ಈ
ಪಟ್ಟಣವು ಜಗತ್ತಿನ ಅತ್ಯಂತ ಪುರಾತನ
ಪಟ್ಟಣಗಳಲ್ಲೊಂದಾಗಿದೆ. ಹಿಂದೆ ‘ಫಿನಿಷಿಯಾ’ ಎಂಬ ನಾಡಿಗೆ ಸೇರಿದ್ದ ಈ ಪಟ್ಟಣವು
ಪ್ರಸ್ತುತ 'ಲೆಬನಾನ್'
ರಾಷ್ಟ್ರದ ರಾಜಧಾನಿ 'ಬೀರೂತ್'ನಿಂದ ಉತ್ತರಕ್ಕೆ
42 ಕಿ.ಮೀ. ದೂರದಲ್ಲಿ
ಮೆಡಿಟರೇನಿಯನ್ ಸಮುದ್ರದ ದಂಡೆಯಲ್ಲಿ ನಿಂತಿದೆ.
ಪುರಾತತ್ವ ಶಾಸ್ತ್ರಜ್ಞರನ್ನು ಸದಾ ಆಕರ್ಷಿಸುವ ಈ
ಸ್ಥಳದಲ್ಲಿ 1921ರಿಂದ 1924ರವರೆಗೆ ಪಿಯರ್ ಮೊಂತೇಟ್ ಎಂಬ
ಪ್ರಾಕ್ತನಶಾಸ್ತ್ರಜ್ಞನು ಇಲ್ಲಿ ಮೊದಲು ಸಂಶೋಧನೆಯನ್ನು
ನಡೆಸಿದ. ಆತನ ಬಳಿಕ ಅವನನ್ನು ಅನುಸರಿಸಿ ಮೌರಿಸ್ ಡುನಾಂಡ್ ಎಂಬುವವನು
1925ರಿಂದ ಸುಮಾರು 40ವರ್ಷಕ್ಕೂ ಅಧಿಕ
ಕಾಲ ಸಂಶೋಧನೆಯನ್ನು ನಡೆಸಿದ. ಇಲ್ಲಿರುವ ಅವಶೇಷಗಳಡಿಯಲ್ಲಿ ಸಂಶೋಧನೆ
ನಡೆಸಿದ ಪುರಾತತ್ವ ಶಾಸ್ತ್ರಜ್ಞರು ಶತಮಾನಗಳ
ಹಳೆಯ ಮಾನವರ ನೆಲೆಗಳನ್ನು ಕಂಡು
ಹಿಡಿದಿದ್ದಾರೆನ್ನುವುದು ಗಮನಾರ್ಹ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ