ಕೆರೂಬಿ(Cherub)

ಯೆಹೂದ್ಯ, ಕ್ರೈಸ್ತ ಮತ್ತು ಇಸ್ಲಾಂ ಎಂಬ ಸೆಮೆಟಿಕ್ಧರ್ಮದ ಪ್ರಕಾರ ಸರ್ವೇಶ್ವರ ದೇವರ ಆಜ್ಞೆಯನ್ನು ಪಾಲಿಸುವ ಮಾನವಾತೀತ ಶಕ್ತಿಯನ್ನು ಹೊಂದಿರುವ ವಿಶಿಷ್ಟ ದೈವೀಕ  ಸೃಷ್ಟಿಯೇ 'ಕೆರೂಬಿ' ಎನ್ನಲಾಗುತ್ತದೆ. ಕೆರೂಬಿ(Cherub) ಎಂಬುದು ಒಂದು ಲತೀನ್ಪದಹೀಬ್ರೂ ಭಾಷೆಯಲ್ಲಿ 'ಕೆರುವಿನ್' ಎನ್ನಲಾಗುತ್ತದೆ. ಜೀವಿಯ ಮೂಲ ಕರ್ತವ್ಯ 'ಈಡೆನ್‌' ಎಂಬ ದೇವರ ತೋಟವನ್ನು ಕಾಯುವುದು. ಪ್ರಥಮ ಮಾನವರಾದ 'ಆದಾಂ' ಮತ್ತು 'ಏವ'ಳು ದೇವರ ಆಜ್ಞೆಯನ್ನು ಮೀರಿದ ಕಾರಣಕ್ಕೆ ದೇವರು ಅವರಿಬ್ಬರನ್ನೂ ಏಡೆನ್ತೋಟದಿಂದ ಹೊರಹಾಕುತ್ತಾರೆ. ಬಳಿಕ ತೋಟವನ್ನು ಕಾಯಲು 'ಕೆರೂಬಿ' ಎಂಬ ಕಾವಲು ದೂತನನ್ನು ನೇಮಿಸುತ್ತಾರೆ ಎಂಬ ವಿವರವು ಬೈಬಲ್ನಲ್ಲಿದೆ(ಆದಿ.3:24). ಸಿಂಹ, ಹಸು, ಮಾನವ, ಗರುಡ ಮುಂತಾದ ರೂಪಗಳಲ್ಲಿ 'ಕೆರೂಬಿ'ಯನ್ನು ಚಿತ್ರಿಸುತ್ತಾರಾದರೂ ಕೆರೂಬದ ನೈಜ ರೂಪದ ಬಗ್ಗೆ ಸ್ಪಷ್ಟತೆಯಿಲ್ಲ. ಯೆಜಕಿಯೇಲ್ಪ್ರವಾದಿಯ ಗ್ರಂಥದಲ್ಲಿ ಕೆರೂಬಿಗೆ ನಾಲ್ಕು ತಲೆಗಳಿರುವುದರ ಬಗ್ಗೆ ಚಿತ್ರಣವಿದೆ. ಮೊದಲ ತಲೆ 'ಕೆರೂಬಿ'ಯದ್ದೆಂದೂ ಎರಡನೆಯ ತಲೆ ಮನುಷ್ಯನದೆಂದೂ, ಮೂರನೆಯ ಮತ್ತು ನಾಲ್ಕನೆಯ ತಲೆಗಳು ಕ್ರಮವಾಗಿ ಸಿಂಹ ಮತ್ತ ಗರುಡನದೆಂದೂ ಗ್ರಂಥದಲ್ಲಿ ಹೇಳಲಾಗಿದೆ. ಅದರ ಕಾಲುಗಳಿಗೆ ಚಕ್ರಗಳಿವೆಯೆಂದೂ ಅಲ್ಲದೆ ರೆಕ್ಕೆಗಳಡಿಯಲ್ಲಿ ಮನುಷ್ಯರ ರೀತಿಯ ಕೈಗಳಿರುವುದಾಗಿಯೂ ಹಾಗೂ ಅವುಗಳನ್ನು ತಾನು ಜೀವಂತವಾಗಿ ಕೆಬಾರ್ನದಿಯ ಹತ್ತಿರ ಕಂಡಿರುವುದಾಗಿಯೂ ಯೆಜೆಕಿಯೇಲ(10:15)ನು ತನ್ನ ಗ್ರಂಥದಲ್ಲಿ ಬರೆದಿದ್ದಾನೆ. ಈತನ ಗ್ರಂಥದ ಮೊದಲ ಅಧ್ಯಾಯದಲ್ಲೂ ಹಾಗೂ ಹತ್ತನೆಯ ಅಧ್ಯಾಯದಲ್ಲೂ ಹೆಚ್ಚೂ ಕಡಿಮೆ ಒಂದೇ ರೀತಿಯ ವಿವರಣೆಗಳಿವೆ. ಯೆಜಕಿಯೇಲನ 41ನೇ ಅಧ್ಯಾಯದಲ್ಲಿ ಸ್ವಲ್ಪ ವ್ಯತ್ಯಸ್ತವಾದ ವಿವರಣೆಯಿದ್ದು ಜೆರುಸಲೇಮಿ ದ್ವಿತೀಯ ದೇಗುಲದಲ್ಲಿ ಚಿತ್ರಿಸಲಾದ ಎರಡು ತಲೆಗಳ 'ಕೆರೂಬಿ'ಗಳ ಬಗ್ಗೆ ವಿವರಿಸಿದ್ದಾನೆ.


'ಕೆರೂಬಿ'ಗಳು ಒಂದಕ್ಕೊಂದು ಎದುರು ಬದುರಾಗಿ ರೆಕ್ಕೆಗಳನ್ನು ಹರಡಿ ಕುಳಿತಿರುವ ಆಕೃತಿಯನ್ನು 'ದೇವರ ಮಂಜೂಷ' ಮೇಲೆ ಸೃಷ್ಟಿಸಲಾಗಿದೆ ಎಂಬುದರ ಬಗ್ಗೆ ವಿಮೋಚನಾ ಕಾಂಡ(37:1-9)ದಲ್ಲಿ ಓದಬಹುದು. ಇಂತಹ ಆಕೃತಿಗಳನ್ನು ಫಿನಿಷಿಯಾದಲ್ಲಿ ಹೆಚ್ಚಾಗಿ ಬಳಸುತ್ತಿದ್ದುದರ ಬಗ್ಗೆ ಮಾಹಿತಿಗಳು ಲಭ್ಯವಿವೆಆದರೆ 'ಕೆರೂಬಿ' ನೈಜಸ್ವರೂಪವೇನೆಂಬುದರ ಬಗ್ಗೆ ಸರಿಯಾದ ಮಾಹಿತಿಗಳು ಎಲ್ಲೂ ಲಭ್ಯವಿಲ್ಲ ಎಂಬುದಾಗಿ ಇತಿಹಾಸ ತಜ್ಞ ಜೋಸೆಫಸ್ಹೇಳಿದ್ದಾನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ