ಆರೋನ

ಈತ ಮೋಸೆಸ್ ಹಿರಿಯ ಸಹೋದರ; ಅಮ್ರಾಮ್ಮತ್ತು ಜೋಕಿಬೆದ್ ಮೂವರು ಮಕ್ಕಳಲ್ಲಿ ಎರಡನೆಯವನು. ಇವರಿಬ್ಬರಿಗಿಂತಲೂ ಹಿರಿಯವಳು 'ಮಿರಿಯಮ್‌'

ಆರೋನನು ಹುಟ್ಟಿದ್ದು ಕ್ರಿ.ಪೂ. 16ನೇ ಶತಮಾನದಲ್ಲಿ. ಲೆವಿಯ ಮರಿಮೊಮ್ಮಗನಾದ ಆರೋನನು ಅಮ್ಮಿನದಾಬ್ ಮಗಳಾದ ಎಲಿಶೇಬಾಳನ್ನು ವಿವಾಹವಾಗುತ್ತಾನೆ. ನಾದಾಬ್‌, ಅಭೀಹು, ಎಲಿಯೇಜರ್ಮತ್ತು ಈತಾಮರ್ಎಂಬುವವರು ಇವನ ಮಕ್ಕಳು.

ಈಜಿಪ್ಟಿನವರ ದಾಸ್ಯದಲ್ಲಿದ್ದ ಇಸ್ರಾಯೇಲರ ಬಿಡುಗಡೆಗಾಗಿ ಶ್ರಮಿಸಿದ ಕಿರಿಯ ಸೋದರ ಮೋಸೆಸ್ ಪ್ರತಿನಿಧಿಯಾಗಿಯೂ ಪ್ರವರ್ತಕನಾಗಿಯೂ ಆರೋನನು ಕಾರ್ಯನಿರ್ವಹಿಸುತ್ತಾನೆ. ಮೋಸೆಸ್ ಆಜ್ಞೆಯ ಮೆರೆಗೆ ತನ್ನ ಕೈಯಲ್ಲಿದ್ದ ಕೋಲನ್ನು ಫರೋಹನ ಮುಂದೆ ಎಸೆದಾಗ ಅದು ಹಾವಾಗಿ ಪರಿವರ್ತನೆ ಹೊಂದುತ್ತದೆ. ಸಿನಾಯ್ಬೆಟ್ಟದ ಮೇಲೆ ಮೋಸೆಸ್ನಿಗೆ ದೈವದರ್ಶನವಾಗಿ ದಶಾಜ್ಞೆಗಳು ದೊರೆತಾಗ ಅದನ್ನು ಕಾಣುವ ಭಾಗ್ಯ ಆರೋನನಿಗೆ ದೊರೆಯುವುದಿಲ್ಲ. ಬದಲಾಗಿ ಇಸ್ರೇಲಿನ ಜನರ ಒತ್ತಡಕ್ಕೆ ಮಣಿದು ಚಿನ್ನದ ಕರುವಿನ ನಿರ್ಮಾಣ ಮಾಡಿಸಿ ದೇವರ ಕೋಪಕ್ಕೆ ಭಾಜನನಾಗುತ್ತಾನೆ. ಆದರೆ ದೇವರ ಕೃಪೆ ಇವನ ಮೇಲಿರುತ್ತದೆ; ಹಾಗಾಗಿ ಇತರರು ನಿರ್ನಾಮವಾಗಿ ಹೋದರೂ ಇವನಿಗೇನೂ ಹಾನಿ ಸಂಭವಿಸುವುದಿಲ್ಲ.  ಬದಲಾಗಿ ಬೆಟ್ಟದ ಬುಡದಲ್ಲಿ ಬಲಿಪೀಠವನ್ನು ನಿರ್ಮಿಸಿ ಹನ್ನೆರಡು ಕುಲಗಳಿಗೆ ಹನ್ನೆರಡು ಕಲ್ಲಿನ ಕಂಬಗಳನ್ನು ಸ್ಥಾಪಿಸಿದ ಬಳಿಕ ಮೋಸೆಸ್ನೂ ಸೇರಿದಂತೆ ಆರೋನನು ತನ್ನಿಬ್ಬರು ಮಕ್ಕಳ ಜೊತೆಗೆ ದೈವದರ್ಶನವನ್ನು ಪಡೆಯುತ್ತಾನೆ. ಅವರೊಂದಿಗೆ ಇಸ್ರೇಲಿನ ಎಪ್ಪತ್ತು ಮಂದಿ ಹಿರಿಯರೂ ಸಹ ಭಾಗ್ಯವನ್ನು ಪಡೆಯುತ್ತಾರೆ.

ಮೋಸೆಸನು ದೇವದರ್ಶನದ ಗುಡಾರವನ್ನು ನಿರ್ಮಿಸಿದ ಬಳಿಕ ದೇವರ ಆರಾಧನೆಗೆ ಆರೋನನನ್ನು ಪ್ರಧಾನಯಾಜಕನನ್ನಾಗಿ ನೇಮಿಸುತ್ತಾನೆ. ಅವನ ಮಕ್ಕಳು ಉಪಯಾಜಕರಾಗುತ್ತಾರೆ. ಆರೋನನ ಸಂತತಿಯವರಲ್ಲದೇ ಇತರರು ಸರ್ವೇಶ್ವರನಿಗೆ ಧೂಪವನ್ನು ಅರ್ಪಿಸಬಾರದೆಂದು ದೇವರು ಸಹ ಆಜ್ಞೆಯನ್ನು ವಿಧಿಸುತ್ತಾರೆ. ಆದರೆ ಬಂಡೆಗಲ್ಲಿನಿಂದ ನೀರನ್ನು ಬರಿಸಿದಾಗ ಉಂಟಾದ ಮೆರಿಬಾ ಪ್ರವಾಹದ ವೇಳೆ ದೇವರ ಮಾತನ್ನು ಆ ಸಹೋದರರು ಮೀರಿದರು ಎಂಬ ಕಾರಣಕ್ಕೆ ಆರೋನ ಮತ್ತು ಮೋಸಸ್ರಿಗೆ ವಾಗ್ದತ್ತ ನಾಡಿಗೆ ಕಾಲಿಡಲು ದೇವರು ಅವಕಾಶ ನೀಡುವುದಿಲ್ಲ. ದೇವರ ಆದೇಶದಂತೆ ಮೋಸೆಸನು ಹೋರ್ಬೆಟ್ಟದ ಮೇಲೆ ಆರೋನನ ಯಾಜಕ ವಸ್ತ್ರಗಳನ್ನು ತೆಗೆದು ಅವನ ಮಗ ಎಲಿಯೇಜರ್ನಿಗೆ ತೊಡಿಸುತ್ತಾನೆ. ಅದಾದ ಬಳಿಕ ತನ್ನ ಎಂಬತ್ತಮೂರು ವರ್ಷ ವಯಸ್ಸಿನಲ್ಲಿ ಆರೋನನು ಮರಣ ಹೊಂದುತ್ತಾನೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ