಂದು.

ಪ್ರಸ್ತುತ ಬೈಬಲ್ಗ್ರಂಥವು ಯೆಹೂದ್ಯರ ಮತ್ತು ಅಖಂಡ ಕ್ರೈಸ್ತರ ಅತ್ಯಂತ ಪವಿತ್ರ ಗ್ರಂಥವೆನಿಸಿದೆ. ಮಧ್ಯಯುಗದ ಲತೀನ್ಭಾಷೆಯ 'ಬಿಬ್ಲಿಯ' ಎಂಬ ಪದದಿಂದ 'ಬೈಬಲ್' ಎಂಬ ಪದವು ಹುಟ್ಟಿದೆ. ಪುಟ್ಟದಾದ ಒಂದು ಗ್ರಂಥಾಲಯ ಎನಿಸುವಂತಿರುವ ಬೈಬಲ್ನಲ್ಲಿ ಸುಮಾರು 24ರಿಂದ 51 ಪುಸ್ತಕಗಳು(ವಿವಿಧ ಸಿಮೆಟಿಕ್ ಧರ್ಮಗಳ ಅನುಸಾರವಾಗಿ ಪುಸ್ತಕಗಳ ಸಂಖ್ಯೆಯಲ್ಲೂ ವ್ಯತ್ಯಾಸವಾಗುತ್ತದೆ) ಇವೆ.

'ಬೈಬಲ್‌' ಎಂಬ ಗ್ರಂಥವು ಅನೇಕ ಪುಸ್ತಕಗಳ ಸಂಗ್ರಹವಾದ ಒಂದು ಪವಿತ್ರ ಗ್ರಂಥ. ಬೈಬಲ್ಲಿನ ಪ್ರಪ್ರಥಮ ಐದು ಪುಸ್ತಕಗಳನ್ನು 'ಮೋಸೆಸ್ ಧರ್ಮಶಾಸ್ತ್ರ' ಅಥವಾ 'ಪೆಂಟಾಟ್ಯೂಕ್‌' ಅರ್ಥಾತ್‌ 'ಪಂಚಸುರುಳಿಗಳು' ಎಂದು ಕರೆಯುತ್ತಾರೆ. ತಜ್ಞರ ಅಭಿಪ್ರಾಯದಂತೆ ಸುರುಳಿಗಳ ರಚನೆಯಾದದ್ದು ಕ್ರಿ.ಪೂ. ಸುಮಾರು  1300ರಲ್ಲಿ. ಮುಂದಿನ ಕಾಲಘಟ್ಟಗಳಲ್ಲಿ ಇನ್ನಷ್ಟು ಪುಸ್ತಕಗಳು ಸೇರಿ 'ತನಾಖ್‌' ಎಂಬ ರೂಪವನ್ನು ತಾಳಿತು. ಇದನ್ನು ಹೀಬ್ರೂಗಳ ಬೈಬಲ್ಎಂದೂ ಕರೆಯಲಾಗುತ್ತದೆ. ಗ್ರಂಥವು ಕ್ರೈಸ್ತರ 'ಬೈಬಲ್' 'ಮೂಲಗ್ರಂಥ'ವಾಗಿದೆ.

ಗ್ರಂಥ ರೂಪವನ್ನು ತಾಳುವ ಮೊದಲು ಸುಮಾರು ಐದು ಸಾವಿರ ವರ್ಷಗಳಷ್ಟು ಪುರಾತನವೆನಿಸಿದ ಮೌಕಿಕಸಾಹಿತ್ಯ ರೂಪದ 'ತನಾಖ್‌ ‘ ಲಿಪಿಗಳ ಅನ್ವೇಷಣೆಯೊಂದಿಗೆ ಲಿಖಿತ ರೂಪವನ್ನು ತಾಳುತ್ತದೆ. ಭಾಗವು ಕ್ರೈಸ್ತರ ಬೈಬಲ್ನಲ್ಲಿನ 'ಹಳೆಯ ಒಡಂಬಡಿಕೆ'ಯಾಗಿದೆ. ಈ ಭಾಗದಲ್ಲಿ ಅಡಕಗೊಂಡ ಒಂದೆರಡು ಪುಸ್ತಕಗಳನ್ನು(ಉದಾ: ಡೇನಿಯಲ್‌, ಎಜ್ರಾ) ಹೊರತುಪಡಿಸಿದರೆ ಉಳಿದೆಲ್ಲಾ ಕೃತಿಗಳನ್ನೂ ಹೀಬ್ರೂ ಭಾಷೆಯಲ್ಲಿ ರಚಿಸಲಾಗಿದೆ. 'ಹಳೆಯ ಒಡಂಬಡಿಕೆ' ಮೂಲವೇರಬ್ಬಿನಿಕ್‌ ಕ್ಯಾನೋನ್‌ ‘.

ಕ್ರಿಸ್ತಪೂರ್ವದ ಇಸ್ರಯೇಲ್‌ ಜನಾಂಗದ ಚರಿತ್ರೆಯೂ ಆದ ಪೂರ್ವಾರ್ಧ ಭಾಗಕ್ಕೆ ಮುಂದೆ ಯೇಸುವಿನ ಜನನದಿಂದ ಆರಂಭವಾಗಿ ಮರಣದವರೆಗೂ ನಡೆದ ಘಟನೆಗಳಿಗೆ ಸಾಕ್ಷಿಯಾದ ಸುಸಂದೇಶಗಳ ಕೃತಿಗಳು, ಅನಂತರ ಕ್ರೈಸ್ತ ಧರ್ಮವು ಅನೇಕ ದಿಕ್ಕುಗಳಿಗೆ ಪಸರಿಸುವಂತೆ ಮಾಡುವಲ್ಲಿ ಶ್ರಮಿಸಿದ ಯೇಸುಕ್ರಿಸ್ತ ಅನುಯಾಯಿಗಳ ಪ್ರಯತ್ನಗಳ ಮತ್ತು ಆ ವೇಳೆಯಲ್ಲಿ ಸಂಭವಿಸಿದ ಅನೇಕ ಘಟನೆಗಳ ಕುರಿತು ಬರೆಯಲಾದ ಪುಸ್ತಕಗಳು, ಸುದೀರ್ಘ ಓಲೆಗಳು ಸೇರಿ ಆದಂತಹ ಸಂಗ್ರಹ ರೂಪವಾದ 'ಹೊಸಒಡಂಬಡಿಕೆ'ಯು ಬೈಬಲ್‌ನ ಉತ್ತರಾರ್ಧ ಭಾಗವಾಗಿ ಸೇರ್ಪಡೆಗೊಳ್ಳುತ್ತದೆ. ಒಟ್ಟು 27 ಕೃತಿಗಳು ಭಾಗದಲ್ಲಿ ಅಡಕಗೊಂಡಿವೆ. ಇದು ಕ್ರೈಸ್ತ ಮತವನ್ನು ಬಿಂಬಿಸುವ ಗ್ರಂಥವಾಗಿದ್ದು ಇದರಲ್ಲಿ ಅಡಕಗೊಂಡ ಕೃತಿಗಳನ್ನು ಪ್ರಮುಖವಾಗಿ ಗ್ರೀಕ್ಭಾಷೆಯಲ್ಲಿ ರಚಿಸಲಾಗಿದೆಬೈಬಲ್ ಎಂಬ ಪವಿತ್ರ ಗ್ರಂಥವನ್ನು ಪೂರ್ವಿಕ ಹಾಗು ನೂತನ ಜನಾಂಗಗಳ ನಡುವಿನ ಕೊಂಡಿ ಅಥವಾ ಸೇತುವೆಯೆಂದು ಕರೆಯಲಾಗುತ್ತದೆ.

'ಬೈಬಲ್‌' ಎಂಬ ಪದವು 'ಬೈಬ್ಲೋಸ್‌' ಎಂಬ ಗ್ರೀಕ್ಪದದಿಂದ ವ್ಯತ್ಪತ್ತಿಯಾದ ಪದ. ಬೈಬ್ಲೋಸ್ ಎಂಬುದು ಆಗಿನ ಫಿನಿಷಿಯಾದ ಒಂದು ಬಂದರು ಪಟ್ಟಣ. ಪಟ್ಟಣದಲ್ಲಿ 'ಪಾಪಿರಸ್‌' ಎಂಬ ಜೊಂಡಿನಿಂದ ಬರೆಯುವ ಹಾಳೆಗಳನ್ನು ಸಿದ್ಧಪಡಿಸಲಾಗುತ್ತಿತ್ತು. ಇಲ್ಲಿಂದ  ಸಿದ್ಧವಾಗಿ ಹೊರಬಂದ ಹಾಳೆಗಳ ಮೇಲೆ ಪವಿತ್ರಗ್ರಂಥವನ್ನು ರಚಿಸಿದ ಕಾರಣಕ್ಕೆ ಗ್ರಂಥಕ್ಕೆ 'ಬೈಬಲ್‌' ಎಂಬ ಹೆಸರು ಅಂಟಿಕೊಂಡಿತು. ಬೈಬಲ್ಹಲವಾರು ಪುಸ್ತಕಗಳ ಒಂದು ಸಂಕಲನವಾಗಿರುವುದರಿಂದ ಗ್ರಂಥಕ್ಕೆ ಲ್ಯಾಟಿನ್ಭಾಷೆಯಲ್ಲಿ 'ಬಿಬ್ಲಿಯ'(ಪುಸ್ತಕಗಳು) ಎಂದು ಹೇಳುವ ರೂಢಿ ಜಾರಿಗೆ ಬಂತು. ಇದನ್ನೇ ಇಂಗ್ಲಿಷ್ನಲ್ಲಿ ಬೈಬಲ್ಎಂದೂ ಕರೆಯಲಾಯಿತು. 'ಬೈಬಲ್‌' ಎಂಬ ಪದಕ್ಕೆ 'ಪುಸ್ತಕಗಳು (The Books)' ಅಥವಾ 'ಪುಸ್ತಕಗಳ ಸಂಗ್ರಹ' ಎಂಬ ಅರ್ಥವೂ ಇದೆ. ಮಧ್ಯಯುಗ ಮತ್ತು ನಂತರದ ಅವಧಿಯ ಲತೀನ್ ಭಾಷೆಯ ದಾಖಲೆಗಳಲ್ಲಿ 'ಬಿಬ್ಲಿಯ ಸಿರ್ಕಾ' ಅರ್ಥಾತ್ 'ಪವಿತ್ರ ಪುಸ್ತಕಗಳು' ಎಂಬ ಪದದ ಪ್ರಯೋಗವಿದೆ. ಮಾರ್ಕ್ ಹ್ಯಾಮಿಲ್ಟನ್ ಎಂಬ ಬೈಬಲ್ ವಿದ್ವಾಂಸ ಹೆಲೆನಿಸ್ಟಿಕ್ ಕಾಲದ ಯೆಹೂದ್ಯರು ತಮ್ಮ ಪವಿತ್ರ ಗ್ರಂಥಕ್ಕೆ '-ಬಿಬ್ಲಿಯ'(ಪುಸ್ತಕಗಳು) ಎಂಬ ನಾಣ್ಣುಡಿಯನ್ನು ಬಳಸುತ್ತಿದ್ದರು ಎಂಬುದಾಗಿ ದಾಖಲಿಸಿದ್ದಾನೆಬೈಬಲ್ ಅಥವಾ 'ಬಿಬ್ಲಿಯ' ಪದ ಬಳಕೆಯಾದದ್ದು ಕ್ರಿ..223 ನಂತರ ಎಂಬುದು ಸಂಶೋಧಕರಿಂದ ಬೆಳಕಿಗೆ ಬಂದ ಅಂಶ.

ಬೈಬಲ್‌ ನಡೆದು ಬಂದ ದಾರಿ:
ಸುಮಾರು 1000 ಪುಟಗಳಿರುವ ಬೃಹತ್ಗ್ರಂಥವಾದ ಬೈಬಲ್ನಡೆದು ಬಂದ ಹಾದಿ ನಿಜಕ್ಕೂ ರೋಚಕ. ಗ್ರಂಥದ ಒಂದೊಂದು ಕೃತಿಗಳೂ ವಿವಿಧ ಕಾಲಘಟ್ಟಗಳಲ್ಲಿ ವಿವಿಧ ಜನಾಂಗಗಳು ಬೇರೆ ಬೇರೆ ಸ್ಥಳಗಳಲ್ಲಿ ಕುಳಿತು ರಚಿಸಿದ್ದಾಗಿವೆ. ಕೃತಿಗಳನ್ನೆಲ್ಲಾ ಆಯ್ದು ಒಟ್ಟಿಗೆ ಸೇರಿಸಿ ರಚನೆಯಾದ ಗ್ರಂಥವೇ  'ತನಾಖ್'.

ಪುರಾತನ ಹಳೆಯ ಒಡಂಬಡಿಕೆ
ತನಾಖ್‌ ‘ ಮೊದಲ ಐದು ಕೃತಿಗಳು ರಚನೆಯಾದ ಕಾಲ ಯಾವುದು ಎಂಬುದನ್ನು ಸಂಶೋಧನೆಗ ಒಳಪಡಿಸಿದಾಗ ತಿಳಿದು ಬಂದದ್ದು ಇತಿಹಾಸಪೂರ್ವದ ದಿನಗಳು. ಆಗಿನ್ನೂ ಲಿಪಿಗಳು ಅಸ್ತಿತ್ವಕ್ಕೆ ಬಂದಿರಲೇ ಇಲ್ಲ. ಮಾತುಗಳನ್ನಾಡುತ್ತಿದ್ದರೂ ಅವುಗಳನ್ನು ದಾಖಲಿಸಲು ಸಾಧ್ಯವಾಗದ ಪರಿಸ್ಥಿತಿ. ಜನರು ಬಂಡೆಗಳ ಮೇಲೆ ತಮ್ಮದೇ ಶೈಲಿಯಲ್ಲಿ ಕೇವಲ ಚಿತ್ರಗಳನ್ನು ಬರೆದು ತಮ್ಮ ಮನಸ್ಸಿನ ಭಾವನೆಗಳನ್ನು ಪ್ರಕಟಿಸುತ್ತಿದ್ದ ಕಾಲ. ಆಗತನಾಖ್ ವಾಕ್ಯಗಳು ಪ್ರಚರಿಸುತ್ತಿದ್ದುದೇ ಮೌಖಿಕವಾಗಿ, ಬಾಯಿಯು ಮೂಲಕ; ಆಟದ ಮೈದಾನಗಳಲ್ಲಿ ಮಕ್ಕಳು ತಾವು ಕಲಿತು ತಂದಂತಹ ಹೊಸ ಹೊಸ ಪದ್ಯಗಳನ್ನೂ, ಒಗಟುಗಳನ್ನೂ, ಬುದ್ಧಿಚಾತುರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಒಬ್ಬರಿಂದೊಬ್ಬರಿಗೆ ಕಲಿಸುತ್ತಿದ್ದ ಅಥವಾ ಪಸರಿಸುತ್ತಿದ್ದ ರೀತಿಯಲ್ಲೇತನಾಖ್‌ ‘ ವಾಕ್ಯಗಳು ಒಬ್ಬರಿಂದೊಬ್ಬರಿಗೆ ಪ್ರಸಾರವಾಗುತ್ತಿದ್ದವು. ಸಾಮಾನ್ಯವಾಗಿ ಜನರು ಒಂದೆಡೆ ಕಲೆತಾಗ ಅಥವಾ ಅನೇಕರು ಒಂದೆಡೆ ಸೇರಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಇಲ್ಲವೇ ಸಂಜೆಗತ್ತಲು ಆವರಿಸುತ್ತಿದ್ದಂತೆ ನಿತ್ಯವೂ ಬೆಂಕಿಯನ್ನು ಒಡ್ಡಿ ಅದರ ಸುತ್ತ ಕುಳಿತುಕೊಳ್ಳುತ್ತಿದ್ದ ಸಂದರ್ಭಗಳಲ್ಲಿತನಾಖ್‌ ‘ ವಾಕ್ಯಗಳು ಪ್ರಸಾರವಾಗುತ್ತಿದ್ದವು. ಇಲ್ಲೊಂದು ಗಮನಾರ್ಹ ಸಂಗತಿಯಿದೆ. ಅದೆಂದರೆ ತಾವುತನಾಖ್‌ ‘ನ್ನು ಕಲಿಯುವಾಗ ಅದು 'ದೇವರವಾಕ್ಯ' ಎಂಬ ವಿಶೇಷ ಕಾಳಜಿಯಿಂದ ಅದನ್ನು ಜನರು ಕಲಿಯುತ್ತಿದ್ದರು ಹಾಗೂ ಇತರರಿಗೆ ಅವುಗಳನ್ನು ಪ್ರಸಾರ ಮಾಡುವಾಗ ಅಥವಾ ತಾವು ಕಲಿತ ಸಂಗತಿಗಳನ್ನು ಉಚ್ಛರಿಸುವಾಗ ಕಲಿತ ವಿಷಯಗಳನ್ನು ಹೊರತುಪಡಿಸಿ ಬೇರೆ ಸಂಗತಿಗಳನ್ನು ಹೇಳುತ್ತಿರಲಿಲ್ಲ. ಕಲಿತ ಪದಗಳನ್ನಷ್ಟೆ ಉಚ್ಚರಿಸುತ್ತಿದ್ದರು. ಹೊಸ ಪದಗಳು ಎಲ್ಲೂ ಸೇರುತ್ತಿರಲಿಲ್ಲ. ಹಳೆಯ ಪದಗಳು ಬಿಟ್ಟು ಹೋಗುತ್ತಿರಲಿಲ್ಲ. ಅಷ್ಟು ಮುತುವರ್ಜಿಯನ್ನು ವಹಿಸಿ ಅತ್ಯಂತ ಭಯ ಮತ್ತು ಭಕ್ತಿಯಿಂದ ವಾಕ್ಯಗಳನ್ನು ಉಚ್ಚರಿಸುತ್ತಿದ್ದರು. ನಂತರ ಲಿಪಿಗಳು ಬಳಕೆಗೆ ಬಂದವು.
ಪುರಾತನ ಹೊಸ ಒಡಂಬಡಿಕೆ

ಅನೇಕ ವರ್ಷಗಳ ಸತತ ಪ್ರಯತ್ನಗಳ ನಂತರ ಲಿಪಿಯ ರೂಪದತನಾಖ್ಗ್ರಂಥ ಪ್ರಕಟವಾಯಿತು. ಮೊದಲು 'ಕ್ಯೂನಿಫಾರಂ' ಎಂಬ ಲಿಪಿಗಳಲ್ಲಿ ದೇವರವಾಕ್ಯಗಳನ್ನು ಬರೆದಿಡಲಾಗುತ್ತಿತ್ತು. ಬರೆಯುತ್ತಿದ್ದುದು ಜೇಡಿ ಮಣ್ಣಿನ ಹಲಗೆಗಳ ಮೇಲೆ. ಸಣ್ಣದಾದ ಉಳಿಗಳಂತಹ ಸಾಧನಗಳಿಂದ ಮಣ್ಣಿನ ಹಲಗೆಗಳ ಮೇಲೆ 'ಕ್ಯೂನಿಫಾರಂ' ಲಿಪಿಗಳನ್ನು ಕೆತ್ತಲಾಗುತ್ತಿತ್ತು. ಮುಂದೆ ಹೀಬ್ರೂ ಭಾಷೆಯ ಅವಿಷ್ಕಾರವಾದ ಮೇಲೆ ಉಳಿಗಳ ಬದಲು ಪಕ್ಷಿಗಳ ಗರಿಗಳನ್ನು ಉಪಯೋಗಿಸಿ ವಿಶೇಷ ಶಾಯಿಯಿಂದ ಬರೆಯುವ ಪರಂಪರೆ ಆರಂಭವಾಯಿತು. ಆಗ ದೇವರವಾಕ್ಯಗಳನ್ನು ಬರೆದಿಡುತ್ತಿದ್ದುದು ಹಸು, ಕುರಿ, ಒಂಟೆ ಮುಂತಾದ ಪ್ರಾಣಿಗಳ ಚರ್ಮವನ್ನು ಹೆರೆದು ತೆಳುವಾಗಿಸಿದ ಸುರುಳಿಗಳ ಮೇಲೆ ಬರೆಯಲಾಗುತ್ತಿತ್ತು. ಸ್ವರಾಕ್ಷರಗಳಿಲ್ಲದ ಕೇವಲ ವ್ಯಂಜನಾಕ್ಷರಗಳಿಂದ ಕೂಡಿದ ಪುರಾತನ ಹೀಬ್ರೂ ಭಾಷೆ ಓದುವುದಕ್ಕೆ ಅಷ್ಟು ಸುಲುಭವಾಗಿರಲಿಲ್ಲ. ಆದರೆ ಬರೆದಿರಿಸಿದ ವಾಕ್ಯಗಳನ್ನು ಓದಬೇಕಾದರೆ ಬಾಯಿಪಾಠ ಮಾಡಿದವರ ಸಹಾಯ ಬೇಕಾಗುತ್ತಿತ್ತು. ಬರೆದಿರಿಸಿದ ಪಠ್ಯವು ಮರೆತುಹೋದುದನ್ನು ನೆನಪಿಸುವ ಉಲ್ಲೇಖವಷ್ಟೆ ಆಗಿತ್ತು. ಸ್ವರಾಕ್ಷರಗಳ ಬಳಕೆಯಾಗುವವರೆಗೂ ಇದು ಹೀಗೆಯೇ ಸಾಗಿತು. ಮುಂದೆ ಪಾಪಿರಸ್ ಹಾಳೆಗಳೂ ಬಳಕೆಗೆ ಬಂದವು. ಅದರ ಮೇಲೆ ಅಚ್ಚುಕಟ್ಟಾಗಿ ಬರೆದಿಡುವ ವ್ಯವಸ್ಥೆ ಜಾರಿಗೆ ಬಂತು. ಅನೇಕ ಶತಮಾನಗಳ ಬಳಿಕ ಮುದ್ರಣ ಯಂತ್ರವನ್ನು ಕಂಡುಹಿಡಿದ ಬಳಿಕ ‘ಗುಟ್ಟೆನ್‌ಬರ್ಗ್‌ ‘ ಎಂಬಾತ ಮೊದಲು ಮುದ್ರಿಸಿದ್ದು ಬೈಬಲ್‌ ಗ್ರಂಥವನ್ನುೆಂಬುದು ಗಮನಾರ್ಹ. ಹೀಗೆ ದೇವರವಾಕ್ಯಗಳನ್ನು ದಾಖಲಿಸುವ ಕಾರ್ಯ ಹಂತಹಂತವಾಗಿ ಅನೇಕರೂಪಗಳನ್ನು ತಾಳಿ ಅಂತಿಮವಾಗಿ ಈಗಿರುವ ಎಲೆಕ್ಟ್ರಾನಿಕ್‌ ರೂಪಕ್ಕೆ ಬಂದು ತಲುಪಿದೆ.

1947ರಲ್ಲಿ ದೊರೆತ 'ಮೃತ್ಯು ಸರೋವರ ಸುರುಳಿಗಳು' ಎನ್ನಲಾಗುವ ಬೈಬಲ್ ಭಾಗವನ್ನು ಸಂಶೋಧನೆಗೆ ಒಳಪಡಿಸಿದಾಗ, ಸಮಯದಲ್ಲಿ ಲಭ್ಯವಿದ್ದ ಅತ್ಯಂತ ಪುರಾತನ ಬೈಬಲ್ಗ್ರಂಥಕ್ಕೂ ಮೃತ್ಯು ಸರೋವರದ ಸುರುಳಿಗಳಿಗೂ ನಡುವೆ ಸುಮಾರು ಒಂದು ಸಾವಿರ ವರ್ಷಗಳ ಅಂತರವಿರುವುದು ತಿಳಿದು ಬಂತು. ಆದರೆ ನಂಬಲಾಗದಿದ್ದರೂ ನಂಬಲೇ ಬೇಕಾದ ಸಂಗತಿಯೆಂದರೆ ಸಾವಿರ ವರ್ಷಗಳಷ್ಟು ಹಳೆಯದಾದ ಮೃತ್ಯು ಸರೋವರ ಸುರುಳಿಯಲ್ಲಿರುವ ಪಠ್ಯಕ್ಕೂ ಮತ್ತು ಲಭ್ಯವಿದ್ದ ಬೈಬಲ್ ಪ್ರತಿಯಲ್ಲಿದ್ದ ಪಠ್ಯಕ್ಕೂ ಯಾವುದೇ ವ್ಯತ್ಯಾಸವಿರಲಿಲ್ಲ. ವ್ಯತ್ಯಾಸವಿದ್ದುದು ಕಾಗುಣಿತದ ತಪ್ಪುಗಳಷ್ಟೆ. ಇದು ಸಾವಿರ ವರ್ಷಗಳು ಸಂದರೂ ಬೈಬಲ್ ವಾಕ್ಯಗಳಲ್ಲಿ ಬದಲಾವಣೆಗಳಾಗುತ್ತಿರಲಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಇನ್ನಷ್ಟು ಕೃತಿಗಳು ಸೇರ್ಪಡೆಗೊಂಡವಾದರೂ ಮೂಲದಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ಹೊಸ ಒಡಂಬಡಿಕೆ ಎಂಬ ಭಾಗದಲ್ಲಿ ಕೊನೆಯದಾಗಿ ಸೇರ್ಪಡೆಯಾದದ್ದುಯೊವಾನ್ನನು ಬರೆದ ಪ್ರಕಟಣೆಗಳು’ ಮತ್ತು 'ಯೊವಾನ್ನನ ಸುಸಂದೇಶ' ಎಂಬ ಕೃತಿಗಳು. ‘ಪ್ರಕಟಣೆಗಳು’ ರಚನೆಯಾದದ್ದು ಕ್ರಿ.. 96ರಲ್ಲಾದರೆಯೊವಾನ್ನನ ಸುಸಂದೇಶ’ವು ಕ್ರಿ.. 98ರಲ್ಲಿ ರಚನೆಯಾಯಿತು. ಸುಸಂದೇಶಕರ್ತನೂ ಯೇಸುವಿನ ಆಪ್ತಶಿಷ್ಯನೂ ಆದ ಯೊವಾನ್ನನು ಮೃತನಾಗುವ ಕೆಲವು ವರ್ಷಗಳ ಮೊದಲು ರಚಿಸಿದ ಕೃತಿಗಳಿವು ಎಂಬುದೇ ಆ ಕೃತಿಗಳ ವೈಶಿಷ್ಟ್ಯ







ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ