ಹೊಸಾನ್ನ

ಹೀಬ್ರೂ ಭಾಷೆಯಲ್ಲಿ 'ಹೊಶಾನ್ನ', ಲತೀನ್ಭಾಷೆಯಲ್ಲಿ 'ಒಸಾನ್ನ', ಅರಾಮೈಕ್ಭಾಷೆಯಲ್ಲಿ 'ಹೊಸಾನ್ನ' ಎಂಬ ಪದಗಳು, 'ನಮ್ಮನ್ನು ರಕ್ಷಿಸು ಪ್ರಭುವೇ', 'ನಮಗೆ ದಯೆತೋರಿ' ಎಂಬ ಅರ್ಥಗಳನ್ನು ನೀಡುತ್ತವೆ. ಇದನ್ನು ಜಯಕಾರವಾಗಿಯೂ ಕೆಲವು ಸಂದರ್ಭಗಳಲ್ಲಿ ಬಳಸಲಾಗು ತ್ತದೆ.

ಯೆಹೂದ್ಯರ ಗುಡಾರಗಳ ಹಬ್ಬದ ಏಳನೆಯ ದಿನದಂದು ಆಚರಿಸಲಾಗುವ 'ಹೊಸಾನ್ನ ರಬ್ಬಾಹ್‌''ನಂದು ಬೆಳಗಿನ ಪೂಜಾವಿಧಿಗಳ ವೇಳೆಯಲ್ಲಿ ಪದವನ್ನು ಉಚ್ಚರಿಸುತ್ತಾ ಯೆಹೂದ್ಯರು ರಕ್ಷಣೆಯನ್ನು ಕೋರುತ್ತಾರೆ. ಯೇಸು ಜೆರುಸಲೇಮನ್ನು ಅರಸರಂತೆ ಪ್ರವೇಶಿಸುವಾಗ ಪದವನ್ನು ಜೈಕಾರದ ರೂಪದಲ್ಲಿ ಬಳಸಲಾಗಿದೆ. ಮತ್ತಾಯನ ಸುಸಂದೇಶದಲ್ಲಿ ಇದು 'ದಾವೀದನ ಪುತ್ರನಿಗೆ ಹೊಸಾನ್ನ(ಮತ್ತಾ 21:9)' ಎಂದೂ, ಮಾರ್ಕನ ಸುಸಂದೇಶದಲ್ಲಿ, 'ಹೊಸಾನ್ನ, ಮಂಗಳವು ಸರ್ವೇಶ್ವರನ ನಾಮದಲ್ಲಿ ಬರುವವರಿಗೆ'(ಮಾರ್ಕ 11:9) ಎಂದೂ, ಉದ್ಧೃತವಾಗಿವೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ