ಸಮಾರಿತರು

ಒಳ್ಳೆಯ ಸಮಾರಿತ
ಇಸ್ರೇಲ್ರಾಜ್ಯದ ಉತ್ತರದ ಪರ್ವತ ಶ್ರೇಣಿಗಳಿಂದ ಕೂಡಿದ ಪ್ರದೇಶವೇ 'ಸಮಾರಿಯ'. ಇದು ಉತ್ತರದ 'ಜೆಜ್ರೀಲ್ಕಣಿವೆ' ಪೂರ್ವದ 'ಜೋರ್ಡನ್ ನದಿಯ ಕಣಿವೆ', ದಕ್ಷಿಣದ ಜೆರುಸಲೇಂ ಪರ್ವತಗಳು ಹಾಗೂ ಪಶ್ಚಿಮದ ಶರೋನ್ಬಯಲಿನಿಂದಲೂ ಆವೃತವಾಗಿದೆ. ಪ್ರದೇಶದ ನಿವಾಸಿಗಳನ್ನು 'ಸಮಾರಿತರು' ಎನ್ನಲಾಗುತ್ತದೆ

'ಸಮಾರಿತರು' ಎನ್ನುವ ಪದಕ್ಕೆ 'ಪೋಷಕರು' ಅಥವಾ 'ಕಾವಲುಗಾರರು' ಎನ್ನುವ ಅರ್ಥವಿದೆ. ಯೆಹೂದ್ಯ ಕುಲಕ್ಕೆ ನಿಕಟ ಸಂಬಂಧವಿರುವ ಇವರು ಕ್ರಿ.ಪೂ. 722ರಲ್ಲಿ ಇಸ್ರೇಲ್ರಾಜ್ಯವನ್ನು ಅಸ್ಸಿರಿಯನರಿಂದ ರಕ್ಷಿಸಿದವರೇ ತಾವು ಎನ್ನುತ್ತಾರಲ್ಲದೇ, ತಾವು ಲೇವಿಯ ಕುಲದ ಜೋಸೆಫನ ಮಕ್ಕಳಾದ ಎಫ್ರೈಮ್ಮತ್ತು ಮನಸ್ಸೆಯ ಪಂಗಡದಿಂದ ಬಂದವರು ಎಂದು ಪ್ರತಿಪಾದಿಸುತ್ತಾರೆ. ಸಮಾರಿತರನ್ನು 'ಕುತಿಯರು' ಎಂದು ಯೆಹೂದ್ಯರ ಪವಿತ್ರಶಾಸ್ತ್ರ 'ತಾಲ್ಮುದ್‌' ಹೇಳುತ್ತದೆ. ಇವರನ್ನು ಕುರಿತ, 'ಒಳ್ಳೆಯ ಸಮಾರಿತ' ಎಂಬ ಒಂದು ಸಾಮತಿಯನ್ನು ಯೇಸುಕ್ರಿಸ್ತರು ತಮ್ಮ ಶಿಷ್ಯರಿಗೆ ಬೋಧಿಸಿದ್ದರು. ಅದಕ್ಕೆ ಕಾರಣ ಯೆಹೂದ್ಯರು ಸಮಾರಿತರನ್ನು ಅತ್ಯಂತ ಕೀಳಾಗಿ ಕಾಣುತ್ತಿದ್ದುದು.


ಸಮಾರಿಯವೆಂಬ ಪ್ರದೇಶದಲ್ಲಿ ಯೆಹೂದ್ಯೇತರರೊಂದಿಗೆ ಒಟ್ಟಾಗಿ ಬಾಳುತ್ತಿದ್ದ; ಮೂಲತಃ ಯೆಹೂದ್ಯರೇ ಆಗಿದ್ದವರು ಸಮಾರಿತರು. ಯೆಹೂದ್ಯೇತರರನ್ನು ತುಚ್ಚವಾಗಿ ಕಾಣುವ ಯೆಹೂದ್ಯರು ಅನ್ಯರೊಂದಿಗೆ ಸಹಬಾಳ್ವೆಯನ್ನು ನಡೆಸುತ್ತಿದ್ದ ಕಾರಣಕ್ಕೆ ಸಮಾರಿಯದ ಯೆಹೂದ್ಯರನ್ನು ಕೀಳಾಗಿಯೂ, ಪರಕೀಯರಂತೆಯೂ ಕಂಡರು. ಸಮಾರಿಯಾದ ವಾಸಿಗಳಾದ ಅವರನ್ನು 'ಸಮಾರಿತರು' ಎಂದು ಮೂದಲಿಸಿದರು. ಯೇಸುವಿನ ಮರಣಾನಂತರ ಸಮಾರಿತರಲ್ಲಿ ಅನೇಕರು ಕ್ರೈಸ್ತಮತವನ್ನು ಅಪ್ಪಿಕೊಂಡರು. ನಂತರ 'ಇಸ್ಲಾಂ' ಮತ ಪ್ರವರ್ಧಮಾನಕ್ಕೆ ಬಂದಾಗ ಅವರಲ್ಲಿ ಅನೇಕರು 'ಇಸ್ಲಾಂ' ಮತದ ತೆಕ್ಕೆಗೂ ಹೋದರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ