ಒಳ್ಳೆಯ ಸಮಾರಿತ |
ದುಂದುಗಾರ ಮಗ |
‘ಸಾಮತಿ’
ಪದದ ಆಂಗ್ಲ ಪದವಾದ Parablesನ
ಮೂಲಪದ ಗ್ರೀಕ್ ಭಾಷೆಯ ‘parabole’. ಹೀಬ್ರೂ
ಭಾಷೆಯಲ್ಲಿ ಇದನ್ನು ‘ಮಿಶಲ್’ ಎನ್ನುತ್ತಾರೆ.
ಯೇಸು
ಹೇಳಿದ ಸಣ್ಣಸಣ್ಣ ಕತೆಗಳನ್ನು, ದೃಷ್ಟಾಂತಗಳನ್ನು, ಉಪಮೆಗಳನ್ನು ಸಾಮತಿಗಳು ಎನ್ನಲಾಗುತ್ತವೆ. ‘ಬೈಬಲ್’ನಲ್ಲಿರುವ ಸುಸಂದೇಶಗಳು ಎನ್ನುವ ಕೃತಿಗಳಲ್ಲಿ ಯೊವಾನ್ನನ
ಸುಸಂದೇಶವೊಂದನ್ನು ಹೊರತು ಪಡಿಸಿದಂತೆ ಉಳಿದೆಲ್ಲಾ
ಸುಸಂದೇಶಗಳಲ್ಲೂ ಯೇಸು ಹೇಳಿದ ಸಾಮತಿಗಳನ್ನು
ಕಾಣಬಹುದು. ತಮ್ಮ ಶಿಷ್ಯರಿಗೆ ‘ಸ್ವರ್ಗ
ಸಾಮ್ರಾಜ್ಯ, ‘ಪ್ರೀತಿ’ ಹಾಗೂ ‘ಪ್ರಾರ್ಥನೆ’ಯ ಮಹತ್ವವನ್ನು ಅರ್ಥವತ್ತಾದ
ರೀತಿಯಲ್ಲೂ, ಸ್ವಾರಸ್ಯಕರವಾಗಿಯೂ, ಮನಮುಟ್ಟುವಂತೆಯೂ ಸಣ್ಣಸಣ್ಣ ಕತೆಗಳನ್ನು, ದೃಷ್ಟಾಂತಗಳನ್ನು ಹೇಳುವ ಮೂಲಕ ಅವರ
ಮನಸ್ಸನ್ನು ತಲುಪುವಂತೆ ಯೇಸು ಮಾಡಿದ ಪ್ರಯತ್ನಗಳೇ
ಈ ಸಾಮತಿಗಳು. ಅವರ
ಬೋಧನೆಗಳಲ್ಲಿ ಸಾಮತಿಗಳು ಅತಿಮಹತ್ವದ ಪಾತ್ರ ವಹಿಸುತ್ತಿದ್ದವು.
ಅವರು ಹೇಳಿದ ಸಾಮತಿಗಳಲ್ಲಿ ಅತ್ಯಂತ
ಪ್ರಸಿದ್ಧವಾದವು, ‘ದುಂದುಗಾರ
ಮಗ’ ಮತ್ತು 'ಒಳ್ಳೆಯ ಸಮಾರಿತ'
ಎಂಬ ಎರಡು ಸಾಮತಿಗಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ