'ಕೆತುವಿಮ್' ಅರ್ಥಾತ್ ಬರಹಗಳು; ಇದು 'ತನಾಖ್'ನ ಅಂತಿಮ ಭಾಗ. 'ಕೆತುವಿಮ್' ಎಂಬ ಈ ಭಾಗವು ಹೀಬ್ರೂ ಕ್ಯಾನೋನ್‌ಗೆ ಸೇರ್ಪಡೆಯಾದದ್ದು ಬಹು ತಡವಾಗಿ ಅಂದರೆ ಕ್ರಿ.ಶ. 2ನೇ ಶತಮಾನದ ಉತ್ತರದಲ್ಲಿ ಎಂದು ಹೇಳಲಾಗುತ್ತಿದೆ. 'ಕೆತುವಿಮ್'ನಲ್ಲಿರುವ ಎರಡು ಕೃತಿಗಳನ್ನು ಹೊರತುಪಡಿಸಿದಂತೆ ಉಳಿದ ಕೃತಿಗಳೆಲ್ಲವೂ('ತೋರಾ' ಮತ್ತು 'ನೆವೀಮ್' ಎಂಬ ಭಾಗಗಳಲ್ಲಿರುವ ಕೃತಿಗಳೂ ಸೇರಿದಂತೆ) ರಚನೆಯಾದದ್ದು ಹೀಬ್ರೂ ಭಾಷೆಯಲ್ಲಿ.''ನೆಹೆಮೀಯ-ಎಜ್ರಾ' ಎಂಬ ಏಕಕೃತಿಯ 'ಎಜ್ರಾ' ಎಂಬ ಭಾಗವು ಮತ್ತು 'ದಾನಿಯೆಲ್' ಎಂಬ ಕೃತಿಯೂ ರಚನೆಯಾದದ್ದು 'ಅರಾಮೈಕ್' ಭಾಷೆಯಲ್ಲಿ. ಒಟ್ಟು ಹನ್ನೊಂದು ಕೃತಿಗಳು 'ಕೆತುವಿಮ್' ಎಂಬ ಮೂರನೆಯ ಭಾಗದಲ್ಲಿ ಸೇರಿವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ