ಆಫ್ರೋಏಶಿಯಾಟಿಕ್ನ ಸುಮಾರು 200 ಭಾಷಾ
ಪ್ರಭೇಧಗಳಲ್ಲಿ ಅರಬಿ, ಅಮ್ಹಾರ, ಅರಾಮೈಕ್,
ಈಜಿಪ್ಷಿಯನ್ ಮತ್ತು ಹೀಬ್ರೂ(ಇವ್ರಿ)
ಭಾಷೆಗಳು ಪ್ರಧಾನ ಭಾಷೆಗಳಾಗಿವೆ. ಇವುಗಳನ್ನು
ಸೆಮೆಟಿಕ್ ಭಾಷೆಗಳೆನ್ನುತ್ತಾರೆ. ಈ ಭಾಷೆಗಳನ್ನು ಉತ್ತರ
ಮತ್ತು ಈಶಾನ್ಯ ಆಫ್ರಿಕಾ ಹಾಗೂ
ಏಷ್ಯಾದ ನೈರುತ್ಯ ಭಾಗಗಳಲ್ಲಿ ಬಳಸಲಾಗುತ್ತಿದೆ.
ಅವುಗಳಲ್ಲಿ ಹೀಬ್ರೂ ಸಹ ಒಂದು.
ಇದೊಂದು ಪುರಾತನ ಭಾಷೆಯೂ ಸಹ.
ಈ ಭಾಷೆಯನ್ನಾಡುವವರನ್ನು (ವಿಶೇಷವಾಗಿ
ಪುರಾತನ ಜುದೇಯ ನಾಡಿನ ನಿವಾಸಿಗಳನ್ನು)
'ಹೀಬ್ರೂ'ಗಳೆಂದೇ ಕರೆಯಲಾಗುತ್ತದೆ. ಹೀಬ್ರೂ
ಇಸ್ರೇಲರು ಎನ್ನುವ ಪದಕ್ಕೆ ಸಮಾನವಾದ
ಪದವೂ ಸಹ. ಸಾಂಸ್ಕೃತಿಕವಾಗಿ ಈ
ಭಾಷೆಯನ್ನು ಯೆಹೂದ್ಯ ಜನಾಂಗದ ಭಾಷೆಯೆಂದು
ಪರಿಗಣಿಸಲಾಗಿತ್ತಾದರೂ ಯೆಹೂದ್ಯರಲ್ಲದ ಇತರ ಜನಾಂಗಗಳೂ (ಉದಾ:ಸಮಾರಿತರು) ಈ ಭಾಷೆಯನ್ನು ಬಳಸುತ್ತಿದ್ದರು
ಎನ್ನುವುದಕ್ಕೆ ಸಾಕ್ಷ್ಯಾಧಾರಗಳಿವೆ. ಕ್ರಿ.ಪೂ.2ನೇ
ಮಿಲ್ಲೇನಿಯಂನಿಂದಲೇ ಈ ಭಾಷೆಯು ಬಳಕೆಯಲ್ಲಿತ್ತು
ಎನ್ನುವುದು ತಿಳಿದು ಬಂದಿದೆ. ಶಾಸ್ತ್ರೀಯ
ಹೀಬ್ರೂ ಭಾಷೆ ಆ ಜನಾಂಗದ
ಬರವಣಿಗೆಯ ಭಾಷೆಯಾಗಿತ್ತು. ಪ್ರಸಕ್ತ ಆಧುನೀಕರಣಗೊಂಡ ಹೀಬ್ರೂ
ಭಾಷೆಯು ಇಸ್ರೇಲ್ ದೇಶದ ಆಡಳಿತ ಭಾಷೆಯಾಗಿದೆ.
ಜಗತ್ತಿನಲ್ಲಿ ಈ ಭಾಷೆಯಲ್ಲಿ ಮಾತನಾಡುವವರ
ಸಂಖ್ಯೆ ಸುಮಾರು 0.4 ಮಿಲಿಯ.
'ಹೀಬ್ರೂ' ಹೆಸರಿನ ಮೂಲದ ಬಗ್ಗೆ ಹಲವು ಅಭಿಪ್ರಾಯಗಳಿದ್ದರೂ ಯೆಹೂದ್ಯರ ಪಿತಾಮಹನಾದ ಅಬ್ರಹಾಂನ ಪೂರ್ವಜನಾದ ನೋಹನ ಮಗ ಶೇಮನ ಮರಿಮೊಮ್ಮಗನೂ ಆದ 'ಎಬೆರ್(ಹೆಬೆರ್)'ನಿಂದ ಈ ಹೆಸರು ಬಂದಿತೆಂಬ ಅಭಿಪ್ರಾಯ ಸೂಕ್ತವೆನಿಸುತ್ತದೆಯಾದರೂ ಅಷ್ಟೇನೂ ಪ್ರಮುಖನಲ್ಲದ ಎಬೆರ್ನ ಹೆಸರಿನಿಂದಾಗಿ ಹೀಬ್ರೂ ಪದ ಬಳಕೆಗೆ ಬಂದುದಾದರೂ ಹೇಗೆ ಎಂಬ ಸಂಶಯ ಹಾಗೆಯೇ ಉಳಿದುಬಿಡುತ್ತದೆ.
'ಹೀಬ್ರೂ' ಹೆಸರಿನ ಮೂಲದ ಬಗ್ಗೆ ಹಲವು ಅಭಿಪ್ರಾಯಗಳಿದ್ದರೂ ಯೆಹೂದ್ಯರ ಪಿತಾಮಹನಾದ ಅಬ್ರಹಾಂನ ಪೂರ್ವಜನಾದ ನೋಹನ ಮಗ ಶೇಮನ ಮರಿಮೊಮ್ಮಗನೂ ಆದ 'ಎಬೆರ್(ಹೆಬೆರ್)'ನಿಂದ ಈ ಹೆಸರು ಬಂದಿತೆಂಬ ಅಭಿಪ್ರಾಯ ಸೂಕ್ತವೆನಿಸುತ್ತದೆಯಾದರೂ ಅಷ್ಟೇನೂ ಪ್ರಮುಖನಲ್ಲದ ಎಬೆರ್ನ ಹೆಸರಿನಿಂದಾಗಿ ಹೀಬ್ರೂ ಪದ ಬಳಕೆಗೆ ಬಂದುದಾದರೂ ಹೇಗೆ ಎಂಬ ಸಂಶಯ ಹಾಗೆಯೇ ಉಳಿದುಬಿಡುತ್ತದೆ.
ಈ
ಪದವನ್ನು ಬೈಬಲ್ನಲ್ಲಿ ಮೊಟ್ಟಮೊದಲನೆಯದಾಗಿ
ಕಂಡು ಬರುವುದು ಶೇಮನ ವಂಶಾವಳಿಯನ್ನು
ವಿವರಿಸುವ ಸಂದರ್ಭದಲ್ಲಿ(ಆದಿ 10:27). ಇಲ್ಲಿ ಶೇಮನೇ 'ಹಿಬ್ರಿಯ'ರಿಗೆ ಮೂಲಪುರುಷ ಎನ್ನಲಾಗುತ್ತಿದೆ.
ಅನಂತರ 'ಹೀಬ್ರೂ(ಹಿಬ್ರೀಯ)' ಎಂಬ
ಪದಬಳಕೆಯಾಗಿರುವುದು ಅಬ್ರಹಾಮನಿಗೆ(ಆದಿ 14:18). ಅಬ್ರಹಾಮನು ಎಬೆರ್ನ ವಂಶದಲ್ಲಿ
ಬರುವ ಒಂದು ತಲೆಮಾರಿನವನು ಎನ್ನುವುದಿಲ್ಲಿ
ಗಮನಾರ್ಹ. 'ಹೀಬ್ರೂ ಕ್ಯಾನೋನ್'(ಹಳೆಯ
ಒಡಂಬಡಿಕೆ) 39 ಪುಸ್ತಕಗಳನ್ನು(ಕೆಲವು ಭಾಗಗಳನ್ನು ಹೊರತುಪಡಿಸಿ)
ರಚಿಸಿದ್ದು ಹೀಬ್ರೂ ಭಾಷೆಯಲ್ಲೇ. ಹೀಬ್ರೂ
ಭಾಷೆಯ ಕಾಲ ಎಲ್ಲಿಂದ ಮತ್ತು
ಎಲ್ಲಿಯವರೆಗೆ ಎನ್ನುವುದಕ್ಕೆ ಸಂಬಂಧಿಸಿದಂತೆ 'ಬೈಬಲ್'ನ್ನು ಹೊರತುಪಡಿಸಿದರೆ
ಬೇರೊಂದು ಅಧಿಕೃತ ಮತ್ತು ವಿಶ್ವಸನೀಯ
ಮೂಲ ಇಲ್ಲವೆನ್ನುವುದು ಆಶ್ಚರ್ಯಕರ ಸಂಗತಿ.
'ಹೊಸ
ಒಡಂಬಡಿಕೆ'ಯಲ್ಲಿ ಹಿಬ್ರಿಯರಿಗೆ ಬರೆದ
ಪತ್ರವು(ಬರೆದವರು ಯಾರೆಂಬುದು ಖಚಿತವಿಲ್ಲ.
ಪ್ರಾಯಶಃ ಸಂತ ಪೌಲನೇ ಬರೆದಿರಬಹುದೆಂಬ
ಅಭಿಪ್ರಾಯವಿದೆ), ಯೇಸುಕ್ರಿಸ್ತನ ಮರಣಾನಂತರ ಅಡ್ಡಿ ಆತಂಕಗಳಿಗೆ ಸಿಲುಕಿದ
ಯೆಹೂದ್ಯ ಕ್ರೈಸ್ತರು ಮರಳಿ ಯೆಹೂದ್ಯ ಧರ್ಮಕ್ಕೆ
ಹಿಂದಿರುಗುವುದನ್ನು ತಡೆಯಲು ಬರೆದಂತಹ ಒಂದು
ಪತ್ರವಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ