ಕ್ರೈಸ್ತರ
ಬೈಬಲ್ನ ಪೂರ್ವ ಅಥವಾ ಪ್ರಥಮ ಭಾಗವನ್ನು
'ಹಳೆಯ ಒಡಂಬಡಿಕೆ' ಎನ್ನಲಾಗುತ್ತದೆ. ಇದರಲ್ಲಿ ಪುರಾತನ ಇಸ್ರೇಲರು
ದೈವಪ್ರೇರಣೆಯಿಂದ ರಚಿಸಿದ ಅನೇಕ ಕೃತಿಗಳು
ಅಡಕಗೊಂಡಿವೆ. ಕ್ರೈಸ್ತರು ಮತ್ತು ಯೆಹೂದ್ಯರು ಇದರಲ್ಲಿರುವ
ಪ್ರತಿ ವಾಕ್ಯಗಳನ್ನೂ 'ದೇವರವಾಕ್ಯ'ವೆಂದೇ ಪರಿಗಣಿಸುತ್ತಾರೆ. ಕಥೋಲಿಕ
ಕ್ರೈಸ್ತರ ಬೈಬಲ್ಗಳಲ್ಲಿ ಒಟ್ಟು
52 ಕೃತಿಗಳು ಸೇರಿದ್ದರೆ, ಪ್ರೊಟೆಸ್ಟಂಟ್ ಕ್ರೈಸ್ತರ ಮತ್ತು ನೂತನ ಕ್ರೈಸ್ತ
ಪಂಗಡಗಳ ಬೈಬಲ್ನಲ್ಲಿ 39 ಪುಸ್ತಕಗಳಿವೆ.
ಪ್ರಸಕ್ತ
ಬೈಬಲ್ನ 'ಹಳೆ ಒಡಂಬಡಿಕೆ'
ಎಂಬ ಭಾಗವು ಮೂಲತಃ ಹೀಬ್ರೂಗಳ
ಪವಿತ್ರ ಗ್ರಂಥವಾದ ‘ತನಾಖ್’ ಆಗಿದೆ. ಇದು 24 ಪುಸ್ತಕಗಳ ಸಂಗ್ರಹವಾಗಿದೆ.
ಈ ಹೆಸರಿನ ಅರ್ಥವೇನೆಂಬುದರ
ಬಗ್ಗೆ ಅನೇಕ ಊಹಾಪೋಹಗಳಿದ್ದರೂ, ಗ್ರಂಥದಲ್ಲಿ
ಅಡಕಗೊಂಡಿರುವ ಮೂರು ಪ್ರತ್ಯೇಕ ಭಾಗಗಳಾದ
'ತೋರಾ', 'ನೆವೀಮ್' ಮತ್ತು 'ಕೆತುವಿಮ್'
ಎಂಬ ಹೀಬ್ರೂ ಪದಗಳ ಪ್ರಥಮಾಕ್ಷರಿಗಳು
ಸೇರಿ 'ತನಾಖ್ ' ಆಗಿದೆ ಎಂಬುದು ತಜ್ಞರ
ಅಭಿಪ್ರಾಯ. ಇದರ ಇನ್ನೊಂದು ಹೆಸರು,
'ರಬ್ಬಿನಿಕ್ ಕ್ಯಾನೊನ್'.
'ಆಂಶೀ
ನೆಸೆತ್ ಹಾ ಗೆದೊಲಾಹ್'(ಉನ್ನತ
ಸಮಿತಿಯ ಪ್ರಧಾನರು) ಅಥವಾ 'ದಿ ಗ್ರೇಟ್
ಸಿನಗೊಗ್' ಎಂದು ಕರೆಯಲ್ಪಡುವ ವಿಶೇಷ
ಸಮಿತಿಯು, ಈ ಗ್ರಂಥದ ಪಠ್ಯವನ್ನು
ಕ್ರಿ.ಪೂ.450ರಲ್ಲಿ ವಿವಿಧ
ಮೂಲಗಳಿಂದ ಸಂಗ್ರಹಿಸಿ, ಸಂಸ್ಕರಿಸಿ ಪವಿತ್ರೀಕರಿಸಿತು ಎಂಬುದು ದಾಖಲೆಗಳಿಂದ ತಿಳಿದು
ಬಂದ ಮಾಹಿತಿ. ಅನಂತರ ಇದರ ವಿವಿಧ
ಭಾಗಗಳನ್ನು ಒಟ್ಟಿಗೆ ಸೇರಿಸಿ ಒಂದೇ
ಗ್ರಂಥವಾಗಿ ಹೊರತರಲಾಯಿತು. ಈ ವಿಶೇಷ ಸಮಿತಿಯಲ್ಲಿ
ಮಹಾನ್ ಪಂಡಿತರೂ, ಪ್ರವಾದಿಗಳೂ, ಲಿಪಿಕಾರರೂ ಸೇರಿದಂತೆ 120 ಜನರು ಇದ್ದರಂತೆ. ಈ
ಸಮಿತಿಯಲ್ಲಿದ್ದ ಪಂಡಿತರೂ ಮತ್ತು ಪ್ರವಾದಿಗಳ
ಜೊತೆಗೆ ಅವರು ದೈವಪ್ರೇರಿತವೆಂದು ನಿರ್ಧರಿಸಿ
ಲಭ್ಯವಿರುವ ಪಠ್ಯವನ್ನು ಪಠಿಸಿ, ತಾವು ಈಗಾಗಲೇ
ಕಲಿತಿದ್ದ ವಾಕ್ಯಗಳೊಂದಿಗೆ ಅವುಗಳನ್ನು ಹೋಲಿಸಿ, ಅಂತಿಮವಾಗಿ ಉಚ್ಚರಿಸಿದ
ದೈವವಾಕ್ಯಗಳನ್ನು ದಾಖಲಿಸಲು ಮನೆಮಠಗಳನ್ನೂ ತೊರೆದು, ಐಹಿಕ ಸೌಭಾಗ್ಯಗಳನ್ನು
ತ್ಯಜಿಸಿ ಬಂದ ಲಿಪಿಕಾರರು ಇದ್ದರು.
ಇವರೆಲ್ಲರೂ ಸೇರಿ ಏಕಾಂತದಲ್ಲಿ, ಅನೇಕ
ವರ್ಷಗಳ ಕಠಿಣ ಶ್ರಮದಿಂದ ಸಿದ್ಧಗೊಳಿಸಿದ
ಪವಿತ್ರ ಧರ್ಮಗ್ರಂಥವೇ 'ತನಾಖ್ '. ಇದು ಪೂರ್ಣ ಪ್ರಮಾಣದ
ಗ್ರಂಥದ ರೂಪವನ್ನು ತಾಳಿದ್ದು ಯಾವಾಗ ಎಂಬುದು ನಿಖರವಾಗಿ
ತಿಳಿದು ಬರದಿದ್ದರೂ ಕ್ರಿ.ಪೂ.200 ಮತ್ತು
ಕ್ರಿ.ಶ.೩00ರ
ನಡುವೆ ಎಂಬ ಊಹೆಯಿದೆ. ಆದರೆ
ಈ ಗ್ರಂಥವನ್ನು ಸೃಷ್ಟಿಸಲೆಂದೇ
ಅಲ್ಲಿಗೆ ಬಂದು ಸೇರಿದವರಲ್ಲಿ ಅನೇಕರು
ಹೊರ ಜಗತ್ತನ್ನು ಮತ್ತೆ ಕಾಣಲೇ ಇಲ್ಲ
ಎಂಬುದೂ ಸುಳ್ಳಲ್ಲ. ಸಣ್ಣ
ವಯಸ್ಸಿನಲ್ಲೇ 'ಪವಿತ್ರ ಗ್ರಂಥ'ಕ್ಕಾಗಿ
ಮನೆಮಠಗಳನ್ನು ತೊರೆದವರು ಹೊರ ಜಗತ್ತಿಗೆ ಕಾಲಿರಿಸುವ
ವೇಳೆಗೆ ಅವರ ಬಂಧುಬಾಂಧವರೂ ಉಳಿದಿರರಲಿಲ್ಲ.
'ತನಾಖ್
'ನ ಮೊದಲ ಭಾಗವಾದ 'ತೊರಹ್'(ಬೋಧನೆ ಅಥವಾ ನಿಯಮ)
ಎಂಬುದು ಮೋಸೆಸನು ದೈವಪ್ರೇರಿತನಾಗಿ ರಚಿಸಿದ ಐದು
ಕೃತಿಗಳು ಎನ್ನಲಾಗುತ್ತಿದೆ. ಇವು ಕ್ರಮವಾಗಿ; 'ಬೆರೆಶಿತ್'(ಆದಿಕಾಂಡ), 'ಶೆಮೊತ್'(ವಿಮೋಚನಾ ಕಾಂಡ),
'ವಾಯಿಕ್ರ' (ಯಾಜಕಕಾಂಡ), 'ಬಮಿದ್ಬಾರ್'(ಸಂಖ್ಯಾಕಾಂಡ) ಮತ್ತು 'ದೆವರಿಮ್'(ಧರ್ಮೋಪದೇಶಕಾಂಡ)
ಎಂಬ ಪ್ರತ್ಯೇಕ ಕೃತಿಗಳು. ಇವು ಸುರುಳಿಗಳ ರೂಪದಲ್ಲಿರುವ
ಕಾರಣ ಇವುಗಳನ್ನು 'ಪೆಂಟಟ್ಯೂಕ್'(ಪಂಚಸುರುಳಿಗಳು) ಎಂದೂ ಕರೆಯಲಾಗುತ್ತದೆ.
1.
ಆದಿಕಾಂಡ
2.
ವಿಮೋಚನಾಕಾಂಡ
3.
ಯಾಜಕಕಾಂಡ
4.
ಸಂಖ್ಯಾಕಾಂಡ
5.
ಧರ್ಮೋಪದೇಶಕಾಂಡ
6.
ಯೊಹೋಶುವ
7.
ನ್ಯಾಯಸ್ಥಾಪಕರು
8.
ರೂತಳು
9.
ಸಮುವೇಲನು
ಭಾಗ-1
10.
ಸಮುವೇಲನು
ಭಾಗ-2
11.
ಅರಸುಗಳು
ಭಾಗ-1
12.
ಅರಸುಗಳು
ಭಾಗ-2
13.
ಪೂರ್ವಕಾಲದ
ವೃತ್ತಾಂತ ಭಾಗ-1
14.
ಪೂರ್ವಕಾಲದ
ವೃತ್ತಾಂತ ಭಾಗ-2
15.
ಎಜ್ರನು
16.
ನೆಹೆಮೀಯಾ
17.
ಎಸ್ತೆರಳು
18.
ಯೋಬನ
ಗ್ರಂಥ
19.
ಕೀರ್ತನೆಗಳು
20.
ಜ್ಞಾನೋಕ್ತಿಗಳು
21.
ಉಪದೇಷಕ
22.
ಪರಮಗೀತೆ
23.
ಪ್ರವಾದಿ
ಯೆಶಾಯನ ಗ್ರಂಥ
24.
ಪ್ರವಾದಿ
ಯೆರೆಮೀಯನ ಗ್ರಂಥ
25.
ಪ್ರಲಾಪಗಳು
26.
ಪ್ರವಾದಿ
ಯೆಜೆಕಿಯೇಲನ ಗ್ರಂಥ
27.
ಪ್ರವಾದಿ
ದಾನಿಯೇಲನ ಗ್ರಂಥ
28.
ಪ್ರವಾದಿ
ಹೊಶೇಯನ ಗ್ರಂಥ
29.
ಪ್ರವಾದಿ
ಯೊವೇಲನ ಗ್ರಂಥ
30.
ಪ್ರವಾದಿ
ಆಮೋಸನ ಗ್ರಂಥ
31.
ಪ್ರವಾದಿ
ಓಬದ್ಯನ ಗ್ರಂಥ
32.
ಪ್ರವಾದಿ
ಯೋನನ ಗ್ರಂಥ
33.
ಪ್ರವಾದಿ
ಮೀಕನ ಗ್ರಂಥ
34.
ಪ್ರವಾದಿ
ನಹೂಮನ ಗ್ರಂಥ
35.
ಪ್ರವಾದಿ
ಹಬಕ್ಕೂಕನ ಗ್ರಂಥ
36.
ಪ್ರವಾದಿ
ಜೆಫನ್ಯನ ಗ್ರಂಥ
37.
ಪ್ರವಾದಿ
ಹಗ್ಗಾಯನ ಗ್ರಂಥ
38.
ಪ್ರವಾದಿ
ಜೆಕರ್ಯನ ಗ್ರಂಥ
39.
ಪ್ರವಾದಿ
ಮಲಾಕಿಯನ ಗ್ರಂಥ
ಅನುಗ್ರಂಥಗಳು:
(ಪ್ರೊಟೆಸ್ಟಾಂಟರ ಬೈಬಲ್ನಲ್ಲಿ 13 ಪುಸ್ತಕಗಳನ್ನು
ನಂಬಿಕಾರ್ಹವಲ್ಲ(apocrypha) ಎಂಬ ಕಾರಣಕ್ಕೆ ಕೈಬಿಡಲಾಗಿದೆ)
ಅವು ಈ ಕೆಳಗಿನಂತೆ ಇವೆ;
1.
ತೊಬೀತನ
ಗ್ರಂಥ-1
2.
ತೊಬೀತನ
ಗ್ರಂಥ-2
3.
ಜೂಡಿತಳು
4.
ಎಸ್ತೇರಳು
5.
ಸೊಲೊಮೋನನ
ಜ್ಞಾನಗ್ರಂಥ
6.
ಸಿರಾಖನು
7.
ಬಾರೂಕನು
8.
ಪ್ರವಾದಿ
ಯೆರೆಮೀಯನ ಪತ್ರ
9.
ಅಜರ್ಯನ
ಗೀತೆ ಹಾಗು ಮೂವರು ಯುವಕರ
ಕೀರ್ತನೆ
10.
ಸುಸನ್ನಳ
ಗ್ರಂಥ
11.
ಬೇಲ್
ದೇವತೆ ಮತ್ತು ಘಟಸರ್ಪ
12.
ಮಕ್ಕಾಬಿಯರ
ಗ್ರಂಥ-1
13.
ಮಕ್ಕಾಬಿಯರ
ಗ್ರಂಥ-2
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ