ಸಂತ ಯಕೋಬ, ಪ್ರೇಷಿತ

ಸುಸಂದೇಶಕರ್ತ ಯೊವಾನ್ನನ ಸಹೋದರನೂ ಜೆಬೆದೇಯ ಮತ್ತು ಸಲೋಮೆಯ ಮಗನೂ ಆದ ಯಕೋಬನು ಯೇಸುವಿನ ಹನ್ನೆರಡು ಮಂದಿ ಪ್ರೇಷಿತರಲ್ಲಿ ಒಬ್ಬ. ಊರು ಗಲಿಲೇಯ ಸಮುದ್ರ ತೀರದ ಬೆತ್ಸಾಯಿದ. ತಂದೆ ಮಕ್ಕಳೆಲ್ಲಾ ಬೆಸ್ತರು. ಮೀನುಗಾರಿಕೆ ಇವರ ಕಸುಬು. ಸಿಮೋನ್ಪೇತ್ರ ಮತ್ತು ಅವನ ಸಹೋದರ ಅಂದ್ರೆಯ ಇವರ ಮೀನುಗಾರಿಕೆಯ ಪಾಲುಗಾರರು. 'ಯಕೋಬ' ಎನ್ನುವುದು ಹೀಬ್ರೂ ಹೆಸರು. ಸೆಮೆಟಿಕ್ಪದಕ್ಕೆ 'ಹಿಮ್ಮಡಿಯನ್ನು ಹಿಡಿದವನು' ಎಂಬ ಅರ್ಥವಿದೆ. ಆಂಗ್ಲ ಭಾಷೆಯಲ್ಲಿ 'ಜೇಮ್ಸ್‌' ಎಂದು ಕರೆಯಲಾಗುತ್ತದೆ. ಇವನನ್ನು 'ಹಿರಿಯ' ಯಕೋಬ ಎಂದೂ ಹೆಸರಿಸಲಾಗುತ್ತಿದೆಯೇಸುವಿನ ಸಹೋದರ ಸಂಬಂಧಿಯೊಬ್ಬನ ಹೆಸರೂ ಯಕೋಬನಾಗಿರುವ ಕಾರಣದಿಂದಾಗಿ ಇವರಿಬ್ಬರನ್ನೂ ಪ್ರತ್ಯೇಕಿಸಲು ಹಿರಿಯನಾದ ಯಕೋಬನನ್ನು 'ಹಿರಿಯ' ಎಂಬ ವಿಶೇಷಣದೊಂದಿಗೆ ಕರೆದಿರಬಹುದಾದ ಸಾಧ್ಯತೆಯಿದೆ.

ಮೀನುಗಾರಿಕೆಯಲ್ಲಿ ಪಾಲುಗಾರರಾಗಿರುವ ನಾಲ್ವರೂ ಯೇಸುವಿನ ಕರೆ ಬಂದ ತಕ್ಷಣವೇ ತಮ್ಮ ಕುಲಕಸುಬನ್ನು ತೊರೆದು ಯೇಸುವನ್ನು ಹಿಂಬಾಲಿಸುತ್ತಾರೆ. ಅದರಲ್ಲೂ ಯೊವಾನ್ನ ಮತ್ತು ಯಕೋಬರಂತೂ ತಮ್ಮ ತಂದೆಯನ್ನೂ ತೊರೆದು ಹೊರಟುಬಿಡುತ್ತಾರೆ. ಯೇಸುವಿನ ಅತಿ ಆಪ್ತಶಿಷ್ಯರಲ್ಲಿ ಯಕೋಬನೂ ಒಬ್ಬ. ಉಳಿದವರು ಪೇತ್ರ ಮತ್ತು ಯೊವಾನ್ನ.

ತಾಬೋರ್ಬೆಟ್ಟದ ಮೇಲೆ ಯೇಸು ರೂಪಾಂತರಗೊಳ್ಳುವಾಗ, ಯಾಯಿರನ ಮಗಳನ್ನು ಬದುಕಿಸುವಾಗ, ಗೆತ್ಸೆಮನಿ ತೋಪಿನಲ್ಲಿ ಯೇಸು ಪ್ರಾರ್ಥಿಸುವ ಸಂದರ್ಭಗಳಲ್ಲಿ ಯೇಸುವಿಗೆ ಅತಿ ಸಮೀಪದಲ್ಲಿದ್ದ ಮೂವರು ಶಿಷ್ಯರಲ್ಲಿ ಯಕೋಬನೂ ಒಬ್ಬ. ಯಕೋಬ ಮತ್ತು ಅವನ ಸಹೋದರ ಯೊವಾನ್ನನನ್ನು ಯೇಸು, 'ಬೋವನೆರ್ಗೆಸ್‌' ಅಂದರೆ 'ಸಿಡಿಲಿನ ಮರಿಗಳು' ಅಥವಾ 'ಸಿಡಿಲಿನ ಮಕ್ಕಳು' ಎಂದು ಕರೆದಿರುವುದಾಗಿ ಮಾರ್ಕನ ಸುಸಂದೇಶ(3:17)ದಲ್ಲಿ ಕಂಡು ಬರುತ್ತದೆ. ಹನ್ನೆರಡು ಮಂದಿ ಶಿಷ್ಯರಲ್ಲಿ ಅತ್ಯಂತ ಕಿರಿಯವರೂ ಆದ ಇವರಿಬ್ಬರೂ ಪ್ರಾಯಶಃ ಅತ್ಯಂತ ಚಟುವಟಿಕೆಯಿಂದ, ತುಂಟತನದಿಂದ ಇದ್ದಿರಬೇಕು; ಕಾರಣದಿಂದಲೇ ಯೇಸು ಅವರಿಬ್ಬರನ್ನೂ 'ಬೊವನೆರ್ಗಸ್‌' ಎಂದಿರಬೇಕು.

ಹನ್ನೆರಡು ಮಂದಿ ಶಿಷ್ಯರಲ್ಲಿ ಯೇಸು ಮರಣಾನಂತರ ಯೇಸುವನ್ನು ಹಿಡಿದುಕೊಟ್ಟ ಇಸ್ಕಾರಿಯೋತ ಯೂದನು ಆತ್ಮಹತ್ಯೆ ಮಾಡಿಕೊಂಡನಾದರೆ. ಮೊದಲು ಹುತಾತ್ಮನಾದದ್ದು ಯಕೋಬ. ಯಕೋಬನಿಗಿಂತಲೂ ಮೊದಲು ಸ್ಟೀಫನನನ್ನು ಕೊಲ್ಲಲಾಯಿತಾದರೂ ಸ್ಟೀಫನನು ಯೇಸುವಿನ ಶಿಷ್ಯನಾಗಿರಲಿಲ್ಲ. ಕ್ರಿ.. 44ರಲ್ಲಿ ಮೊದಲನೆಯ ಹೆರೋದ ಅಗ್ರಿಪ್ಪನು ಯಕೋಬನನ್ನು ಕೊಲ್ಲಿಸುತ್ತಾನೆ(ಪ್ರೇಷಿತ 12:1-2). ಹುತಾತ್ಮನಾದ ಯಕೋಬನ ಅವಶೇಷಗಳನ್ನು ಸ್ಪೇನ್ 'ಕಂಪೊಸ್ತಲ" ಎಂಬಲ್ಲಿ ಸಂರಕ್ಷಿಸಿ ಇಡಲಾಗಿದೆ. ಸಂತ ಪಟ್ಟಕ್ಕೇರಿದ ಯಕೋಬನ ಸ್ಮರಣಾರ್ಥ ಪೌರ್ವಾತ್ಯ ಕ್ರೈಸ್ತರು ಏಪ್ರಿಲ್‌ 30ರಂದು ಹಬ್ಬವನ್ನು ಆಚರಿಸಿದರೆ, ಪಾಶ್ಚಿಮಾತ್ಯ ಕ್ರೈಸ್ತರು ಜುಲೈ 25ರಂದು ಹಬ್ಬವನ್ನು ಕೊಂಡಾಡುತ್ತಾರೆ. ಡಿಸೆಂಬರ್‌ 30ರಂದು ಸ್ಪಾನಿಷ್ಚರ್ಚ್‌‌ನವರು ವಿಶೇಷ ರೀತಿಯಲ್ಲಿ ಹಬ್ಬದ ಆಚರಣೆಯನ್ನು ಮಾಡುತ್ತಾರೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ