ಹೀಬ್ರೂ ಬೈಬಲ್ |
'ತನಾಖ್'
ಇದು ಹೀಬ್ರೂ ಕ್ಯಾನೋನ್ನ
ನಿಜ ನಾಮಧೇಯ. 'ಮಿಕ್ರಾ', 'ಹೀಬ್ರೂ ಕ್ಯಾನೋನ್' ಅಥವಾ
'ರಬ್ಬಿನಿಕ್ ಕ್ಯಾನಾನ್' ಎಂಬ ಹೆಸರುಗಳಿಂದಲೂ ಕರೆಯಲಾಗುವ
ಈ ಗ್ರಂಥದಲ್ಲಿ ಅಡಕಗೊಂಡಿರುವ
ಬಹುತೇಕ ಪುಸ್ತಕಗಳನ್ನು ಪುರಾತನ 'ಹೀಬ್ರೂ' ಭಾಷೆಯಲ್ಲಿ
ಬರೆಯಲಾಗಿದ್ದರೆ ಕೆಲವು ಪುಸ್ತಕಗಳನ್ನು ಮತ್ತು
ಪುಸ್ತಕದ ಭಾಗಗಳನ್ನು ಮಾತ್ರ 'ಅರಾಮೈಕ್' ಭಾಷೆಯಲ್ಲಿ
ರಚಿಸಲಾಗಿದೆ. 'ತನಾಖ್'ನ ಅರ್ಥವೇನೆಂಬುದು
ಸರಿಯಾಗಿ ತಿಳಿದು ಬರದಿದ್ದರೂ ಪ್ರಾಯಶಃ
'ತೋರಾ', 'ನೆಬೀಮ್' ಮತ್ತು 'ಕೆತುವಿಮ್' ಎಂಬ
ಮೂರು ಭಾಗಗಳನ್ನಾಗಿ ಈ ಗ್ರಂಥವನ್ನು ವಿಂಗಡಿಸಲ್ಪಟ್ಟಿರುವ
ಕಾರಣಕ್ಕೆ ಆಯಾ ಭಾಗಗಳ ಮೊದಲಕ್ಷರಗಳನ್ನು
ತೆಗೆದುಕೊಂಡು 'ತನಾಖ್' ಎಂದು ಕರೆದಿರಬೇಕು ಎನ್ನುವುದು
ಬೈಬಲ್ ತಜ್ಞರ ಅಭಿಪ್ರಾಯ. ಸಾಮಾನ್ಯ
ಗ್ರೀಕ್ ಭಾಷೆಯಲ್ಲಿ ರಚಿಸಲ್ಪಟ್ಟ 'ಸೆಪ್ತುವಾಜಿಂತ್' ಗ್ರಂಥಕ್ಕೆ 'ಹೀಬ್ರೂ ಬೈಬಲ್' ಮೂಲಾಧಾರ.
'ಬೈಬಲ್'ನ 'ಮೂಲಗ್ರಂಥ'ವಾದ
'ತನಾಖ್'ಗೆ ಸುಮಾರು ಮೂರರಿಂದ
ನಾಲ್ಕು ಸಾವಿರ ವರ್ಷಗಳ ಇತಿಹಾಸವಿದೆ.
ಮುಂದಿನ ಕಾಲಘಟ್ಟಗಳಲ್ಲಿ ಇನ್ನಷ್ಟು ಪುಸ್ತಕಗಳು ಸೇರ್ಪಡೆಗೊಂಡು ಒಟ್ಟು ಗ್ರಂಥವೇ ಬೈಬಲ್ನ 'ಹಳೆಯ ಒಡಂಬಡಿಕೆ'
ಎಂಬ ರೂಪವನ್ನು ತಾಳಿದೆ. ಈ ಗ್ರಂಥವು
ಕ್ರಿಸ್ತಪೂರ್ವದ ಇಸ್ರೇಲ್ ಜನಾಂಗದ ಚರಿತ್ರೆಯೂ
ಹೌದು!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ