ಬೆಜೆಲೇಲ್‌

'ದೇವರ ನೆರಳಿನಲ್ಲಿರುವವನು' ಎಂಬ ಅರ್ಥವನ್ನು ಕೊಡುವ ನಾಮಧೇಯವನ್ನು ಹೊಂದಿರುವ ಈತ ಮೋಸೆಸ್ನಿಗಾಗಿ ದೇವರ ಗುಡಾರ ಮತ್ತು ಮಂಜೂಷಗಳನ್ನು ತಯಾರಿಸಿದ ಮುಖ್ಯ ಶಿಲ್ಪಶಾಸ್ತ್ರಜ್ಞ. ಈತ ಯೆಹೂದ ಕುಲದ ಊರಿಯ ಮಗ ಮತ್ತು ಹುರ್ ಮೊಮ್ಮಗ. ಸರ್ವೇಶ್ವರ ದೇವರು ಸ್ವಯಂ ಅವನನ್ನು ಆರಿಸಿ ಅವನಿಗೆ ದೈವಾತ್ಮಶಕ್ತಿಯನ್ನು ಕೊಟ್ಟು, ಅಗತ್ಯವಾದ ಜ್ಞಾನ, ವಿವೇಕ, ವಿವಿಧ ಶಿಲ್ಪಶಾಸ್ತ್ರ ಕುಶಲತೆಯನ್ನು ಅನುಗ್ರಹಿಸಿರುವುದಾಗಿಯೂ ಮೋಸೆಸ್ನಿಗೆ ತಿಳಿಸುತ್ತಾರೆ ಮಾತ್ರವಲ್ಲ ಅವನು ಸುಂದರವಾದ, ನಯನವಿರಾದ ಕೆಲಸಗಳನ್ನು ಕಲ್ಪಿಸುವನು; ಚಿನ್ನ, ಬೆಳ್ಳಿ, ತಾಮ್ರಗಳಿಂದ ಅವುಗಳನ್ನು ರೂಪಿಸುವನು; ವಿಚಿತ್ರವಾದ ಕೆತ್ತನೆಯ ಕೆಲಸಗಳನ್ನು ಮಾಡುವನು ಎಂಬುದಾಗಿ ಶಿಫಾರಸ್ಸನ್ನು ಮಾಡಿ ದೇವರ ಮಂಜೂಷ ಮತ್ತು ಗುಡಾರಗಳನ್ನು ನಿರ್ಮಿಸಲು ಅವನನ್ನು ತೊಡಗಿಸುವಂತೆಯೂ ಹೇಳುತ್ತಾರೆ(ವಿಮೋಚನಾ 31:1-5).

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ