ಸಂತರಾದ ಕಾಸ್ತುಲಸ್‌ ಮತ್ತು ಐರಿನ್‌

ಸಂತ ಕಾಸ್ತುಲಸ್‌
ಸಂತ ಸೆಬಾಸ್ಟಿಯನ್‌ರ ಶುಶ್ರೂಷೆಯಲ್ಲಿ ಸಂತ ಐರಿನ್‌
ಸಂತ ಕಾಸ್ತುಲಸ್ಚಕ್ರವರ್ತಿ ಡಯೋಕ್ಲೇಷನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೈನ್ಯಾಧಿಕಾರಿಯೂ ಹಾಗೂ 'ಶಾಂಬೆರ್ಲಿನ್‌(ಹಣಕಾಸಿನ ವ್ಯವಸ್ಥೆಯನ್ನು ನೋಡಿಕೊಳ್ಳುವ) ಎಂಬ ಹುದ್ದೆಯಲ್ಲಿದ್ದ ಅಧಿಕಾರಿಯೂ ಆಗಿದ್ದ ಎನ್ನಲಾಗುತ್ತಿದೆ. ಡಯೋಕ್ಲೇಷನ್ಕ್ರೈಸ್ತವಿರೋಧಿಯೂ, ಕ್ರೈಸ್ತರ ಪೀಡಕನೂ ಆಗಿದ್ದ. ಆದರೂ ಅವನಿಗೆ ಅಂಜದೆ ಕಾಸ್ತುಲಸ್ಕ್ರೈಸ್ತಮತವನ್ನು ಸ್ವೀಕರಿಸಿದ್ದ. ಈತನ ಪತ್ನಿ 'ಐರಿನ್‌'; ಈಕೆಯನ್ನು ರೋಮ್ ಐರಿನ್ಎಂದು ಕರೆಯಲಾಗುತ್ತದೆ. ಇಬ್ಬರೂ ತಮ್ಮ ಪ್ರಾಣವನ್ನು ಲೆಕ್ಕಿಸದೆ ಡಯೋಕ್ಲೇಷನ್ನಿಂದ ಕಿರುಕುಳಕ್ಕೆ ಈಡಾದವರನ್ನು ರಕ್ಷಿಸುವ, ಅವರಿಗೆ ಆಶ್ರಯ ನೀಡುವ ಪ್ರಯತ್ನಗಳನ್ನು ಮಾಡುತ್ತಾರೆ. ಕಾಸ್ತುಲಸ್ತನ್ನ ಗೆಳೆಯನೂ ಸೆರೆಮನೆಯ ಅಧಿಕಾರಿಯ ಮಗನೂ ಆದ ಸಂತ ತೈಬರ್ತಿಯುಸ್ ಸಹಾಯದಿಂದ ಅನೇಕರನ್ನು ಕ್ರೈಸ್ತಮತದ ನೆರಳಿಗೆ ಕರೆತರುತ್ತಾನೆ. ಅನ್ಯದೇವರನ್ನು ಆರಾಧಿಸಲು, ಬಲಿಯರ್ಪಿಸಲು ನಿರಾಕರಿಸಿದ ಮಾರ್ಕುಸ್ಮತ್ತು ಮರ್ಸೆಲಿಯನ್ಎಂಬ ಈರ್ವರನ್ನು ಬಂಧಿಸಿ ಸೆರೆಯಲ್ಲಿಡಲು ಡಯೋಕ್ಲೇಷನ್ ಆಜ್ಞೆ ಹೊರಟಾಗ ಕಾಸ್ತುಲಸ್ಅವರಿಗೆ ಆಶ್ರಯ ನೀಡಿ ರಕ್ಷಿಸುವ ಪ್ರಯತ್ನ ಮಾಡುತ್ತಾನೆ ಅಲ್ಲದೆ ಚಕ್ರವರ್ತಿಯ ಅರಮನೆಯಲ್ಲಿ ಧಾರ್ಮಿಕ ಕಾರ್ಯಾಚರಣೆಗೆ ಅವಕಾಶ ಮಾಡಿಕೊಟ್ಟು ಚಕ್ರವರ್ತಿಯ ಕೆಂಗಣ್ಣಿಗೆ ತುತ್ತಾಗುತ್ತಾನೆ. ಪರಿಣಾಮ ಕಾಸ್ತುಲಸ್ತನ್ನ ಪ್ರಾಣವನ್ನೇ ತ್ಯಾಗ ಮಾಡಬೇಕಾಗಿ ಬರುತ್ತದೆ. ಕಾಸ್ತುಲಸ್ನನ್ನು ಕ್ರೂರವಾಗಿ ಹಿಂಸಿಸಿ ಬಳಿಕ ಮರಳಿನಲ್ಲಿ ಹುದುಗಿಸಿ ಕೊಲ್ಲಲಾಗುತ್ತದೆ.

ಪತಿಯ ಬಲಿದಾನ ಐರಿನ್ನಳ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮವನ್ನೂ ಉಂಟು ಮಾಡುವುದಿಲ್ಲ. ತಾನು ನಂಬಿದ ಧರ್ಮಕ್ಕಾಗಿ ಅವಳು ಯಾವ ಕಷ್ಟವನ್ನೂ ಎದುರಿಸಲು ಸಿದ್ಧಳಾಗುತ್ತಾಳೆ. ಬಾಣಗಳಿಗೆ ತುತ್ತಾಗಿ ಸಾವು-ಬದುಕಿನ ಹೋರಾಟ ನಡೆಸುತ್ತಿದ್ದ ಸಂತ ಸೆಬಾಸ್ಟಿಯನ್ನನ ಮೈಯನ್ನು ಹೊಕ್ಕಿದ್ದ ಬಾಣಗಳನ್ನು ಕಿತ್ತು ತೆಗೆದು ಅವನಿಗೆ ಶುಶ್ರೂಷೆಯನ್ನು ನೀಡಿ ಬದುಕಿಸುತ್ತಾಳೆ. ಆದರೆ ಡಯೋಕ್ಲೇಷನನ ಸಿಬ್ಬಂದಿಗಳು ಅವಳನ್ನು ಬಂಧಿಸುವ ಪ್ರಯತ್ನ ಮಾಡಿದಾಗ ಐರಿನ್ಸ್ವಯಂ ಪ್ರಾಣತ್ಯಾಗ ಮಾಡಿ ಹುತಾತ್ಮಳಾಗುತ್ತಾಳೆ.


ಸಂತನ ಪಟ್ಟವನ್ನು ಧರಿಸಿದ ಕಾಸ್ತುಲಸ್ ಹತ್ಯೆ ಮಾಡಿದ ಸ್ಥಳದಲ್ಲಿ ಆತನ ನೆನಪಿಗಾಗಿ ಚರ್ಚ್‌‌ವೊಂದನ್ನು ಕಟ್ಟಿಸಲಾಗಿದೆ. ಮಾರ್ಚ್ 26ರಂದು ಸಂತನ ಹಬ್ಬವನ್ನು ಕಥೋಲಿಕ ಕ್ರೈಸ್ತರು ಆಚರಿಸುತ್ತಾರೆ. ಸಂತ ಐರಿನಳ ಹಬ್ಬವನ್ನು ಮಾರ್ಚ್ 30ರಂದು ಆಚರಿಸಲಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ