ಇದು
ಬೈಬಲ್ನ ದ್ವಿತೀಯಾರ್ಧ ಭಾಗ.
ಯೇಸುಕ್ರಿಸ್ತರ ಹುಟ್ಟು, ಬೆಳವಣಿಗೆ, ಶಿಷ್ಯರ
ಆಯ್ಕೆ, ಅವರಿತ್ತ ಪ್ರಬೋಧನೆಗಳು, ಅವರು
ಸಂಚರಿಸಿದ ಸ್ಥಳಗಳು, ಮಾಡಿದ ಪವಾಡಗಳಿಂದ ಹಿಡಿದು
ಶಿಲುಬೆಯ ಮರಣದವರೆಗಿನ ವಿವರಗಳನ್ನು ನೀಡಬಲ್ಲ ಕೃತಿಗಳು; ಯೇಸುವಿನ
ಮರಣಾನಂತರ ಅವರ ಶಿಷ್ಯರು ಪವಿತ್ರಾತ್ಮಭರಿತರಾಗಿ
ಜಗತ್ತಿನ ನಾನಾ ಭಾಗಗಳಲ್ಲಿ ಸಂಚರಿಸಿ
ಸಾರಿದ ಧರ್ಮಪ್ರಚಾರದ ವಿವರಣೆಯುಳ್ಳ ಕೃತಿ, ಯೇಸುವಿನ ಶಿಷ್ಯರು
ಮತ್ತಿತರರು ವಿವಿಧ ಧರ್ಮಸಭೆಗಳಿಗೆ ಬರೆದ
ಪತ್ರಗಳು ಹಾಗೂ ಯೇಸುವಿನ ಆಪ್ತಶಿಷ್ಯ
ಯೊವಾನ್ನನಿಗೆ ಯೇಸುವು ನೀಡಿದ ದಿವ್ಯದರ್ಶನಗಳ
ಕುರಿತು ಬರೆದ ಪುಸ್ತಕಗಳನ್ನೊಳಗೊಂಡ ಗ್ರಂಥವೇ
ಹೊಸ ಒಡಂಬಡಿಕೆ. ಯೇಸು ದೇವರ ಹಾಗೂ
ತಮ್ಮ ಜನಾಂಗದ ಮಧ್ಯವರ್ತಿಯಾಗಿ ನಿಂತು
ನಡೆಸಿದ ಒಪ್ಪಂದವೇ ಈ ಹೊಸ ಒಡಂಬಡಿಕೆ
ಎನ್ನುವವರೂ ಇದ್ದಾರೆ. ಈ ಗ್ರಂಥದಲ್ಲಿ ಇಪ್ಪತ್ತೇಳು
ಕೃತಿಗಳು ಅಡಕಗೊಂಡಿವೆ. ಅವುಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಬಹುದು.
·
ಸುಸಂದೇಶಗಳು:
1.
ಮತ್ತಾಯನು
ಬರೆದ ಸುಸಂದೇಶ
2.
ಮಾರ್ಕನು
ಬರೆದ ಸುಸಂದೇಶ
3.
ಲೂಕನು
ಬರೆದ ಸುಸಂದೇಶ
4.
ಯೊವಾನ್ನನು
ಬರೆದ ಸುಸಂದೇಶ
·
ಪ್ರೇಷಿತರ
ಕ್ರಿಯಾಕಲಾಪಗಳು
·
ಪತ್ರಗಳು
1.
ಪೌಲನು
ರೋಮನರಿಗೆ ಬರೆದ ಪತ್ರ
2.
ಪೌಲನು
ಕೊರಿಂಥೀಯರಿಗೆ ಬರೆದ ಮೊದಲನೆಯ ಪತ್ರ
3.
ಪೌಲನು
ಕೊರಿಂಥೀಯರಿಗೆ ಬರೆದ ಎರಡನೆಯ ಪತ್ರ
4.
ಪೌಲನು
ಗಲಾತ್ಯರಿಗೆ ಬರೆದ ಪತ್ರ
5.
ಪೌಲನು
ಎಫೆಸದವರಿಗೆ ಬರೆದ ಪತ್ರ
6.
ಪೌಲನು
ಫಿಲಿಪ್ಪಿಯದರಿಗೆ ಬರೆದ ಪತ್ರ
7.
ಪೌಲನು
ಕೊಲೊಸ್ಸೆಯರಿಗೆ ಬರೆದ ಪತ್ರ
8.
ಪೌಲನು
ಥೆಸಲೋನಿಕದವರಿಗೆ ಬರೆದ ಮೊದಲನೆಯ ಪತ್ರ
9.
ಪೌಲನು
ಥೆಸಲೋನಿಕದವರಿಗೆ ಬರೆದ ಎರಡನೆಯ ಪತ್ರ
10.
ಪೌಲನು
ತಿಮೋಥೇಯನಿಗೆ ಬರೆದ ಮೊದಲನೆಯ ಪತ್ರ
11.
ಪೌಲನು
ತಿಮೋಥೇಯನಿಗೆ ಬರೆದ ಎರಡನೆಯ ಪತ್ರ
12.
ಪೌಲನು
ತೀತನಿಗೆ ಬರೆದ ಪತ್ರ
13.
ಪೌಲನು
ಫಿಲೆಮೋನನಿಗೆ ಬರೆದ ಪತ್ರ
14.
(ಪ್ರಾಯಶಃ
ಪೌಲನು) ಹಿಬ್ರಿಯರಿಗೆ ಬರೆದ ಪತ್ರ
15.
ಯಕೋಬನು
ಬರೆದ ಪತ್ರ
16.
ಪೇತ್ರನು
ಬರೆದ ಮೊದಲನೆಯ ಪತ್ರ
17.
ಪೇತ್ರನು
ಬರೆದ ಎರಡನೆಯ ಪತ್ರ
18.
ಯೊವಾನ್ನನು
ಬರೆದ ಮೊದಲನೆಯ ಪತ್ರ
19.
ಯೊವಾನ್ನನು
ಬರೆದ ಎರಡನೆಯ ಪತ್ರ
20.
ಯೂದನು
ಬರೆದ ಪತ್ರ
·
ಯೊವಾನ್ನನು
ಕಂಡ ದಿವ್ಯದರ್ಶನಗಳ ಪ್ರಕಟಣೆಗಳು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ