'ನೆವೀಮ್''
ಎಂಬ ಹೀಬ್ರೂ ಪದದ ಅರ್ಥ
'ಪ್ರವಾದಿಗಳು' ಅಥವಾ 'ಪ್ರವರ್ತಕರು' ಎಂಬುದಾಗಿದೆ.
ಹೀಬ್ರೂ ಕ್ಯಾನೋನ್(ತನಾಖ್)ನ ಎರಡನೆಯ
ಭಾಗವಾದ ಇದನ್ನು ಎರಡು ಉಪಭಾಗಗಳಾಗಿ
ವಿಂಗಡಿಸಲಾಗಿದೆ. 'ನೆವೀಮ್ ರಿಶೋನಿಮ್'(ಪೂರ್ವಕಾಲದ
ಪ್ರವಾದಿಗಳು) ಮತ್ತು 'ನೆವೀಮ್ ಅಹರೋನಿಮ್'(ನಂತರದ ಪ್ರವಾದಿಗಳು). 'ಯೆಹೋಶುವ',
'ನ್ಯಾಯಸ್ಥಾಪಕರು', 'ಸಮುವೇಲ' ಮತ್ತು 'ಅರಸುಗಳು'
ಇವು ಪೂರ್ವಕಾಲದ ಪ್ರವಾದಿಗಳ ಉಪಭಾಗದಲ್ಲಿದ್ದರೆ; 'ಯೆಶಾಯ', 'ಯೆರೆಮೀಯ' ಮತ್ತು 'ಎಜ಼ೆಕೀಯೆಲ್' ಪ್ರವಾದಿಗಳ
ಕೃತಿಗಳ ಜೊತೆಗೆ 'ಹನ್ನೆರಡು ಕಿರಿಯ
ಪ್ರವಾದಿಗಳು' ಎಂಬ ಕೃತಿಯೂ ದ್ವಿತೀಯ
ಉಪವಿಭಾಗದಲ್ಲಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ