ಜಗತ್ತಿನಲ್ಲಿ
ಅನೇಕ ಧರ್ಮಗಳ ಬೆಳವಣಿಗೆ ಮತ್ತು
ಅವುಗಳ ಉತ್ತಮ ಸಾಮಾಜಿಕ ಸ್ಥಿತಿಗತಿಗಳಿಗೆ
ಆಧಾರಸ್ಥಂಭವಾದುದು ಆಯಾ ಧರ್ಮಗಳ ಪವಿತ್ರಗ್ರಂಥಗಳು.
ಯೆಹೂದ್ಯರ 'ತನಾಖ್', 'ತಾಲ್ಮುದ್'ಗಳು, ಹಿಂದೂಗಳ 'ವೇದ',
'ಉಪನಿಷತ್ 'ಗಳೂ, ಸಿಕ್ಕರ 'ಗ್ರಂಥಾಸಾಹೆಬ್
', ಅಥವಾ 'ಆದಿಗ್ರಂಥ' ಮುಂತಾದವು ಆಯಾ ಜನಾಂಗಗಳ ಅಥವಾ
ಅವರ ಧರ್ಮಗಳ ಪವಿತ್ರ ಗ್ರಂಥಗಳಲ್ಲಿ
ಪ್ರಮುಖವಾದವು ಎಂದು ಪರಿಗಣಿಸಲ್ಪಟ್ಟಿವೆಯಲ್ಲದೇ, ವಿಶೇಷ ಸ್ಥಾನಮಾನಗಳನ್ನು
ಪಡೆದುಕೊಂಡಿವೆ.
ಅನೇಕ
ಧರ್ಮಗಳಲ್ಲಿ ಅವುಗಳ ಧಾರ್ಮಿಕ ಗ್ರಂಥಗಳನ್ನು
ಅತ್ಯಂತ ಪವಿತ್ರಗ್ರಂಥಗಳೆಂದು ಪರಿಗಣಿಸಲಾಗುತ್ತವೆ. ಕೆಲವು ಧರ್ಮಗಳಲ್ಲಂತೂ ಅವುಗಳನ್ನು
ದೈವಪ್ರೇರಿತ ಗ್ರಂಥಗಳೆಂದು ಭಾವಿಸಲಾಗುತ್ತವೆ. ' ತನಾಖ್', 'ಬೈಬಲ್', 'ಕುರಾನ್', 'ತಾವೋತೆಚಿಂಗ್', 'ಅನಲೆಕ್ಟ್', 'ಅವೆಸ್ತ', 'ಪಾಲಿ ತ್ರಿಪೀಟಿಕ'ಗಳೂ
ಕ್ರಮವಾಗಿ ಯೆಹೂದ್ಯರ, ಕ್ರೈಸ್ತರ, ಇಸ್ಲಾಮಿಯರ, ತಾವೋ, ಕನ್ಫೂಷ್ಯಸ್ರ,
ಫಾರ್ಸಿಗಳ, ಮತ್ತು ಬೌದ್ಧರ ಪವಿತ್ರ
ಗ್ರಂಥಗಳಾಗಿವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ