ಸಬ್ಬತ್‌

ಇದು ವಾರದ ಏಳನೆಯ ದಿನವನ್ನು ಸೂಚಿಸುವ ದಿನವಾಗಿದೆ. ದೇವರು ತಮ್ಮ ಸೃಷ್ಟಿಕಾರ್ಯವನ್ನು ಆರು ದಿನಗಳಲ್ಲಿ ಮಾಡಿಮುಗಿಸಿ ವಿಶ್ರಮಿಸಿದ ದಿನವೆಂದು ಭಾವಿಸಲಾದ ಈ ದಿನವು ಯೆಹೂದ್ಯರ ಪಾಲಿನ ವಿಮೋಚನೆಯ ದಿನವೂ ಕೂಡ ಆಗಿದೆ. ಇದು ಹೀಬ್ರೂ ಭಾಷೆಯ 'ಶವತ್‌'ನಿಂದ ಉದ್ಭವವಾದ ಪದ.

ಯೆಹೂದ್ಯರ ಧಾರ್ಮಿಕ ನಿಯಮಗಳ(ಹಲಾಖಾ) ಪ್ರಕಾರ ಈದಿನವು ಅತ್ಯಂತ ಪವಿತ್ರ ದಿನವಾಗಿದ್ದು ಅಂದು ತಮ್ಮ ಕೆಲಸಕಾರ್ಯಗಳನ್ನು ಸ್ಥಗಿತಗೊಳಿಸಿ ಅವರು ಪ್ರಾರ್ಥನೆಯಲ್ಲಿ ತೊಡಗುತ್ತಾರೆ. ಶುಕ್ರವಾರದ ಸಂಜೆ ಸೂರ್ಯಾಸ್ತಮಕ್ಕೆ ಕೆಲವು ನಿಮಿಷಗಳ ಮೊದಲು ಆರಂಭಗೊಳ್ಳುವ ಸಬ್ಬತ್ಶನಿವಾರ ಸಂಜೆ ಕತ್ತಲಾವರಿಸುತ್ತಿದ್ದಂತೆ ಮೂಡುವ ಮೂರು ನಕ್ಷತ್ರಗಳ ವೀಕ್ಷಿಸುವುದರೊಂದಿಗೆ  ಮುಕ್ತಾಯಗೊಳ್ಳುತ್ತದೆ.

ಯೆಹೂದ್ಯರು ಸಬ್ಬತ್ ದಿನದ ಆರಂಭಕ್ಕೆ ಮುಂಚೆಯೇ ತಲೆಯ ಕೂದಲನ್ನು ಕತ್ತರಿಸುವುದು, ಮನೆಯನ್ನು ಶುಚಿಗೊಳಿಸುವುದು, ಸ್ನಾನ ಮಾಡುವುದು ಇತ್ಯಾದಿಗಳ ಮೂಲಕ ಸಬ್ಬತ್‌ಸಿದ್ಧತೆಯಲ್ಲಿ ತೊಡಗುತ್ತಾರೆ. ಸೂರ್ಯಾಸ್ತಮಕ್ಕೆ ಹದಿನೆಂಟು ನಿಮಿಷಗಳ ಮೊದಲು ಮಹಿಳೆಯರು ಮೇಣದ ಬತ್ತಿಗಳನ್ನು ತಮ್ಮ ಮನೆಗಳಲ್ಲಿ ಹಚ್ಚಿಡುತ್ತಾರೆ. ಉಳಿದ ದಿನಗಳಲ್ಲಿ ತೊಡುವ ಬಟ್ಟೆಗಳಿಗಿಂತ ಉತ್ತಮವಾದ ಬಟ್ಟೆಗಳನ್ನು ಅವರು ಅಂದು ತೊಡುತ್ತಾರೆ. ಸಂಜೆ, ಬೆಳಿಗ್ಯೆ ಮತ್ತು ಮಧ್ಯಾಹ್ನ ವಿಶೇಷವಾಗಿ ತಯಾರಿಸಿದ ಊಟ-ತಿಂಡಿಗಳನ್ನು ತಿನ್ನುತ್ತಾರೆ. ಪ್ರಾಚೀನ ದಿನಗಳಲ್ಲಿ ಇದನ್ನು ಅತ್ಯಂತ ಕಟ್ಟುನಿಟ್ಟಿನಿಂದ ಆಚರಿಸಲಾಗುತ್ತಿತ್ತು ಹಾಗೂ ಸಂಪ್ರದಾಯವನ್ನು ಮೀರಿದವರಿಗೆ ಶಿಕ್ಷೆಯೂ ದೊರಕುತ್ತಿತ್ತು.

ಸಬ್ಬತ್ದಿನದ ಬಗ್ಗೆ ಯೇಸು ನುಡಿದ ಮಾತು ಹೀಗಿದೆ; "ಸಬ್ಬತ್ದಿನವಿರುವುದು ಮನುಷ್ಯನಿಗಾಗಿ ಹೊರತು, ಮನುಷ್ಯನಿರುವುದು ಸಬ್ಬತ್ಗಾಗಿ ಅಲ್ಲ. ಆದುದರಿಂದ ನರಪುತ್ರನೂ ಸಬ್ಬತ್ತಿಗೂ ಒಡೆಯ"(ಮಾರ್ಕ:2:27-28)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ