'ಸಿಯೋನ್',
'ಚಿಯೋನ್' ಅಥವಾ 'ಜ಼ಿಯೋನ್' ಎಂಬ
ಈ ಪದಗಳ ಮೂಲ
ಯಾವುದೆಂದು ತಿಳಿದು ಬಂದಿಲ್ಲವಾದರೂ ಪ್ರಾಯಶಃ ಹೀಬ್ರೂ ಪದಗಳಾಗಿರಬೇಕು ಎನ್ನಲಾಗುತ್ತಿದೆ. ಇದರ ಅರ್ಥ 'ಎತ್ತರವಾದ ಸ್ಥಳ', ‘ಒಣನೆಲ’ ಅಥವಾ
'ಬಂಡೆ'ಗಳಾಗಿರಬೇಕು ಎನ್ನಲಾಗುತ್ತಿರುವ ಈ ಪದವು ಬೈಬಲ್ನಲ್ಲಿ
ಅನೇಕ ಕಡೆಗಳಲ್ಲಿ(ಹಳೆಯ ಒಡಂಬಡಿಕೆಯಲ್ಲಿ ೧೦೮ ಸಲ)
ಕಾಣಸಿಗುತ್ತದೆ. ಇದನ್ನು ಜೆರುಸಲೇಂ ನಗರದ ಸಮನಾರ್ಥಕ ಪದವಾಗಿಯೂ
ಬಳಸಲಾಗುತ್ತಿದೆ.
ಮೂಲತಃ
ದಾವೀದನ ನಗರವನ್ನು ಇದು ಸೂಚಿಸುತ್ತದೆ(೨ಸಮು.೫:೭). ಇದೊಂದು ಬೆಟ್ಟವಾಗಿದ್ದು ಇದರ ಮೇಲೆ ಯೆಬೂಸಿಯರ
ಕೋಟೆಯೊಂದಿದ್ದು ಅದನ್ನು ವಶಪಡಿಸಿಕೊಂಡ ದಾವೀದನು ಆ ಕೋಟೆಗೆ ‘ದಾವೀದನಗರ’ ಎಂದು ಹೆಸರಿಟ್ಟು ಅಲ್ಲಿಯೇ
ವಾಸಿಸುತ್ತಿದ್ದ(೨ಸಮು.೫:೯) ಎನ್ನುವ ವಿವರ ಬೈಬಲ್‌ನಲ್ಲಿದೆ. ಬಳಿಕ ಸಿಯೋನ್ ಎನ್ನುವುದು ಸಂಪೂರ್ಣ
ಜೆರುಸಲೇಮನ್ನು ಪ್ರತಿನಿಧಿಸತೊಡಗಿತು. ಪ್ರಸ್ತುತ ಜೆರುಸಲೇಮಿನ
ದಕ್ಷಿಣದ ಗೋಡೆಯ ನೈರುತ್ಯ ದಿಕ್ಕಿನಲ್ಲಿರುವ
ಎತ್ತರವಾದ ಪ್ರದೇಶವೇ ಈ ‘ಸಿಯೋನ್’.
'ಹೊಸ
ಒಡಂಬಡಿಕೆ'ಯಲ್ಲಿ ಈ ಪದವು,
'ದೇವಜನರು', 'ಧರ್ಮಸಭೆ' ಅಥವಾ 'ಸ್ವರ್ಗಸಾಮ್ರಾಜ್ಯ' ಎಂಬ
ಅರ್ಥಗಳನ್ನು ಸೂಚಿಸುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ