ಹಸ್ತಪ್ರತಿಯ ಪುಟವೊಂದರ ತುಣುಕುಗಳು |
ಹಸ್ತಪ್ರತಿಗಳು(ಬೈಬಲ್): ಮುದ್ರಣ ಯಂತ್ರವನ್ನು ಕಂಡು
ಹಿಡಿಯುವ ಮೊದಲು 'ಪವಿತ್ರಗ್ರಂಥ'ವನ್ನು
ಕೈಯಲ್ಲಿ ಬರೆಯಲಾಗುತ್ತಿತ್ತು. ಇವುಗಳನ್ನು ಕೈಬರಹದ ಪ್ರತಿಗಳು ಎನ್ನಲಾಗುತ್ತವೆ.
ಬರೆಯಲು ಉಪಯೋಗಿಸಲಾಗುತ್ತಿದ್ದ ವಸ್ತುಗಳು ಸಾಮಾನ್ಯವಾಗಿ ಪಾಪಿರಸ್ ಅಥವಾ ಚರ್ಮದ ತೆಳುಹಾಳೆಗಳು,
ವಿಶೇಷವಾದ ಶಾಯಿ, ಉದ್ದವಾದ ಪಕ್ಷಿಗಳ
ಪುಕ್ಕ ಇತ್ಯಾದಿ. ಬೈಬಲ್ನ ಹೀಬ್ರೂ
ಭಾಗವನ್ನು ಹೆಚ್ಚಾಗಿ ಪಾಪಿರಸ್ ಅಥವಾ ಚರ್ಮ(ವೆಲ್ಲುಮ್)ದ ತೆಳುಹಾಳೆಗಳ ಮೇಲೆ
ಬರೆದರೆ, ಬಹುತೇಕ ಕ್ರೈಸ್ತ ಗ್ರೀಕ್
ಬೈಬಲ್ನ ಭಾಗಗಳನ್ನು ಚರ್ಮದ
ಹಾಳೆಗಳ ಮೇಲೆ ಮಾತ್ರ ಬರೆಯಲಾಗಿದೆ. ಆದರೆ
ಪ್ರಸ್ತುತ ಅವುಗಳ ಮೂಲಪ್ರತಿಗಳು ಯಾವುವೂ
ಲಭ್ಯವಿಲ್ಲ; ಲಭ್ಯವಿರುವ ಪ್ರತಿಗಳು ಹಸ್ತಪ್ರತಿಗಳು ಮಾತ್ರ. ಮೊದಲು ಮೂಲಪ್ರತಿಗಳನ್ನು
ಬರೆದು ಅನಂತರ ಹೆಚ್ಚೂಕಡಿಮೆ ಅವುಗಳ
ತದ್ರೂಪವಾಗಿ ಹಸ್ತಪ್ರತಿಗಳನ್ನು ಸಿದ್ಧಪಡಿಸಲಾಗುತ್ತಿತ್ತು. ಮೂಲಪ್ರತಿಗಳನ್ನು ಎಚ್ಚರಿಕೆಯಿಂದ ಸುರಕ್ಷಿತವಾಗಿ ಇಟ್ಟರೆ; ಹಸ್ತಪ್ರತಿಗಳನ್ನು ದೇಗುಲಗಳಲ್ಲಿ
ನಿತ್ಯ ಓದಲು, ಪ್ರಬೋಧನೆ ನೀಡಲು
ಬಳಸಲಾಗುತ್ತಿತ್ತು.
'ಪವಿತ್ರಗ್ರಂಥ'ಗಳು ಅಥವಾ 'ಬೈಬಲ್'
ಎನ್ನಲಾಗುವ ಕೃತಿಗಳು ಒಂದೊಂದು ಕಾಲಘಟ್ಟದಲ್ಲೂ
ಒಂದೊಂದು ರೂಪವನ್ನು ಹೊಂದಿದ್ದು ಇಂದಿನ ತನ್ನ ಪೂರ್ಣರೂಪವನ್ನು
ಹೊಂದಲು 1600 ವರ್ಷಗಳೇ ಸಂದವು. ನಾವಿಲ್ಲಿ
ಮೊದಲು ಗಮನಿಸಬೇಕಾದುದು, 'ಬೈಬಲ್' ಪೂರ್ಣಪ್ರಮಾಣದ ಒಂದು
ಪುಸ್ತಕವಲ್ಲ ಎಂಬುದು. 'ಬೈಬಲ್'(ಪುಸ್ತಕಗಳು) ಎಂಬ
ಹೆಸರೇ ಸೂಚಿಸುವಂತೆ ಅದು ಹಲವು ಪುಸ್ತಕಗಳ
ಒಂದು ಸಂಗ್ರಹ. ಕ್ರಿ.ಪೂ.
1513ರಲ್ಲಿ ಬೈಬಲ್ನ ಮೊದಲೈದು
ಕೃತಿಗಳ ಸಂಗ್ರಹ ಲೇಖನವನ್ನು ಮೋಸೆಸನು
ಸಿದ್ಧಪಡಿಸಿದ್ದ, ಅವುಗಳನ್ನು 'ಪಂಚಸುರುಳಿಗಳು' ಅಥವಾ 'ಧರ್ಮಶಾಸ್ತ್ರ' ಎಂದು
ಕರೆಯಲಾಗುತ್ತಿತ್ತು. 'ಹೀಬ್ರೂ ಕ್ಯಾನೋನ್'ನ
ಮೊದಲ ರೂಪವೇ ಇದು. ಅನಂತರ
ಮತ್ತಷ್ಟು ಪುಸ್ತಕಗಳ ಸೇರ್ಪಡೆಯಾಗಿ ಅದನ್ನು 'ತನಾಕ್' ಎಂಬ
ಹೆಸರಿನಿಂದ ಕರೆಯಲಾಯಿತು. 'ರಬ್ಬಿನಿಕ್ ಕ್ಯಾನೋನ್' ಎಂಬುದು ಅದರ ಇನ್ನೊಂದು
ಹೆಸರು. ಇದರಲ್ಲಿ ಅಡಕಗೊಂಡಿರುವ ಎಲ್ಲಾ
ಕೃತಿಗಳ ರಚನೆಯಾದದ್ದು ಹೀಬ್ರೂ ಭಾಷೆಯಲ್ಲಿ. ಕ್ರಮೇಣ
ಹೀಬ್ರೂ ಭಾಷೆಯಲ್ಲಿದ್ದ ಈ ಕೃತಿಯನ್ನು ಆಗ
ಬಳಕೆಯಲ್ಲಿದ್ದ ಗ್ರೀಕ್ ಭಾಷೆಗೆ ತರ್ಜುಮೆ
ಮಾಡಿ ಅದಕ್ಕೆ ಹೊಸರೂಪವನ್ನು ನೀಡಲಾಯಿತು.
ಅದನ್ನು 'ಸೆಪ್ತುವಾಜಿಂತ್' ಎನ್ನಲಾಯಿತು. ಮುಂದೆ ಯೇಸುವಿನ ಜನನ-ಮರಣದೊಂದಿಗೆ ನವಯುಗವೊಂದು ಆರಂಭಗೊಂಡಿತು. ಕ್ರೈಸ್ತಮತ ಜಗತ್ತಿನಾದ್ಯಂತ ಹರಡಿತು. ಯೇಸುವಿನ ಶಿಷ್ಯರು
ಬರೆದ ಸುಸಂದೇಶಗಳೂ ಸೇರಿದಂತೆ ಗ್ರೀಕ್ ಭಾಷೆಯಲ್ಲಿ ರಚನೆಯಾದ
ಅನೇಕ ಕೃತಿಗಳ ಸೇರ್ಪಡೆಯೂ ಆಯಿತು. ಹೀಬ್ರೂ
ಭಾಷೆಯ ಹಳೆಯ ಕೃತಿಗಳ ಭಾಗವನ್ನು
'ಹಳೆ ಒಡಂಬಡಿಕೆ' ಎಂದೂ ಹೊಸತಾಗಿ ಸೇರ್ಪಡೆಗೊಂಡ
ಗ್ರೀಕ್ ಕೃತಿಗಳಿರುವ ಭಾಗವನ್ನು 'ಹೊಸ ಒಡಂಬಡಿಕೆ' ಎಂದೂ
ಕರೆಯಲಾಯಿತು. ಹೊಸ ಒಡಂಬಡಿಕೆಯ ಕೊಟ್ಟಕೊನೆಯ
ಕೃತಿ 'ಪ್ರಕಟಣೆ'ಯಾದರೂ ಕೊನೆಯದಾಗಿ
ರಚನೆಯಾದ ಕೃತಿ ಯೊವಾನ್ನನು ಬರೆದ
'ಸುಸಂದೇಶ'ವೆಂಬ ಕೃತಿ. ಇದರ
ರಚನೆಯಾದದ್ದು ಸುಮಾರು ಕ್ರಿ.ಶ.
98ರಲ್ಲಿ. ಹಳೆಯ ಒಡಂಬಡಿಕೆಯ ಮೊದಲ ಕೃತಿ ಮತ್ತು
ಹೊಸ ಒಡಂಬಡಿಕೆಯ ಕೊನೆಯ ಕೃತಿಯ ನಡುವೆ ಸುಮಾರು
1600 ವರ್ಷಗಳ ಅಂತರವಿದ್ದು ಪ್ರಸಕ್ತ ಬೈಬಲ್ನಲ್ಲಿರುವ
ಒಟ್ಟು ಪುಸ್ತಕಗಳ ಸಂಗ್ರಹಕ್ಕೆ 16 ಶತಮಾನಗಳ ಇತಿಹಾಸವೇ ಇದೆಯನ್ನಬಹುದು.
ಅನಂತರ
ಸಂತ ಜೆರೋಮನ ಕಾಲದಲ್ಲಿ, 'ದ
ವಲ್ಗೆಟ್' ಎಂಬ ಹೆಸರಿನೊಂದಿಗೆ ಬೈಬಲ್
ಕ್ರೈಸ್ತರ ಪವಿತ್ರಗ್ರಂಥವಾಗಿ ಜನ್ಮತಾಳಿತು. ಬಳಿಕ ಅನೇಕ ಬದಲಾವಣೆಗಳೂ
ಉಲ್ಲೇಖಾರ್ಹವಲ್ಲದ ನಾಟಕಗಳೂ ನಡೆದುಹೋಗಿವೆ. ಈ
ಅವಧಿಯಲ್ಲಿ ಎಷ್ಟೋ ಮೂಲಕೃತಿಗಳು ನಾಶವಾದವು.
ಅವುಗಳಲ್ಲಿ ಹಲವನ್ನು ಪುರೋಹಿತಶಾಹಿಗಳೇ ನಾಶಪಡಿಸಿದವು
ಎನ್ನಲಾಗುತ್ತಿದೆ. ಅದರ ಹಿಂದಿನ ಮರ್ಮ
ರಹಸ್ಯವಾಗಿಯೇ ಉಳಿದಿದೆ.
ಸಿನಾಯ್
ಪರ್ವತದ ಬಳಿಯಿರುವ ಸಂತ ಕ್ಯಾಥೆರಿನ್ ವಿರಕ್ತಮಠದಲ್ಲಿ
'ಕೋಡೆಕ್ಸ್ ಸಿನಾಯ್ಟಿಕ್' ಎನ್ನಲಾಗುವ
ಹಸ್ತಪ್ರತಿಗಳ ಕೆಲವು ಹಾಳೆಗಳು ಕಸದಬುಟ್ಟಿಗಳಲ್ಲಿ
ದೊರೆತವು ಎಂಬ ಆರೋಪವಿದೆ. ಪುರೋಹಿತಶಾಹಿಗಳು
ದೇವರವಾಕ್ಯದ ಬಗ್ಗೆ ತೋರುವ ಅನಾದರಣೆ
ಎಷ್ಟು ಎಂಬುದನ್ನು ಇದು ಎತ್ತಿ ತೋರಿಸುತ್ತದೆ.
ಮೂಲ
ಪ್ರತಿಗಳನ್ನು ರಚಿಸಿದ ಬಳಿಕವಷ್ಟೆ ಅವುಗಳ
ಹಸ್ತಪ್ರತಿಗಳನ್ನು ರಚಿಸಲಾಗುತ್ತಿತ್ತು. ಇಲ್ಲಿ 'ಹಸ್ತಪ್ರತಿಗಳು' ಎಂದರೆ
ಎಲ್ಲರಿಗೂ ಓದಲೂ ಅಭ್ಯಸಿಸಲೂ ದೊರಕಬಹುದಾದ
ಕೃತಿಗಳು ಎನ್ನಬಹುದು. ಹಾಗೆ ಅಂತಹ ಪ್ರತಿಗಳನ್ನು
ರಚಿಸುವಾಗ ಹೆಚ್ಚಿನ ಜಾಗ್ರತೆ ವಹಿಸಲಾಗುತ್ತಿತ್ತು.
ಹಸ್ತಪ್ರತಿಗಳ ಒಂದೊಂದು ಅಕ್ಷರವನ್ನೂ ಯಥಾವತ್ತಾಗಿ
ಬರೆಯಲಾಗುತ್ತಿತ್ತು ಮತ್ತು ಆ ಕೃತಿಗಳು
ಅತ್ಯಂತ ನಿಖರತೆಯನ್ನು ಹೊಂದಿರುತ್ತಿದ್ದವು. ಅಷ್ಟೇ ಅಲ್ಲದೆ 'ಮಸೊರೆಟ್ಸ್'
ಎಂದು ಕರೆಯಲ್ಪಡುವ ಕೃತಿಗಳ ಟೀಕಾಕಾರರು ಅಥವಾ
ಪರಿವೀಕ್ಷಕರು, ಪ್ರತಿ ಪದಗಳನ್ನೂ ಒಮ್ಮೊಮ್ಮೆ
ಅಕ್ಷರಗಳನ್ನೂ ಎಣಿಸಿ ಅವುಗಳ ನಿಖರತೆಯನ್ನು
ಪರೀಕ್ಷಿಸುತ್ತಿದ್ದರು ಎನ್ನಲಾಗುತ್ತಿದೆ. ಒಂದು ಸಣ್ಣ ತಪ್ಪು
ಸಂಭವಿಸಿದರೂ ಬರೆದ ಹಸ್ತಪ್ರತಿಯನ್ನು ನಾಶಪಡಿಸಿ
ಮತ್ತೆ ಹೊಸತಾಗಿ ಮೊದಲಿನಿಂದ ಬರೆಯಲು
ಆರಂಭಿಸಬೇಕಾಗುತ್ತಿತ್ತು. ಹೀಗಾಗಿ ಸಣ್ಣಪುಟ್ಟ ತಪ್ಪುಗಳಿಗೆ
ಸಾಮಾನ್ಯವಾಗಿ ವಿನಾಯಿತಿಯನ್ನು ನೀಡಲಾಗುತ್ತಿತ್ತು. ಇಂತಹ
ಹಸ್ತಪ್ರತಿಗಳನ್ನು ಅವು ದೊರೆತ ಸ್ಥಳ
ಅಥವಾ ಇಡಲಾಗಿರುವ ಸ್ಥಳ, ಪ್ರತಿಗೆ ಬಳಸಲಾದ
ವಸ್ತು ಇತ್ಯಾದಿಗಳ ಅನುಸಾರ ವಿಂಗಡಿಸಲಾಗುತ್ತಿತ್ತು. ಇವುಗಳಲ್ಲಿ ಪುರಾತನವಾದವೂ
ಇವೆ; ಇತ್ತೀಚಿನವುಗಳೂ ಇವೆ. ಹೀಗೆ ಸಿದ್ದಪಡಿಸಲಾದ
ಕೃತಿಗಳು ಅನೇಕವು ಪ್ರಸ್ತುತ ಲಭ್ಯವಿದ್ದು
ಅವುಗಳಲ್ಲಿ ಹೆಚ್ಚಿನವು ಐದನೆಯ ಶತಮಾನದಿಂದ ಈಚಿನವು; ಅವುಗಳನ್ನು
ಈ ರೀತಿಯಲ್ಲಿ ವಿಂಗಡಿಸಲಾಗುತ್ತವೆ:
ಭಾಷೆಗಳಿಗೆ
ಅನುಸಾರವಾಗಿ;
ಹೀಬ್ರೂ
ಪವಿತ್ರಗ್ರಂಥಕ್ಕೆ ಸಂಬಂಧಿಸಿದ ಸುಮಾರು 6000 ಹಸ್ತಪ್ರತಿಗಳು ಇಂದು ಜಗತ್ತಿನ ವಿವಿಧ
ಗ್ರಂಥಾಲಯಗಳಲ್ಲಿ
ಕೊಯಿನ್
ಗ್ರೀಕ್ ಭಾಷೆಯಲ್ಲಿ ರಚಿಸಲ್ಪಟ್ಟ ಕ್ರೈಸ್ತ ಗ್ರೀಕ್ ಪವಿತ್ರಗ್ರಂಥಗಳ
ಪ್ರಸ್ತುತ ಲಭ್ಯವಿರುವ ಹಸ್ತಪ್ರತಿಗಳ ಸಂಖ್ಯೆ ಸುಮಾರು 5000 ಎನ್ನಲಾಗಿದೆ.
ಅವುಗಳಲ್ಲಿ ಕೆಲವು ಸಂಪೂರ್ಣ ಕೃತಿಗಳನ್ನೊಳಗೊಂಡ
ಗ್ರಂಥವೆನಿಸಿದರೆ, ಇನ್ನು ಕೆಲವು ಭಾಗಶಃ
ಲಭ್ಯವಿರುವ ಗ್ರಂಥಗಳು. 1930ರಲ್ಲಿ ಕೆಲವು ಪಾಪಿರಸ್
ಹಸ್ತಪ್ರತಿಗಳು ಈಜಿಪ್ಟಿನಲ್ಲಿ ಲಭ್ಯವಾಗಿವೆ. ಅವುಗಳಲ್ಲಿ ಕೆಲವು 2ರಿಂದ 4ನೇ
ಶತಮಾನದ ಹಸ್ತಪ್ರತಿಗಳಾಗಿದ್ದು ಹಳೆಯ ಮತ್ತು ಹೊಸ
ಒಡಂಬಡಿಕೆಯ ಅನೇಕ ಭಾಗಗಳು ಅದರಲ್ಲಿ
ಇವೆ. ಈ ಹಸ್ತಪ್ರತಿಗಳಿಗೆ ಆಂಗ್ಲ
ಭಾಷೆಯ 'ಪಿ' ಎಂಬ ಅಕ್ಷರದ
ನಾಮವನ್ನು ನೀಡಲಾಗಿದೆ. ಇವುಗಳನ್ನು ವಿಂಗಡಿಸಲಾಗಿದ್ದು ಪ್ರತಿ ಭಾಗಕ್ಕೂ 'ಪಿ'ಯಿಂದ ಒಡಗೂಡಿದ ಸಂಖ್ಯೆಗಳನ್ನು
ನೀಡಲಾಗಿದೆ. ಸಂತ ಯೊವಾನ್ನನ ಸುಸಂದೇಶದ
ಸಣ್ಣ ಪಾಪಿರಸ್ ತುಣುಕನ್ನು ಇಂಗ್ಲೆಂಡಿನ ಮ್ಯಾಂಚೆಸ್ಟರ್ ಎಂಬಲ್ಲಿನ ಜಾನ್ ರೈಲಾಂಡ್ಸ್ ಗ್ರಂಥಾಲಯದಲ್ಲಿ
ಸುರಕ್ಷಿತವಾಗಿ ಇಡಲಾಗಿದೆ.
1.
ಹೀಬ್ರೂ
ಹಸ್ತಪ್ರತಿಗಳು
2.
ಕ್ರೈಸ್ತ
ಗ್ರೀಕ್ ಹಸ್ತಪ್ರತಿಗಳು
ಪ್ರತಿಗಳಿಗೆ
ಉಪಯೋಗಿಸುವ ವಸ್ತುಗಳಿಗೆ ಅನುಸಾರವಾಗಿ;
1.
ಪಾಪಿರಸ್
ಹಸ್ತಪ್ರತಿಗಳು ಮತ್ತು
2.
ವೆಲ್ಲುಮ್(ಚರ್ಮದ) ಹಸ್ತಪ್ರತಿಗಳು
ಲಭ್ಯವಿರುವ
ಪ್ರತಿಗಳನ್ನು ವಿಂಗಡಿಸಿದರೆ, ಅವುಗಳು ದೊರೆತ ಆಥವಾ
ಅವುಗಳನ್ನು ಸುರಕ್ಷಿತವಾಗಿ ಇಡಲಾಗಿರುವ ಸ್ಥಳಗಳಿಗೆ ಅನುಸಾರವಾಗಿ;
1.
ಕೋಡೆಕ್ಸ್
ವಾಷಿಂಗ್ಟೋನಿಯನಸ್,
2.
ಕೋಡೆಕ್ಸ್
ಸಿನಾಯ್ಟಿಕಸ್,
3.
ಕ್ಲಾರೊಮೊಂಟೆನೆಕ್ಸ್(D2)
ಕೋಡೆಕ್ಸ್,
4.
ಬೆಜ಼ೆ
ಕೋಡೆಕ್ಸ್, ಇತ್ಯಾದಿಯಾಗಿ ಅವುಗಳನ್ನು ವಿಂಗಡಿಸಲಾಗಿವೆ.
ಕಾಣಲು ಸಿಗುತ್ತವೆ. ಇವುಗಳಲ್ಲಿ
ಹೆಚ್ಚಿನವುಗಳು ಕ್ರಿ.ಶ. ಹತ್ತನೆಯ
ಶತಮಾನದಿಂದ ಈಚಿನವು ಎನ್ನಲಾಗಿದೆ. ಚರ್ಮದ
ಹಾಳೆಗಳಲ್ಲಿ ಬರೆದಿರಿಸಲಾಗಿರುವ ಕೆಲವು ಹಸ್ತಪ್ರತಿಗಳು ಇಂತಿವೆ;
1. ಕೈರೋ
ಕರಾಯಿಟ್ ಕೋಡೆಕ್ಸ್: ಹೀಬ್ರೂ 'ಪವಿತ್ರಗ್ರಂಥ'ದ
ಹಸ್ತಪ್ರತಿ ಇದಾಗಿದ್ದು ಇದನ್ನು ಪೂರ್ಣಗೊಳಿಸಲಾಗಿದ್ದು ಕ್ರಿ.ಶ. 895ರಲ್ಲಿ ಎನ್ನಲಾಗುತ್ತಿದೆ.
2. ಲೆನಿನ್ಗ್ರಾಡ್ ಕೋಡೆಕ್ಸ್: ಕ್ರಿ.ಶ. 916ರ ಈ
ಪ್ರತಿಯು ಇನ್ನೊಂದು ಪ್ರಮುಖ ಸಂಪೂರ್ಣ ಹಸ್ತಪ್ರತಿಯೆನ್ನಲಾಗುತ್ತಿದೆ.
3. ಕೋಡೆಕ್ಸ್
ಬೇಬಿಲೋನಿಕಸ್ ಪೆತ್ರೋಪಾಲಿಟನಸ್: ನವೀನ ಹೀಬ್ರೂ ಪ್ರವಾದಿಗಳ
ಕುರಿತ ಹಸ್ತಪ್ರತಿ.
4. ಅಲೆಪ್ಪೊ
ಸೆಪಾರ್ಡಿಕ್ ಕೊಡೆಕ್ಸ್: ಒಂದೊಮ್ಮೆ ಸಿರಿಯಾದ ಅಲೆಪ್ಪೊ ಎಂಬ
ಸ್ಥಳದಲ್ಲಿದ್ದು ಪ್ರಸ್ತುತ ಇಸ್ರೇಲ್ ವಶದಲ್ಲಿರುವ ಹಸ್ತಪ್ರತಿ.
ಗೋಥಿಕ್ ಶೈಲಿಯ ಲಿಪಿಯಿರುವ ವರ್ಣರಂಜಿತ ಹಸ್ತಪ್ರತಿ
|
ಚರ್ಮದ ಹಸ್ತಪ್ರತಿಗಳು:
ಇವುಗಳನ್ನು
ಈ ಕೆಳಕಂಡಂತೆ ವಿಂಗಡಿಸಲಾಗಿವೆ;
1. ವ್ಯಾಟಿಕನ್
ಹಸ್ತಪ್ರತಿ ಸಂಖ್ಯೆ 1209: ಇದನ್ನು 'ಕೋಡೆಕ್ಸ್ ವ್ಯಾಟಿಕನಾಸ್'
ಎಂದೂ ಕರೆಯಲಾಗುತ್ತದೆ. ಆಂಗ್ಲ ಭಾಷೆಯ 'ಬಿ'
ಎಂಬ ನಾಮಾಂಕಿತ ಈ ಹಸ್ತಪ್ರತಿಯು ಪ್ರಾಯಶಃ
ಅಲೆಕ್ಸಾಂಡ್ರಿಯಾ ಎಂಬಲ್ಲಿ ಲಭ್ಯವಾಗಿರಬೇಕು ಎನ್ನಲಾಗುತ್ತಿದೆ.
ಕ್ರಿ.ಶ. 4ನೇ ಶತಮಾನದ
ಈ ಪ್ರತಿಗಳಲ್ಲಿರುವ ಬರಹಗಳು
ಮಾಸಿಹೋಗಿದ್ದು ಅವುಗಳ ಮೇಲೆ ಮತ್ತೆ
ಬರೆಯಲಾಗಿದೆ ಎನ್ನಲಾಗುತ್ತಿದೆ. ಮೊದಲು 820 ಹಾಳೆಗಳಿದ್ದ ಈ ಪ್ರತಿಯಲ್ಲಿ ಪ್ರಸ್ತುತ
ಉಳಿದಿರುವುದು 759 ಹಾಳೆಗಳು ಮಾತ್ರ. ಆದಿಕಾಂಡದ
ಬಹುಪಾಲು ಲಭ್ಯವಿಲ್ಲ ಅಂತೆಯೇ ಕೀರ್ತನೆಗಳು, ಹೆಬ್ರಿಯರಿಗೆ,
ಕೃತಿಗಳ ಭಾಗಶಃ ಭಾಗಗಳು ಮತ್ತು
ತಿಮೋಥೇಯನ ಎರಡೂ ಭಾಗಗಳೂ, ತೀತ,
ಫಿಲೆಮೋನ, ಪ್ರಕಟಣೆಯ ಭಾಗಗಳು ಸಂಪೂರ್ಣ ನಾಪತ್ತೆಯಾಗಿವೆ.
ಈ ಹಸ್ತಪ್ರತಿಯನ್ನು ರೋಮ್ನ ವ್ಯಾಟಿಕನ್ನಲ್ಲಿ
ಹದಿನೈದನೇ ಶತಮಾನದಿಂದ ಸಂರಕ್ಷಿಸಿ ಇಡಲಾಗಿದೆ.
2. ಸಿನಾಯ್ಟಿಕ್
ಕೊಡೆಕ್ಸ್: ಇದನ್ನು ‘ಇತಿಹಾಸದ ನಿಧಿ’ಯೆನ್ನಲಾಗುತ್ತಿದೆ. ಗ್ರೀಕ್ ಭಾಷೆಯ ದಪ್ಪಕ್ಷರಗಳಲ್ಲಿ
ಚರ್ಮದ ಹಾಳೆಗಳ ಮೇಲೆ ಬರೆದಿಡಲಾದ
ಕೃತಿಯಿದು. ಸಿನಾಯ್ ಪ್ರದೇಶದ ಸಂತ
ಕ್ಯಾಥರಿನ್ ವಿರಕ್ತಮಠದಲ್ಲಿ ಕ್ರಿ.ಶ. ೧೯ನೇ
ಶತಮಾನದಲ್ಲಿ ಕಂಡು ಬಂದ ಹಳೆಯ
ಮತ್ತು ಹೊಸ ಒಡಂಬಡಿಕೆಯ ಈ ಪುರಾತನ
ಪ್ರತಿಗಳು ಅಲ್ಲಿದ್ದವರ ನಿರಾಸಕ್ತಿಯ ಕಾರಣಕ್ಕೆ ಆಗಲೇ ಜೀರ್ಣಾವಸ್ಥೆಯನ್ನು ತಲುಪಿದ್ದವು ಎನ್ನಲಾಗುತ್ತಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ