ನಜರೇತ್‌

ಯೇಸುವಿನ ತಂದೆ ಜೋಸೆಫ್ತನ್ನ ಕುಟುಂಬದ ಸದಸ್ಯರಾದ ಮೇರಿ ಮತ್ತು ಯೇಸುವಿನೊಂದಿಗೆ ನೆಲೆಸಿದ್ದ ಊರು ನಜರೇತ್‌. ಹೀಬ್ರೂ ಮತ್ತು ಅರಾಮೈಕ್ಭಾಷೆಯಲ್ಲಿ ಇದನ್ನು 'ನಸ್ರತ್‌' ಎಂದು ಕರೆದರೆ; ಅರಬ್ಬಿಯಲ್ಲಿ 'ಅನ್‌-ನಾಸಿರ' ಎನ್ನಲಾಗುತ್ತದೆಕಾನಾ, ನಾಯಿನ್ಎಂಬ ಊರುಗಳು ನಜರೇತಿನ ಸಮೀಪದಲ್ಲೇ ಇವೆ. ಮೆಡಿಟರೇನಿಯನ್ಸಮುದ್ರಕ್ಕೂ ಮತ್ತು ಗಲಿಲೇಯ ಸರೋವರಕ್ಕೂ ಮಧ್ಯದಲ್ಲಿ ಊರಿದೆ. ಪ್ರಸ್ತುತ ಅರಬ್ಬಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಪಟ್ಟಣದಲ್ಲಿ ಕ್ರೈಸ್ತರ ಸಂಖ್ಯೆ ಕೇವಲ 30%. ಊರಿನ ಹೆಸರು ಪುರಾತನ ದಾಖಲೆಗಳಲ್ಲಿ ಎಲ್ಲೂ ಕಂಡು ಬರುವುದಿಲ್ಲ. ಊರಿನ ಸಮೀಪದಲ್ಲೇ ಇರುವ ಜಾಫಿಯಾ ಎಂಬ ಗ್ರಾಮದ ಬಗ್ಗೆ ಬರೆದಿರುವ ಜೋಸೆಫಸ್(ಇತಿಹಾಸತಜ್ಞ) ಸಹ ನಜರೇತಿನ ಬಗ್ಗೆ ಎಲ್ಲೂ ಏನನ್ನೂ ಪ್ರಸ್ತಾಪಿಸದಿರುವುದು ಅಚ್ಚರಿಯ ಸಂಗತಿ.

ಯೇಸು ತಮ್ಮ ಸಹೋದರರು ಮತ್ತು ಸಹೋದರಿಯರೊಂದಿಗೆ ಕೂಡಿ ಬೆಳೆದ ಊರು. ತನ್ನ ಸ್ವಂತ ಊರಿನಲ್ಲಿ ಯೇಸುವಿಗೆ ಬೆಲೆಯಿರಲಿಲ್ಲ ಎಂಬುದನ್ನು, "ಯಾವ ಪ್ರವಾದಿಯೂ ಸ್ವಗ್ರಾಮದಲ್ಲಿ ಸನ್ಮಾನಿತನಲ್ಲ" ಎನ್ನುವ ಮೂಲಕ ಯೇಸು ತಿಳಿಸುತ್ತಾರೆ(ಲೂಕ 4:24). ಇದನ್ನು ಹೇಳಿದ್ದು ನಜರೇತಿನ ಸಿನಗೊಗಿನಲ್ಲಿ. ಅದಕ್ಕೂ ಮೊದಲು ಅವರು ಪ್ರವಾದಿ ಯೆಶಾಯನ ಗ್ರಂಥದ ಸುರುಳಿಯನ್ನು ಪಠಿಸಿರುತ್ತಾರೆ. ಅಂದು ಸಬ್ಬತ್ದಿನವಾಗಿರುತ್ತದೆ. ಗ್ರಂಥವನ್ನು ಪಠಿಸಿದ ಬಳಿಕ ಎಲ್ಲರ ಗಮನ ಅವರತ್ತ ಸರಿಯುತ್ತದೆ. ಅವರ ಮಧುರ ಮಾತುಗಳು ಎಲ್ಲರ ಗಮನ ಸೆಳೆಯುತ್ತದೆ. ಆದರೆ ಅವರು ನಜರೇತಿನವರು ಎಂದು ತಿಳಿದಾಗ ಅವರ ವರ್ತನೆ ಬದಲಾಗುತ್ತದೆ. ಮತ್ಸರ ಹೊಗೆಯಾಡುತ್ತದೆ. ಜೊತೆಗೆ ಯೇಸು ಹೇಳಿದ ಕೆಲವು ಮಾತುಗಳು ಅವರಿಗೆ ಕಹಿಯೆನಿಸುತ್ತವೆ. ಅದೇ ಕಾರಣಕ್ಕೆ ಯೇಸುವನ್ನು ಇಲ್ಲಿಯ ಜನರು ಬೆಟ್ಟದಿಂದ ಕೆಳಕ್ಕೆ ದೂಡಲು ಮುಂದಾಗುತ್ತಾರೆ(ಲೂಕ 4:16-28).

ನಜರೆತ್ಅಷ್ಟೇನೂ ಪ್ರಾಮುಖ್ಯವಲ್ಲದ ಊರಾದರೂ ಅದಕ್ಕೆ ಪ್ರಾಮುಖ್ಯತೆ ದೊರೆಯಲು, ಯೇಸುವಿ ತಂದೆ ತಾಯಿ ಊರಲ್ಲಿ ನೆಲೆಸಿದ್ದು ಮತ್ತು ಯೇಸು ಅವರೊಂದಿಗೆ ಇದ್ದುದು ಕಾರಣವಾಗುತ್ತದೆ. ಪ್ರಾಯಶಃ ಅಲ್ಲಿಯ ಜನರ ಗುಣ, ವರ್ತನೆಗಳು ಮೃಗೀಯವಾಗಿದ್ದಿರಬೇಕು. ಅದೇ ಕಾರಣಕ್ಕೆ, ಫಿಲಿಪ್ಪನು ತನ್ನ ಗೆಳೆಯ ನತಾನಿಯೇಲನಿಗೆ ಯೇಸುವಿನ ಬಗ್ಗೆ ತಿಳಿಸಿದಾಗ ನತಾನಿಯೇಲನು, "ಏನು? ನಜರೇತಿನಿಂದ ಒಳ್ಳೆಯದೇನಾದರೂ ಬರುವುದುಂಟೆ?" ಎಂಬ ತಾತ್ಸಾರವನ್ನು ತೋರಿದ್ದು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ