ಗಲಿಲೇಯ ಸಮುದ್ರ


ಇಸ್ರೇಲ್ನಾಡಿನ ಮಧ್ಯಭಾಗದಲ್ಲಿರುವ ಗಲಿಲೇಯವೆಂಬ ಪ್ರಾಂತಕ್ಕೆ ಹರಿದು ಬರುವ ಜೋರ್ಡನ್ಹೊಳೆಯು ಅಲ್ಲೊಂದು ವಿಶಾಲವಾದ ಸರೋವರವನ್ನು ಸೃಷ್ಟಿಸುತ್ತದೆ. ಅನಂತರ ಅದು ಮೃತ್ಯು ಸಮುದ್ರದತ್ತ ಹರಿದು ಹೋಗುತ್ತದೆ. ಗಲಿಲೇಯದ ಬಳಿ ಸೃಷ್ಟಿಯಾದ ಸರೋವರವನ್ನೇ 'ಗಲಿಲೇಯ ಸಮುದ್ರ'ವೆಂದು ಕರೆಯುತ್ತಾರೆ. ಇದೊಂದು ಸಿಹಿ ನೀರಿನ ಸರೋವರವಾಗಿದ್ದು ವರ್ಷದಲ್ಲೊಮ್ಮೆ ಮೇಲಿನ ಮತ್ತು ಕೆಳಗಿನ ನೀರೆಲ್ಲವೂ ಭೌತಿಕವಾಗಿ ಮಿಶ್ರಣಗೊಳ್ಳುವ 'ಮೋನೊಮಿಕ್ಟಿಕ್‌' ಗುಂಪಿಗೆ ಸೇರಿದ ಸರೋವರ ಇದಾಗಿದೆ. ಯೊವಾನ್ನ ಸುಸಂದೇಶದಲ್ಲಿ ಇದನ್ನು 'ತಿಬೇರಿಯ ಸಮುದ್ರ' ಎಂದು ಕರೆಯಲಾಗಿದೆ. ಲೂಕನು 'ಗೆನೆಸರೆತ್ಸರೋವರ' ಎಂದಿದ್ದಾನೆ, ಮತ್ತಾಯನು 'ಗಲಿಲೇಯ ಸಮುದ್ರ'ವೆಂಬ ಹೆಸರಿನಿಂದಲೇ ಕರೆದಿದ್ದಾನೆ. ಇವಲ್ಲದೆ ಸರೋವರಕ್ಕೆ 'ಕೆನ್ನೆರೆತ್ಸರೋವರ', 'ಗಿನೋಸೆರ್ಸಮುದ್ರ' ಎಂಬ ಹೆಸರುಗಳೂ ಇವೆ.
ಉಪಗ್ರಹದಿಂದ ಹಿಡಿದ ಚಿತ್ರದಲ್ಲಿ ಗಲಿಲೇಯ ಸಮುದ್ರ 

ಇದು ಉತ್ತರದಿಂದ ದಕ್ಷಿಣಕ್ಕೆ 21 ಕಿ.ಮೀ. ಉದ್ದವೂ, ಪಶ್ಚಿಮದಿಂದ ಪೂರ್ವಕ್ಕೆ 13 ಕಿ,ಮೀ ಅಗಲವೂ ಇದ್ದು; ಒಟ್ಟು ಇದರ  ವಿಸ್ತೀರ್ಣ 166.7 ಚದರ ಕಿ.ಮೀ. ಸಮುದ್ರಮಟ್ಟಕ್ಕಿಂತ ಅತ್ಯಂತ ತಗ್ಗಿನಲ್ಲಿರುವ ಭುವಿಯ ಸಿಹಿನೀರಿನ ಸರೋವರ ಇದಾಗಿದ್ದು ಸಮುದ್ರಮಟ್ಟದಿಂದ 209 ಮೀಟರ್ನಷ್ಟು ತಗ್ಗಿನಲ್ಲಿದೆ.  ಸರೋವರವು ಗೋಲಾನ್ಹೈಟ್ಸ್ಮತ್ತು ಗಲಿಲೇಯ ಪ್ರಾಂತಗಳ ನಡುವೆ ಇದ್ದು; ಇಸ್ರೇಲ್ ಈಶಾನ್ಯ ದಿಕ್ಕಿನಲ್ಲಿದೆ. 

ಯೇಸುವಿನ ಶಿಷ್ಯಂದಿರಲ್ಲಿ ಬೆಸ್ತರಾಗಿದ್ದ ನಾಲ್ವರು(ಸಿಮೋನ, ಆತನ ಸಹೋದರ ಅಂದ್ರೇಯ, ಯೊವಾನ್ನ ಮತ್ತು ಆತನ ಸಹೋದರ ಯಕೋಬ) ಶಿಷ್ಯರು ಇದೇ ಪ್ರಾಂತಕ್ಕೆ ಸೇರಿದವರಾಗಿದ್ದರು. ಯೇಸುವಿನ 'ಪರ್ವತ ಪ್ರಸಂಗ' ಬೋಧನೆಯಾದದ್ದು ಸರೋವರದ ಸಮೀಪದ ಉನ್ನತ ಪ್ರದೇಶದಲ್ಲೇ. ಐದು ಸಾವಿರ ಮಂದಿಗೆ ಊಟದ ವ್ಯವಸ್ಥೆಯಾದದ್ದೂ ಇದರ ಸನಿಹದಲ್ಲೇ. ಅನೇಕ ಬೋಧನೆಗಳು, ಪವಾಡಗಳು ನಡೆದದ್ದು ಸರೋವರದ ಸಮೀಪದಲ್ಲೇ. ಅಷ್ಟೇ ಅಲ್ಲದೆ ಯೇಸುನೀರಿನ ಮೇಲೆ ನಡೆದದ್ದು, ಬಿರುಗಾಳಿಯನ್ನು ಗದರಿಸಿ ಸುಮ್ಮನಾಗಿಸಿದ್ದು, ಪುನರುತ್ಥಾನರಾದ ಬಳಿಕ ಮುಂಜಾವಿನ ಕತ್ತಲಲ್ಲಿ ತಮ್ಮ ಏಳು ಮಂದಿ ಶಿಷ್ಯರ ಮುಂದೆ ಅಪರಿಚಿತನಂತೆ ಬಂದು ನಿಂತದ್ದು, ಯೇಸು ಶಿಲುಬೆಯ ಮರಣ ಹೊಂದಿದ ಬಳಿಕ ತಮ್ಮ ಕುಲಕಸುಬಿಗಿಳಿದ ಶಿಷ್ಯರು ರಾತ್ರಿಯೆಲ್ಲಾ ಮೀನು ಸಿಗದೇ ಬಸವಳಿದಿದ್ದಾಗ ಅವರಿಗೆ ದೋಣಿಯ ಬಲಗಡೆಗೆ ಬಲೆಯನ್ನು ಬೀಸಲು ಹೇಳಿದ್ದು, ಅಪಾರವಾದ ಮೀನು ದೊರಕಿದ್ದೂ, ಈ ಸಂಭವಕ್ಕೆ ಕಾರಣವಾದದ್ದು  ಯೇಸು ಎಂದು ಶಿಷ್ಯರಿಗೆ ಅರಿವಾದದ್ದೂ ಸರೋವರದಲ್ಲೇ.


ಪ್ರಸ್ತುತ ಭಾಗದಲ್ಲಿ ವಾಸಿಸುವ ಜನರ ಅತ್ಯಂತ ದೊಡ್ಡ ಕುಡಿಯುವ ನೀರಿನ ಮೂಲವಾದ ಗಲಿಲೇಯ ಸಮುದ್ರವು ಮೆಡಿಟರೇನಿಯನ್ಸಮುದ್ರ ತೀರದಿಂದ ಪೂರ್ವಕ್ಕೆ 43 ಕಿ.ಮೀ. ದೂರದಲ್ಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ