ಸುನ್ನತಿ

ಯೆಹೂದ್ಯರಿಗೆ ಇದೊಂದು ಸಂಸ್ಕಾರವೂ ಹೌದು; ಹಬ್ಬವೂ ಹೌದು. ಗಂಡು ಮಕ್ಕಳ ಜನನಾಂಗದ ಮುಂದೊಗಲನ್ನು ವಿಧಿಪೂರ್ವಕವಾಗಿ ಕತ್ತರಿಸುವ ಮುಖೇನ ಈ ಸಂಸ್ಕಾರವನ್ನು ಮಾಡಲಾಗುತ್ತದೆ. ಯೇಸು ಹುಟ್ಟಿದ ಎಂಟನೆಯ ದಿನವೇ ಸುನ್ನತಿಯನ್ನು ಮಾಡಿ ಯೇಸು ಎಂಬ ಹೆಸರನ್ನು ನಾಮಕರಣ ಮಾಡಿದರು ಎನ್ನುತ್ತದೆ ಲೂಕನ ಸುಸಂದೇಶ(೨:೨೧). ಗಂಡುಮಗು ಹುಟ್ಟಿದ ಎಂಟನೆಯ ದಿನವೇ ಯೇಹೂದ್ಯರು ಸುನ್ನತಿಯನ್ನು ಮಾಡಿಸುತ್ತಿದ್ದರು ಎನ್ನುವುದಕ್ಕೆ ಇದೊಂದು ಪುರಾವೆ. ಇಸ್ಲಾಮಿಯರೂ ಇದನ್ನು ಕಟ್ಟುನಿಟ್ಟಾಗಿ ಆಚರಿಸುತ್ತಾರೆ. ಉಳಿದ ಕೆಲ ಜನಾಂಗಗಳ್ಲಿಯೂ ಈ ಆಚರಣೆಯನ್ನು ಮಾಡಲಾಗುತ್ತದೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ