ಬೆತ್ಲೆಹೆಮ್‌

'ಬೇತ್‌-ಲೆಹೇಮ್‌' ಅಥಾತ್‌ 'ರೊಟ್ಟಿಯ ಮನೆ.' ಒಂದೊಮ್ಮೆ ಶಾಂತಿಯ ತವರಾಗಿದ್ದ ನೆಲ; ಆದರಿಂದು ಅಶಾಂತಿಯ ಬೀಡಾಗಿದೆ. ದಾವೀದರಸನು ಇದ್ದುದು ಇಲ್ಲೇ. ದಾವೀದನಿಗೆ 'ಇಸ್ರಯೇಲ್ ' ಅರಸ'ನೆಂದು ಕಿರೀಟಧಾರಣೆಯಾದದ್ದು ಇದೇ ಸ್ಥಳದಲ್ಲಿ. ಪರಕೀಯಳಾದ ರೂತಳು ಬಂದು ನೆಲೆಸಿದ್ದು ಇಲ್ಲಿಯೇ. ಇಲ್ಲಿ ನೆಲೆಸಿದ ಬಳಿಕವಷ್ಟೆ ಆಕೆ ದಾವೀದ ಅಜ್ಜಿಯಾಗಲು ಸಾಧ್ಯವಾಗಿದ್ದು. ಅಷ್ಟೇ ಅಲ್ಲ; ಅದೆಲ್ಲಕ್ಕೂ ಮಿಗಿಲಾಗಿ ಯೇಸುವಿನ ಜನನವಾದದ್ದೂ ಇಲ್ಲಿಯೇ. ಅಂತೆಯೇ ಯೇಸುವನ್ನು ಕೊಲ್ಲಲು ಹೆರೋದನು ಸೈನಿಕರನ್ನು ಕಳುಹಿಸಿ ಅನೇಕ ಹಸುಗೂಸುಗಳ ಮಾರಣಹೋಮಕ್ಕೆ ಕಾರಣವಾದದ್ದೂ ಸ್ಥಳವೇ. ಪ್ಯಾಲೇಸ್ತೀನಿನ  ಪಶ್ಚಿಮ ದಂಡೆಗೆ ಸೇರಿದ ಪ್ರದೇಶದಲ್ಲಿ ಪಟ್ಟಣವಿದ್ದು ಪ್ರಸ್ತುತ ಇದರ ಒಟ್ಟು ಜನಸಂಖ್ಯೆ ಅಂದಾಜು 30,000.

ಊರಿರುವ ಪ್ರದೇಶಕ್ಕೆ 'ಎಫ್ರಥಾ' ಎಂಬ ಹೆಸರಿತ್ತು. ಯಕೋಬನ ಪತ್ನಿ ರಾಖೇಲಳನ್ನು ಬೆತ್ಲೆಹೇಮೆಂಬ ಎಫ್ರಾತಿಗೆ ಹೋಗುವ ದಾರಿಯ ಪಕ್ಕದಲ್ಲಿ ಸಮಾಧಿ ಮಾಡಿದರು ಎಂದು ಹೇಳುತ್ತೆ ಹಳೆಯ ಒಡಂಬಡಿಕೆಯ ಆದಿಕಾಂಡ(35:19). ಯೇಸು ಹುಟ್ಟುವ ಮೊದಲು ಇದು ಅಂತಹ ಪ್ರಾಮುಖ್ಯತೆಯನ್ನು ಪಡೆದಿರಲಿಲ್ಲ. ಅಲ್ಲದೆ ಬೆತ್ಲೆಹೆಮ್ಎಂಬ ಇನ್ನೊಂದು ಊರು ಜೆಬುಲನ್ಪ್ರಾಂತದ ಬಳಿಯಿದ್ದ ಕಾರಣಕ್ಕೆ ಇದನ್ನು ಗುರುತಿಸುವ ಸಲುವಾಗಿ ಅಲ್ಲಿರುವ ಪಂಗಡದ ಹೆಸರಾದ ಎಫ್ರಥಾ ಎಂಬ ಹೆಸರಿನಿಂದಲೂ ಕರೆದಿರಬಹುದಾದ ಸಾಧ್ಯತೆಯಿದೆ. ಊರನ್ನು ಕಟ್ಟಿಸಿದ್ದು ಕಾಲೇಬ ಮತ್ತು ಅವನ ಹೆಂಡತಿ ಎಫ್ರಥಾಳ ಚೊಚ್ಚಲ ಮಗ ಹೂರನ ಎರಡನೆಯ ಮಗ 'ಸಲ್ಮ' ಎನ್ನುತ್ತದೆ ಬೈಬಲ್‌.

ಚರ್ಚ್ ಆಫ್ ದಿ ನೇಟಿವಿಟಿ
ಬೆತ್ಲೆಹೇಮಿನಿಂದ ಉತ್ತರಕ್ಕೆ ಕೇವಲ ಒಂಬತ್ತು ಕಿಲೋಮೀಟರ್ನಷ್ಟು ದೂರದಲ್ಲಿ ಜೆರುಸಲೇಮ್ಇದೆ. ವಾಹನಗಳಲ್ಲಿ ಹತ್ತರಿಂದ ಹದಿನೈದು ನಿಮಿಷಗಳಲ್ಲಿ ತಲುಪಬಹುದಾದ ದೂರ. ಕಾಲ್ನಡಿಗೆಯಲ್ಲಿ ಮೂರು ಗಂಟೆಗಳ ಹಾದಿ. ಅದು ಸಮತಟ್ಟಾದ ಪ್ರದೇಶವಲ್ಲ; ಬಂಡೆಗಲ್ಲುಗಳಿಂದ ಆವೃತವಾದ ಬೆಟ್ಟಗುಡ್ಡಗಳಿಂದ ಕೂಡಿದ ಪ್ರದೇಶ. ಜೆರುಸಲೇಮಿನಂತೆಯೇ ಬೆತ್ಲೆಹೆಮ್ಸಹ ಉನ್ನತ ಪ್ರದೇಶವಾಗಿದ್ದು ಸಮುದ್ರಮಟ್ಟದಿಂದ 2550 ಅಡಿ ಎತ್ತರದಲ್ಲಿದೆ.

ಹೀಬ್ರೂಬೈಬಲ್‌ ಪ್ರಕಾರ ಜೆರೋಬಾಮನು ಬೆತ್ಲೆಹೇಮನ್ನು ಸುರಕ್ಷಾತ್ಮಕ ಪಟ್ಟಣವನ್ನಾಗಿ ಕಟ್ಟಿದನೆನ್ನುವ ಮಾಹಿತಿ ದೊರೆಯುತ್ತದೆ. ಪುರಾತನ ಕ್ರಿಶ್ಚಿಯನ್ ಸಮಾಜದ ಜನಸಮುದಾಯವನ್ನು ಹೊಂದಿದ ವಿಶ್ವದ ಏಕೈಕ ಪಟ್ಟಣವೆನಿಸಿದರೂ ಇಲ್ಲಿರುವ ನಿವಾಸಿಗಳಲ್ಲಿ ಬಹುತೇಕರು ಇಸ್ಲಾಂ ಮತೀಯರು. ಪಟ್ಟಣದಲ್ಲಿನ ಸಧ್ಯದ ಅಶಾಂತ ಪರಿಸ್ಥಿತಿಯಿಂದಾಗ ಜನರು ವಲಸೆ ಹೋಗುತ್ತಿದ್ದು ಜನಸಂಖ್ಯೆ ಕಡಿಮೆಯಾದರೂ ಜನಪ್ರಿಯತೆ ಕಮ್ಮಿಯಾಗಿಲ್ಲ. ಕ್ರಿ.. 2ನೇ ಶತಮಾನದಲ್ಲಿ ನಡೆದ 'ಬಾರ್ಕೊಖ್ಬಾ' ಕ್ರಾಂತಿಯಲ್ಲಿ ಪಟ್ಟಣ ಸಂಪೂರ್ಣ ನೆಲಸಮವಾಯಿತು. ಬೈಜೆಂಟೈನ್ ಚಕ್ರವರ್ತಿ ಕಾನ್ಸ್ಟಾಂಟಿನ್ ತಾಯಿ ಹೆಲೆನಾರವರ ಪ್ರಭಾವದಿಂದ ಪಟ್ಟಣದ ಮರುನಿರ್ಮಾಣವಾಗುತ್ತದೆ. ಕ್ರಿ..327ರಲ್ಲಿ ಕಾನ್ಸ್ಟಾಂಟಿನ್ಚಕ್ರವರ್ತಿಯು ಯೇಸು ಜನ್ಮವಿತ್ತ ಸ್ಥಳದಲ್ಲಿ ಒಂದು ಚರ್ಚನ್ನು ನಿರ್ಮಾಣ ಮಾಡುತ್ತಾನೆ. ಅದನ್ನು 'ಚರ್ಚ್ ಆಫ್ ದಿ ನೇಟಿವಿಟಿ' ಎಂದು ಕರೆಯಲಾಗುತ್ತದೆ. ಕ್ರಿ..529ರಲ್ಲಿ ಸಮಾರಿತರು ಚರ್ಚನ್ನು ಹಾಳುಗೆಡವಿದರಾದರೂ ಮೊದಲ ಜಸ್ಟಿನಿನ್ದೊರೆಯು ಅದರ ಮರುನಿರ್ಮಾಣವನ್ನು ಮಾಡುತ್ತಾನೆ.

ಯೇಸು ಹುಟ್ಟಿದ ಸ್ಥಳ
ಕ್ರಿ.. 632 ರಲ್ಲಿ ಅರಬ್ ಖಲೀಫ 'ಉಮರ್ ಬಿನ್ ಅಲ್ -ಖತ್ತಬ್ ಬೆತ್ಲೆಹೇಮನ್ನು ವಶಪಡಿಸಿಕೊಂಡನಾದರೂ ಇಲ್ಲಿರುವ ಎಲ್ಲಾ ಚರ್ಚುಗಳ ರಕ್ಷಣೆಗೆ ಆತ ಪ್ರಾಮುಖ್ಯತೆಯನ್ನು ನೀಡಿದ್ದನೆನ್ನಲಾಗುತ್ತಿದೆ. 1099 ರಲ್ಲಿ ಧರ್ಮಯುದ್ದ ಸೇನಾನಿಗಳು ಬೆತ್ಲೆಹೇಮನ್ನು ವಶಪಡಿಸಿಕೊಳ್ಳುವವರೆಗೆ ಅದು ಅರಬರ ವಶದಲ್ಲೇ ಇರುತ್ತದೆ. 13ನೇ ಶತಮಾನದಲ್ಲಿ ಮಾಮ್ಲುಕರು ಪಟ್ಟಣದ ರಕ್ಷಣಾಗೋಡೆಗಳನ್ನು ಉರುಳಿಸಿದರೆ, 16ನೇ ಶತಮಾನದ ಆರಂಭದಲ್ಲಿ ಒಟ್ಟೊಮಾನರಿಂದ ಅದರ ಮರುನಿರ್ಮಾಣವಾಗುತ್ತದೆ. ಮೊದಲ ಜಾಗತಿಕ ಯುದ್ದದ ವೇಳೆಯಲ್ಲಿ ಬೆತ್ಲೆಹೇಮ್ಒಟ್ಟೊಮಾನ್ರಿಂದ ಬ್ರಿಟಿಷರ ಕೈಸೇರುತ್ತದೆ. 1948ರಲ್ಲಿ ನಡೆದ ಇಸ್ರೇಲ್ಮತ್ತು ಅರಬರ ನಡುವಿನ ಯುದ್ದದಲ್ಲಿ ಬೆತ್ಲೆಹೇಮನ್ನು ಜೋರ್ಡಾನ್ವಶಪಡಿಸಿಕೊಳ್ಳುತ್ತದೆ. 1967ರಲ್ಲಿ ನಡೆದ ಆರು ದಿನಗಳ ಯುದ್ದದಲ್ಲಿ ಇಸ್ರೇಲ್ಅದನ್ನು ತನ್ನದಾಗಿಸಿಕೊಳ್ಳುತ್ತದೆ. ಆದರೆ 1995ರಲ್ಲಿ 'ಓಸ್ಲೋ ಒಪ್ಪಂದ' ಪ್ರಕಾರ ಇಸ್ರೇಲ್ಬೆತ್ಲೆಹೇಮನ್ನು ಪ್ಯಾಲೆಸ್ತೀನ್ ವಶಕ್ಕೆ ನೀಡಬೇಕಾಗಿ ಬರುತ್ತದೆ. ಪ್ರಸ್ತುತ ಅದು 'ಪ್ಯಾಲೆಸ್ತೀನ್ಅಥಾರಿಟಿ' ಆಡಳಿತದಲ್ಲಿದೆ.

ಯೇಸುಕ್ರಿಸ್ತರು ಹುಟ್ಟಿದ ಸ್ಥಳವೀಕ್ಷಣೆಗೆಂದೇ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ನಾಡಿಗೆ ಭೇಟಿಯನ್ನು ನೀಡುತ್ತಾರೆ. ಹಾಗಾಗಿ ಬೆತ್ಲೆಹೇಮಿನ ಅರ್ಥವ್ಯವಸ್ಥೆಯ ಮೂಲ ಪ್ರವಾಸೋದ್ಯಮವೇ ಆಗಿದೆ. ಕ್ರಿಸ್ಮಸ್ ಸಂದರ್ಭದಲ್ಲಿ 'ಚರ್ಚ್ ಆಫ್ ದಿ ನೇಟಿವಿಟಿ'ಗೆ ಮುಗಿಬೀಳುವ ಕ್ರೈಸ್ತ ಯಾತ್ರಿಗಳ ಭೇಟಿಯ ಮೇಲೆ ಬೆತ್ಲೆಹೇಮಿನ ಅರ್ಥವ್ಯವಸ್ಥೆಯು ಅವಲಂಬಿತವಾಗಿದೆ. ಇಲ್ಲಿಯ ಇನ್ನೊಂದು ಪ್ರಮುಖ ಆಕರ್ಷಣೆ 'ರಾಖೇಲಳ ಸಮಾಧಿ'. ಇದು ಯೆಹೂದಿಗಳಿಗೆ ಯಾತ್ರಾಸ್ಥಳ.











ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ