ತೋರಾ

ಸುರುಳಿಯ ರೂಪದ ಪವಿತ್ರಗ್ರಂಥ
'ತೋರಾ' ಅಥವಾ ‘ತೋರಾಹ್‌’ ಎಂಬುದು ಹೀಬ್ರೂ ಕ್ಯಾನೋನ್‌(ತನಾಖ್‌)ನ ಮೊದಲ ಭಾಗ. ಪದದ ಅರ್ಥ, 'ಬೋಧನೆ' ಎಂಬುದಾಗಿದೆ. 'ತೋರಾ' ಅರ್ಥ 'ನಿಯಮ' ಎಂದು ಹೇಳುವವರೂ ಇದ್ದಾರೆ. ಅದೇನೇ ಇರಲಿ 'ಹೀಬ್ರೂ ಕ್ಯಾನೋನ್‌'(ಹಳೆಯ ಒಡಂಬಡಿಕೆ) ಪ್ರಥಮ ಐದು ಕೃತಿಗಳನ್ನು 'ತೋರಾ' ಎಂದು ಕರೆಯಲಾಗುತ್ತದೆ. ಅವುಗಳು ಕ್ರಮವಾಗಿ;

  1. ಆದಿಕಾಂಡ   (ಹೀಬ್ರೂ ಭಾಷೆಯಲ್ಲಿ 'ಬೆರೆಶಿತ್‌' ಅರ್ಥಾತ್‌ 'ಆರಂಭದಲ್ಲಿ')
  2. ವಿಮೋಚನಾ ಕಾಂಡ (ಹೀಬ್ರೂ ಭಾಷೆಯಲ್ಲಿ 'ಶಿಮೊತ್‌' ಅರ್ಥಾತ್‌ 'ನಾಮಗಳು')
  3. ಯಾಜಕಕಾಂಡ (ಹೀಬ್ರೂ ಭಾಷೆಯಲ್ಲಿ 'ವಾಯಿಕ್ರಾ' ಅರ್ಥಾತ್‌  'ಮತ್ತು ಆತನು ಕರೆದನು')
  4. ಸಂಖ್ಯಾಕಾಂಡ  (ಹೀಬ್ರೂ ಭಾಷೆಯಲ್ಲಿ 'ಬ-ಮಿದ್ಬರ್‌' ಅರ್ಥಾತ್‌ 'ಮರುಭೂಮಿಯಲ್ಲಿ')
  5. ಧರ್ಮೋಪದೇಶಕಾಂಡ (ಹೀಬ್ರೂ ಭಾಷೆಯಲ್ಲಿ 'ಡಿ'ವಾರಿಮ್‌' ಅರ್ಥಾತ್‌ 'ಪದಗಳು')

ಸುರುಳಿಯನ್ನು ಇರಿಸುವ ಚಿನ್ನದ ಕರಂಡಕ
'ತನಾಕ್' ಮೊದಲ ಭಾಗವಾದ 'ತೋರಾ' ಸುರುಳಿಗಳ ರೂಪದಲ್ಲಿರುವ ಕಾರಣ ಇವುಗಳನ್ನು Pentateuch (ಪಂಚಸುರುಳಿಎಂದೂ ಕರೆಯಲಾಗುತ್ತದೆ.

ಹೀಬ್ರೂಗಳ ಪವಿತ್ರಗ್ರಂಥದ ಪ್ರಪ್ರಥಮ ರೂಪವೇ 'ತೋರಾ' ಅಥವಾ 'ತೋರಾ ಆಫ್ ಮೋಸೆಸ್(ಮೋಸೆಸ್ ಬೋಧನೆಗಳು)'. ಇದನ್ನು ಚರ್ಮದ ತೆಳು ಹಾಳೆಯಿಂದ ಮಾಡಿದ ಉದ್ದನೆಯ ಸುರುಳಿಗಳ ಮೇಲೆ ಬರೆದಿಡಲಾಗಿದೆ. 'ತೋರಾ' ನಂತರದಲ್ಲಿ ಸೇರಿಕೊಂಡ ಭಾಗಗಳನ್ನು 'ನೆವೀಮ್' ಮತ್ತು 'ಕೆತುವಿಮ್' ಎಂದು ಕರೆಯಲಾಗುತ್ತವೆ.


ದೇವರು ಮೋಸೆಸ್ನಿಗೆ ದ್ವಿರೂಪದ 'ತೋರಾ'ಗಳನ್ನು ನೀಡಿದನೆಂದೂ, ಅವುಗಳು 'ಧ್ವನಿರೂಪದ 'ತೋರಾ'(ತೊರಹ್ ಶೆಬೆ'ಅಲ್ ಪೆಹ್) ಹಾಗೂ 'ಬರಹರೂಪದ ತೋರಾ'(ತೊರಹ್ ಶೆಬಿಖ್ತಾವ್) ಎಂದು ಹೇಳಲಾಗುತ್ತದೆ; ಇವುಗಳನ್ನು ಕ್ರಿ.ಪೂ.1312ರಲ್ಲಿ ಸಿನಾಯ್ ಪರ್ವತದ ಮೇಲೆ ದೇವರು ಮೋಸೆಸ್ನಿಗೆ ದಯಪಾಲಿಸಿದನೆಂದು 'ಫರಿಸೇಯ'ರೆಂಬ ಯೆಹೂದ್ಯರ ಒಂದು ಪಂಗಡದ ನಂಬಿಕೆ. ಕ್ರಿ.ಪೂ. 1000ಕ್ಕೂ ಹಿಂದೆಯೇ 'ತೋರಾ' ಎಂಬ ಭಾಗವು ಯೆಹೂದ್ಯರ 'ಪವಿತ್ರ ವಾಕ್ಯ' ರೂಪದಲ್ಲಿ ಬಳಕೆಯಲ್ಲಿತ್ತು. ತಲೆತಲಾಂತರದಿಂದ ಅದನ್ನು 'ದೇವರು ದಯಪಾಲಿಸಿದ ವಾಕ್ಯ' ಎಂದು ಭಯಭಕ್ತಿಯಿಂದ ಒಂದಕ್ಷರವೂ ತಪ್ಪಿಲ್ಲದಂತೆ ಕಂಠಪಾಠ ಮಾಡಿಟ್ಟುಕೊಂಡು ಹೇಳುವ, ಇತರರಿಗೆ ಕಲಿಸುವ ಅಥವಾ ವ್ಯಾಖ್ಯಾನಿಸುವ ಪದ್ಧತಿಯನ್ನು 'ಸದ್ದೂಕಾಯರು' ಎಂಬ ಯೆಹೂದ್ಯರ ಇನ್ನೊಂದು ಪಂಗಡವು ಅನುಸರಿಸಿಕೊಂಡು ಬರುತ್ತಿತ್ತು. ಪ್ರಸ್ತುತ ದೇವರು ಮೋಸೆಸನಿಗೆ ನೀಡಿದನೆನ್ನಲಾದ 'ಬರಹ ರೂಪದ 'ತೋರಾ' ಎಲ್ಲಿದೆ ಎಂಬುದು ತಿಳಿದು ಬಂದಿಲ್ಲ. ಒಂದು ಅಭಿಪ್ರಾಯದಂತೆ 'ಬರಹ ರೂಪದ 'ತೋರಾ'ವನ್ನುದಶಕಟ್ಟಳೆಗಳ ಫಲಕ’ಗಳೊಂದಿಗೆ ಮೋಸೆಸ್‌ ನಿರ್ಮಿಸಿದ ‘ದೇವರ  ಮಂಜೂಷ(ಒಂದು ವಿಶಿಷ್ಟ ಪೆಟ್ಟಿಗೆ)’ದಲ್ಲಿ ಇರಿಸಲಾಗಿದ್ದು ಈಗಿನ ಜೆರುಸಲೇಮಿ ಪ್ರಧಾನ ದೇವಾಲಯ ತಳಭಾಗದಲ್ಲಿ ಅದನ್ನು ಇರಿಸಲಾಗಿದೆ ಎಂಬ ಉಹಾಪೋಹಗಳಿವೆ.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ