ಯೆಹೋಶುವ

'ಸರ್ವೇಶ್ವರನೇ ಮೋಕ್ಷ' ಎಂಬುದು ಹೆಸರಿನ ಅರ್ಥ. ಮೋಸೆಸ್ ಶಿಷ್ಯನಾದ ಈತ ಎಫ್ರಾಯಿಮ್ಕುಲ(ಸಂಖ್ಯಾ.13:8)ದವನಾದ 'ನೂನ' ಮಗ(ವಿಮೋ.33:11. ಧರ್ಮೋ.34:9). ಈತನ ಮೊದಲ ಹೆಸರು 'ಹೋಶೇಯ'. ಮೋಸೆಸ್ನು ಈತನಿಗೆ ಇಟ್ಟ ಹೆಸರು 'ಯೆಹೋಶುವ'(ಸಂಖ್ಯಾ. 3:16). ಇವನು ಧೀರನೂ, ಶೂರನೂ ಆದ ತರುಣ ನಾಯಕ. ದೇವರ ಆಜ್ಞೆಗಳನ್ನೂ, ನಿರ್ದೇಶನಗಳನ್ನೂ ಚಾಚೂ ತಪ್ಪದೆ ಪಾಲಿಸುವಾತ.

ಈಜಿಪ್ಟ್ ದಾಸ್ಯವಿಂದ ವಿಮೋಚಿತರಾಗಿ ಬಂದು ರೆಫೆದಿಮ್ಎಂಬಲ್ಲಿ ಬೀಡುಬಿಟ್ಟಿದ್ದ ಇಸ್ರಯೇ ಮೇಲೆ ಅಮಾಲೇಕ್ಯರು ದಾಳಿಮಾಡಿದಾಗ ಅವರನ್ನು ಎದುರಿಸಲು ಮೋಸೆಸನು ಇಸ್ರಯೇಲ ದಳಪತಿಯನ್ನಾಗಿ ನೇಮಿಸಿದ್ದು ಯೇಹೋಶುವನನ್ನು. ಈತನ ಸಮರ್ಥ ನಾಯಕತ್ವದಿಂದಲೂ ಹಾಗೂ ದೈವಿಕಶಕ್ತಿಯ ನೆರವಿನಿಂದಲೂ ಇಸ್ರಯೇಲರು ಅಮಾಲೇಕ್ಯರನ್ನು ಸದೆಬಡಿಯುತ್ತಾರೆ(ವಿಮೋ.17:8-13).

ಕೆಲವು ದಿನಗಳ ಬಳಿಕ ಸರ್ವೇಶ್ವರ ದೇವರು ಮೋಸೆಸ್ನನ್ನು ಬೆಟ್ಟವನ್ನು ಹತ್ತಿ ತನ್ನ ಬಳಿಗೆ ಬರುವಂತೆ ಆಹ್ವಾನಿಸುತ್ತಾರೆ, ದೇವರ ಆಜ್ಞೆಗೆ ತಲೆಬಾಗಿ ಅವನು ಯೆಹೋಶುವನೊಂದಿಗೆ ದೇವರ ಬೆಟ್ಟವನ್ನೇರುತ್ತಾನೆ. ಅಲ್ಲಿ ಮೋಸೆಸ್ಓರ್ವನೇ ಸರ್ವೇಶ್ವರನ ಸನ್ನಿಧಿಗೆ ನಡೆಯುತ್ತಿದ್ದಂತೆ ಮೇಘವೊಂದು ಅವನನ್ನು ಕವಿಯುತ್ತದೆ. ನಲವತ್ತು ದಿನಗಳ ಕಾಲ ಅವನು ಸರ್ವೇಶ್ವರನ ಬಳಿಯೇ ಇದ್ದಾಗ ತಾಳ್ಮೆಯಿಂದ ಯೆಹೋಶುವನು ಮೋಸೆಸ್ನಿಗಾಗಿ ಹಗಲೂ ರಾತ್ರಿಯೆನ್ನದೆ ಬೆಟ್ಟದ ಮೇಲೆ ಕಾಯುತ್ತಾನೆ(ವಿಮೋ.24:12-14).

ಇತ್ತ ಸಿನಾಯ್ಬೆಟ್ಟದ ಬುಡದಲ್ಲಿದ್ದ ಇಸ್ರಯೇಲರು ಮೋಸೆಸ್ ದಾರಿಕಾದು ಆತ ಬರದಿದ್ದುದನ್ನು ಕಂಡು ತಮ್ಮನ್ನು ಮುನ್ನಡೆಸಲು ನಾಯಕರಾರೂ ಇಲ್ಲವೆಂದು ಹೇಳುತ್ತಾ ಚಿನ್ನದ ಹೋರಿ ಕರುವೊಂದನ್ನು ಮಾಡಿ ಅದಕ್ಕೆ ಅಡ್ಡಬಿದ್ದು ಬಲಿಗಳನ್ನರ್ಪಿಸಿ ಸಂಭ್ರಮಾಚರಣೆಯಲ್ಲಿ ತೊಡಗುತ್ತಾರೆ. ಅದನ್ನರಿತ ಸರ್ವೇಶ್ವರ ದೇವರು ಕೋಪಗೊಳ್ಳುತ್ತಾರೆ. ವಿಷಯವನ್ನರಿತ ಮೋಸೆಸನು ದೇವರ ಸನಿಹದಿಂದ ಹೊರಡುತ್ತಾನೆ. ಅವನು ಯೆಹೋಶುವನ ಬಳಿಗೆ ಬಂದಾಗ, "ಪಾಳೆಯದ ಕಡೆಯಿಂದ ಕಾಳಗದ ಧ್ವನಿ ಕೇಳಿಸುತ್ತಿದೆ," ಎಂದು ಯೆಹೋಶುವನು ಹೇಳುತ್ತಾನೆ. ಬೆಟ್ಟದ ಬುಡದಲ್ಲಿ ನಡೆದ ಸಂಭ್ರಮಾಚರಣೆಯು ಅವನಿಗೆ ಶತ್ರುಗಳ ಕೋಲಾಹಲದಂತೆ ಕೇಳಿಸಿರುತ್ತದೆ.

ಬೆಟ್ಟವನ್ನಿಳಿದು ಅವರಿಬ್ಬರೂ ಪಾಳೆಯದ ಬಳಿಗೆ ಬಂದಾಗ ಅಲ್ಲಿದ್ದ ಹೋರಿಕರುವನ್ನೂ, ಜನರ ಕುಣಿದಾಟವನ್ನು ಕಂಡು ಮೋಸೆಸ್ಕಡುಕೋಪಗೊಳ್ಳುತ್ತಾನೆ. ದೇವರಿತ್ತ ಶಿಲಾಶಾಸನಗಳನ್ನು ಒಡೆದುಹಾಕುತ್ತಾನೆ. ಹೋರಿಕರುವನ್ನು ದ್ವಂಸಮಾಡುತ್ತಾನೆ.

ಮೋಸೆಸ್ ಸಾಯುವ ದಿನಗಳು ಸಮೀಪಿಸಿದಾಗ ಅವನು ಯೆಹೋಶುವನ ಮೇಲೆ ಹಸ್ತನಿಕ್ಷೇಪವನ್ನಿಟ್ಟು ಆಶೀರ್ವದಿಸುತ್ತಾನೆ. ಆಗ ಯೆಹೋಶುವನು ಜ್ಞಾನಸಂಪನ್ನನಾಗುತ್ತಾನೆ(ಧರ್ಮೋ.34:9). ಮೋಸೆಸ್ ಮರಣಾನಂತರ ಯೆಹೋಶುವನು ಅವನ ಸ್ಥಾನಕ್ಕೇರುತ್ತಾನೆ. ಸರ್ವೇಶ್ವರ ದೇವರು ಇಸ್ರಯೇ ನೂತನ ನಾಯಕ ಯೆಹೋಶುವನಿಗೆ, "ನೀನೀಗ ಎದ್ದು ಸಮಸ್ತ ಪ್ರಜೆಗಳೊಂದಿಗೆ ಜೋರ್ಡನ್ನದಿಯನ್ನು ದಾಟಿ, ನಾನು ಇಸ್ರಯೇರಿಗೆ ಕೊಡುವ ನಾಡಿಗೆ ಹೋಗು. ನಾನು ಮೋಸೆಸ್ನಿಗೆ ಹೇಳಿದಂತೆ ನೀವು ಕಾಲಿಡುವ ಸ್ಥಳಗಳನ್ನೆಲ್ಲಾ ನಿಮಗೆ ಕೊಡುತ್ತೇನೆ. ಬೆಂಗಾಡು ಹಾಗೂ ಲೆಬನೋನ್ಪರ್ವತದಿಂದ ಯೂಪ್ರೆಟಿಸ್ಮಹಾನದಿಯವರೆಗಿರುವ ಹಿತ್ತೀಯರ ನಾಡೆಲ್ಲಾ ನಿಮ್ಮದಾಗುವುದು. ನಿಮ್ಮ ಸೀಮೆ ಪಶ್ಚಿಮ ದಿಕ್ಕಿನ  ಮಹಾಸಾಗರದವರೆಗೆ ವಿಸ್ತರಿಸಿಕೊಳ್ಳುವುದು. ನಿನ್ನ ಜೀವಮಾನವಿಡಿ ಯಾರೊಬ್ಬನೂ ನಿನ್ನನ್ನು ಎದುರಿಸಿ ನಿಲ್ಲನು. ನಾನು ಮೋಸೆಸ್ ಸಂಗಡ ಇದ್ದ ಹಾಗೆ ನಿನ್ನ ಸಂಗಡವೂ ಇರುತ್ತೇನೆ. ನಿನ್ನನ್ನು ಕೈಬಿಡುವುದಿಲ್ಲ; ತೊರೆಯುವುದೂ ಇಲ್ಲ" (ಯೆಹೋ.1:1-5) ಎಂದು ಆಜ್ಞಾಪಿಸುತ್ತಾರೆ.

ಸರ್ವೇಶ್ವರನ ಆಜ್ಞೆಯ ಮೇರೆಗೆ ವ್ಯವಸ್ಥಿತವಾಗಿ ಕಾರ್ಯಾಚರಣೆಗಿಳಿಯುವ ಯೆಹೋಶುವನು ಜೆರಿಕೋ ನಗರಕ್ಕೆ ಗೂಢಚಾರರನ್ನು ಕಳುಹಿಸುತ್ತಾನೆ. ಅಲ್ಲಿನ ವರದಿಗಳನ್ನು ತರಿಸುತ್ತಾನೆಮೋಸೆಸ್ ನೇತೃತ್ವದಲ್ಲಿ ಇಸ್ರಯೇರು ಕೆಂಪುಸಮುದ್ರವನ್ನು ದಾಟಿದಂತೆ ಯೆಹೋಶುವನ ನೇತೃತ್ವದಲ್ಲಿ ಜೋರ್ಡನ್ನದಿಯನ್ನು ದಾಟುತ್ತಾರೆ. ಬಳಿಕ ಹನ್ನೆರಡು ಕುಲಗಳ ಸ್ಮರಣಾರ್ಥ ಹನ್ನೆರಡು ಸ್ಮಾರಕ ಸ್ಥಂಭಗಳನ್ನು ಯೆಹೋಶುವನು ನೆಡಿಸುತ್ತಾನೆ. ಈಜಿಪ್ಟನ್ನು ದಾಟಿದ ನಂತರದ ನಲ್ವತ್ತು ವರ್ಷಗಳ ಅವಧಿಯಲ್ಲಿ ಹುಟ್ಟಿದ ಯಾರಿಗೂ ಸುನ್ನತಿ ಆಗಿರುವುದಿಲ್ಲ. ಅದಕ್ಕಾಗಿ ಗಿಲ್ಗಾಲ್ಎಂಬ ಸ್ಥಳದಲ್ಲಿ ಇಸ್ರಯೇರಿಗೆ ಸಾಮೂಹಿಕವಾಗಿ ಕಲ್ಲಿನ ಚೂರಿಯಿಂದ ಸುನ್ನತಿಯನ್ನು ಮಾಡಿಸುತ್ತಾನೆ. ಸರ್ವೇಶ್ವರ ಸ್ವಾಮಿಯ ಸೇನಾಪತಿಯ ದರ್ಶನವಾದ ಬಳಿಕ ಯೆಹೋಶುವನ ನೇತೃತ್ವದಲ್ಲಿ ದೈವಿಕ ಶಕ್ತಿಯಿಂದ ಜೆರಿಕೋ ನಗರ ದ್ವಂಸಗೊಳ್ಳುತ್ತದೆ. ಆಯಿ ನಗರದ ಮೇಲೆ ಆಕ್ರಮಣ ಮಾಡಿ ಅದನ್ನು ವಶಪಡಿಸಿಕೊಳ್ಳಲಾಗುತ್ತದೆ. ಐದು ಮಂದಿ ಅರಸರ ವಿನಾಶಕ್ಕೆ ಯೆಹೋಶುವನು ಕಾರಣನಾಗುತ್ತಾನೆ. ಇಸ್ರಯೇಲ್ಸಾಮ್ರಾಜ್ಯ ಸ್ಥಾಪನೆಗಾಗಿ ಅನೇಕರ ಸೋಲಿಗೆ ಯೆಹೋಶುವನು ಕಾರಣನಾಗುತ್ತಾನೆ. ಹೀಗೆ ಸರ್ವೇಶ್ವರ ದೇವರು ಮೋಸೆಸ್ ಮುಖಾಂತರ ವಾಗ್ದಾನ ಮಾಡಿದ್ದ ಪ್ರದೇಶವನ್ನೆಲ್ಲಾ ಯೆಹೋಶುವನು ಹಿಡಿದುಕೊಳ್ಳುತ್ತಾನೆ(ಯೆಹೋ.11:23). ಅನಂತರ ಗೆದ್ದ ಸ್ಥಳಗಳನ್ನು ಯಾಜಕರಾಗಿದ್ದಂತಹ ಲೇವಿಯರನ್ನು ಹೊರತುಪಡಿಸಿ ಉಳಿದ ಕುಲಗಳಿಗೆ ಹಂಚುತ್ತಾನೆ. ಸರ್ವೇಶ್ವರ ದೇವರೊಡನೆ ಇಸ್ರಯೇಲ್‌‌ ಸಮಾಜವು ಮಾಡಿಕೊಂಡಿದ್ದ ಒಡಂಬಡಿಕೆಯ ನವೀಕರಣ ಯೆಹೋಶುವನ ಕಾಲದಲ್ಲಾಗುತ್ತದೆ.


ಯೆಹೋಶುವನು ತನ್ನ ನೂರಹತ್ತನೆಯ ವಯಸ್ಸಿನಲ್ಲಿ ಮರಣಹೊಂದುತ್ತಾನೆ. ಆತನ ಪಾರ್ಥಿವ ಶರೀರವನ್ನು ಎಫ್ರಾಯಿಮ್ಮಲೆನಾಡಿನ ಗಾಷ್ಬೆಟ್ಟದ ಉತ್ತರ ದಿಕ್ಕಿನಲ್ಲಿರುವ ತಿಮ್ನತ್ಸೆರೆಹ ಎಂಬಲ್ಲಿನ ಅವನ ಸ್ವಂತ ಭೂಮಿಯಲ್ಲಿ ಸಮಾಧಿ ಮಾಡಲಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ