ಪಾಸ್ಕಹಬ್ಬ

ಇಸ್ರಾಯೇಲರು ಈಜಿಪ್ಟಿನ ದಾಸ್ಯದಲ್ಲಿದ್ದಾಗ ಮೋಸೆಸನು ಆರೋನನೊಂದಿಗೆ ಸೇರಿ ಅವರ ವಿಮೋಚನೆಗಾಗಿ ಸರ್ವಪ್ರಯತ್ನಗಳನ್ನು ನಡೆಸಿ ವಿಫಲಗೊಂಡಾಗ ಸರ್ವೇಶ್ವರ ದೇವರು ಈಜಿಪ್ಟಿನ ಚೊಚ್ಚಲ ಗಂಡುಮಕ್ಕಳನ್ನು ವಧಿಸಲು ಮಧ್ಯರಾತ್ರಿಯ ಸಮಯದಲ್ಲಿ ದೇಶದ ನಡುವೆ ಹಾದುಹೋಗುತ್ತಾರೆ. ಆದರೆ ದೇವರು ಮುಂತಿಳಿಸಿದಂತೆ ಯಾವ ಮನೆಯ ಬಾಗಿಲಿನ ಪಟ್ಟಿಗಳಿಗೆ ಅಥವಾ ನಿಲುವುಗಂಬಗಳಿಗೆ ಕುರಿಮರಿಯ ರಕ್ತವನ್ನು ಬಳಿದಿರಲಿಲ್ಲವೋ ಮನೆಯ ಚೊಚ್ಚಲ ಗಂಡು ಮಕ್ಕಳು ವಧಿಸಲ್ಪಡುತ್ತಾರೆ. ಇಸ್ರಯೇಲ ಮನೆಯ ಬಾಗಿಲಿನ ಪಟ್ಟಿಗಳಿಗೆ ಮತ್ತು ನಿಲುವುಗಂಬಗಳಿಗೆ ಕುರಿಮರಿಯ ರಕ್ತವನ್ನು ಹಚ್ಚಲಾಗಿರುವ ಕಾರಣ ಮನೆಗಳನ್ನು ದಾಟಿ ಸರ್ವೇಶ್ವರ ದೇವರು ಮುಂದಕ್ಕೆ ಹೋಗುತ್ತಾರೆ. ಇದನ್ನು 'ದಾಟುವುದು(passover)' ಎನ್ನುತ್ತಾರೆ. ಇದರ ನೆನಪಿಗಾಗಿ ಆಚರಿಸಲಾಗುವ ಹಬ್ಬವನ್ನೇ 'ಪಾಸ್ಕ ಹಬ್ಬ(Feast of Passover)' ಎನ್ನಲಾಗುತ್ತದೆ. ಹಬ್ಬವನ್ನು ಹೀಬ್ರೂಗಳು 'ಪೆಸಾಕ್‌ ' ಎಂದು ಕರೆಯುತ್ತಾರೆ.

ಹೀಗೆ ಸರ್ವೇಶ್ವರ ದೇವರು ಈಜಿಪ್ಟಿನ ಮೂಲಕ ಹಾದು ಹೋಗುವಾಗ ನಾಡನ್ನು ಆಳುತ್ತಿದ್ದ ಫರೋಹನ ಚೊಚ್ಚಲ ಮಗನೂ ಸಾಯುತ್ತಾನೆ. ಇದರಿಂದ ಭೀತನಾದ ಫರೋಹನು ಅದೇ ರಾತ್ರಿಯಲ್ಲಿ ಮೋಸೆಸ್ಮತ್ತು ಆರೋನರನ್ನು ಕರೆಯಿಸಿ, "ನೀವು ಮತ್ತು ಇಸ್ರಯೇಲರೆಲ್ಲರೂ ನನ್ನ ಜನರನ್ನು ಬಿಟ್ಟು ಹೋಗಿ. ನೀವು ಕೇಳಿಕೊಂಡಂತೆ ಸರ್ವೇಶ್ವರನನ್ನು ಆರಾಧಿಸಿ. ನಿಮ್ಮ ಕೋರಿಕೆಯಂತೆಯೇ ಕುರಿದನಗಳನ್ನು ತೆಗೆದುಕೊಂಡು ಹೋಗಬಹುದು. ನನ್ನ ಹಿತಕ್ಕಾಗಿಯೂ ಪ್ರಾರ್ಥನೆಮಾಡಿ," ಎಂದು ಭಿನ್ನೈಸುತ್ತಾನೆ(ವಿಮೋ 12:31-32). ಆಗ ಇಸ್ರಯೇಲರು ತಮ್ಮ ಹೆಂಡತಿ ಮಕ್ಕಳು ಸಾಕುಪ್ರಾಣಿಗಳೊಂದಿಗೆ ಈಜಿಪ್ಟನ್ನು ಬಿಟ್ಟು ಹೊರಡುತ್ತಾರೆ. ಗಡಿಬಿಡಿಯಲ್ಲಿ ಹಿಟ್ಟಿಗೆ ಹುಳಿ ಹಾಕುವುದಕ್ಕಿಂತ ಮುಂಚೆಯೇ ನಾದುವ ಹರಿವಾಣಗಳಲ್ಲಿದ್ದ ಕಣಕದ ಮುದ್ದೆಯನ್ನು ಹಾಗೆಯೇ ಗಂಟುಕಟ್ಟಿ ಹೆಗಲಿನ ಮೇಲೆ ಹಾಕಿಕೊಂಡು ಇಸ್ರಯೇಲರು ಹೊರಡುತ್ತಾರೆ. ರಾಮ್ಸೆಸ್ಎಂಬ ಪಟ್ಟಣದಿಂದ ಹೊರಟ ಅವರು ಸುಕ್ಕೋತ್ಎಂಬ ಊರನ್ನು ತಲುಪಿದಾಗ ಬೆಳಗಾಗುತ್ತದೆ. ಅಲ್ಲಿ ಅವರು ತಾವು ತಂದಿದ್ದ ಕಣಕದ ಮುದ್ದೆಯಿಂದ ರೊಟ್ಟಿಗಳನ್ನು ಮಾಡಿ ತಿನ್ನುತ್ತಾರೆ. ಆದರೆ ಅದರಲ್ಲಿ ಹುಳಿಯನ್ನು ಬೆರೆಸಲು ಆಗಿರುವುದಿಲ್ಲ. ಬೇರೆ ಕಣಕವನ್ನು ಸಿದ್ಧಪಡಿಸಲೂ ಸಮಯವಿರುವುದಿಲ್ಲ. ಆದುದರಿಂದ ಅದನ್ನು ಹುಳಿ ಇಲ್ಲದೆಯೇ ಮಾಡಿ ತಿನ್ನುತ್ತಾರೆ.

ಯೇಸುಕ್ರಿಸ್ತರು ತಮ್ಮ ಶಿಷ್ಯರೊಡಗೂಡಿ ಪಾಸ್ಕ ಭೋಜನವನ್ನು ಸವಿಯುತ್ತಿರುವುದು
ಇದರ ಸ್ಮರಣಾರ್ಥ ಆಚರಿಸಲಾಗುವ ಹಬ್ಬವೇ, 'ಹುಳಿರಹಿತ ರೊಟ್ಟಿಗಳ ಹಬ್ಬ'(ವಿಮೋ 12:33-39). ಪಾಸ್ಕಹಬ್ಬವನ್ನು ಆಚರಿಸುವಾಗ ಹುಳಿರಹಿತ ರೊಟ್ಟಿಗಳನ್ನು ಮಾಡಿ ಹಬ್ಬವನ್ನು ಆಚರಿಸುವುದರಿಂದ 'ಪಾಸ್ಕ ಹಬ್ಬ'ವನ್ನು 'ಹುಳಿರಹಿತ ಹಬ್ಬ'ವೆಂದೇ ಕರೆಯಲಾಗುತ್ತದೆ('ಹುಳಿಯಿಲ್ಲದ ರೊಟ್ಟಿಗಳನ್ನು ಕಹಿಯಾದ ಸೊಪ್ಪುಸದೆಗಳೊಂದಿಗೆ ಊಟಮಾಡಬೇಕು' -ಸಂಖ್ಯಾ9:11). ಹಬ್ಬದ ಸಂಭ್ರಮಾಚರಣೆಯನ್ನು ಏಳುದಿನಗಳ ಕಾಲ ನಡೆಸುತ್ತಾರೆ. ಸಂದರ್ಭದಲ್ಲಿ ಯಾರೇ ಆಗಲಿ ಹುಳಿ ಬೆರೆತ ರೊಟ್ಟಿಯನ್ನು ತಿಂದರೆ ಅವರನ್ನು ಊರಿನಿಂದಲೇ ಬಹಿಷ್ಕರಿಸಲಾಗುತ್ತಿತ್ತು. ಹಬ್ಬವನ್ನು ಹೀಬ್ರೂ ಪಂಚಾಂಗದ ಪ್ರಕಾರ ವರ್ಷದ ಆದಿ ಮಾಸ(ಮೊದಲ ತಿಂಗಳು) ಅಂದರೆ ನಿಸಾನ್ಮಾಸದ ಹದಿನಾಲ್ಕನೆಯ ದಿನದ ಸಂಜೆ ಆರಂಭಿಸಿ ಇಪ್ಪತ್ತೊಂದನೆಯ ದಿನ ಸಂಜೆಗೆ ಮುಕ್ತಾಯಗೊಳಿಸಲಾಗುತ್ತದೆಗ್ರಿಗೋರಿಯನ್ಪಂಚಾಂಗದ ಪ್ರಕಾರ ಇದನ್ನು ಮಾರ್ಚ್ಮತ್ತು ಏಪ್ರಿಲ್ತಿಂಗಳಿನಲ್ಲಿ ನಡೆಸಲಾಗುತ್ತದೆ. ಆಚರಣೆಯ ಸಂದರ್ಭದಲ್ಲಿ ಪ್ರಾರ್ಥನಾವಿಧಿಗಳ ಜೊತೆಯಲ್ಲಿ 'ಹುಳಿರಹಿತ ರೊಟ್ಟಿ'ಯನ್ನೂ ನಿಷ್ಕಳಂಕ ಕುರಿಮರಿಯ ಮಾಂಸವನ್ನೂ ಪಾಸ್ಕಭೋಜನವಾಗಿ ಭುಜಿಸಲಾಗುತ್ತದೆ.

ಇಸ್ರಯೇಲರು ರಾಮ್ಸೆಸ್ನಿಂದ ಹೊರಟ ದಿನವೇ ಮೊದಲ ಪಾಸ್ಕಹಬ್ಬದ ಆಚರಣೆಯಾಗಿತ್ತು; ಮೊದಲ ಆಚರಣೆ ಈಜಿಪ್ಟಿನಲ್ಲಾಗಿದ್ದರೆ  ಎರಡನೆಯ ವರ್ಷದ ಹಬ್ಬವನ್ನು ಸಿನಾಯ್ಬೆಟ್ಟ ಪ್ರಾಂತದಲ್ಲಿ ಆಚರಿಸಿದ್ದರು.

ಜೆರುಸಲೇಮನ್ನು ಯೇಸುಕ್ರಿಸ್ತರು ಪ್ರವೇಶಿಸಿದ ಬಳಿಕ ತಮ್ಮ ಶಿಷ್ಯರೊಡಗೂಡಿ ಮನೆಯೊಂದನ್ನು ಆರಿಸಿ ಅದರಲ್ಲಿ ಪಾಸ್ಕ ಭೋಜನವನ್ನು ಸವಿಯುತ್ತಾರೆ. ಸಂದರ್ಭದಲ್ಲೇ ಯೇಸು ತಮಗೆ ದ್ರೋಹ ಬಗೆಯುವವನ ಬಗ್ಗೆ ಸೂಚನೆಯನ್ನು ನೀಡುತ್ತಾರೆ. ಸಿಮೋನ ಪೇತ್ರನು ಕೋಳಿ ಕೂಗುವ ಮುನ್ನ ಮೂರು ಸಲಅವನಾರೋ ನಾನರಿಯೆ’ನೆಂಬುದಾಗಿ ಯೇಸುವನ್ನು ನಿರಾಕರಿಸಿ ಹೇಳುವ ಬಗ್ಗೆಯೂ ತಿಳಿಸುತ್ತಾರೆ.






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ