ದೇವರ
ಪರವಾಗಿ ಜನರೊಡನೆ ಅಧಿಕೃತವಾಗಿ ಸಂಭಾಷಿಸುವವನೇ
'ಪ್ರವಾದಿ' ಅಥವಾ 'ಪ್ರವರ್ತಕ'. ದೈವಸಂಕಲ್ಪವನ್ನು
ಸಾರುವುದರೊಂದಿಗೆ ಮುಂದಾಗಲಿರುವ ಘಟನೆಗಳನ್ನು ತಿಳಿಸುವವನನ್ನು 'ಪ್ರವಾದಿ' ಎನ್ನಲಾಗುತ್ತದೆ. ಇವರು ನೀಡುವ ಸಂದೇಶಗಳೇ
'ಪ್ರವಾದನೆಗಳು'. ಬೈಬಲ್ನ ಹಳೆಯ
ಒಡಂಬಡಿಕೆಯಲ್ಲಿ ಅನೇಕ ಪ್ರವಾದನಾ ಗ್ರಂಥಗಳಿವೆ.
ಅವುಗಳನ್ನು ಬರೆದವರು ಪ್ರವಾದಿಗಳೇ. ಅಂತಹ
ಪ್ರವಾದಿಗಳಲ್ಲಿ ಪ್ರಮುಖರು ಇವರು:ಎಜ್ರ, ನೆಹೇಮಿಯ,
ಯೋಬ, ಯೆಶಾಯ, ಯೆರೆಮೀಯ, ಎಜೆಕೀಯಲ್,
ದಾನಿಯೆಲ್, ಹೋಶೇಯ, ಯೊವೇಲ, ಆಮೋಸ,
ಮೀಕ, ಜೆಕರ್ಯ ಇತ್ಯಾದಿ. ದೇವರು
ಮಾನವನೊಂದಿಗೆ ನೇರವಾಗಿ ಸಂಭಾಷಿಸುವ ಬದಲು
ಪ್ರವಾದಿಗಳ ಮುಖೇನ ಸಂವಾದಿಸಿದ ಅನೇಕ
ಘಟನೆಗಳು ಬೈಬಲ್ನಲ್ಲಿ ಕಾಣಲು
ಸಿಗುತ್ತವೆ. 'ದೈವಪುರುಷನಾದ ಶೆಮಾಯನಿಗೆ ಈ ದೈವವಾಣಿ ಕೇಳಿಸಿತು,
"ನೀನು ಹೋಗಿ ಸೊಲೊಮೋನನ ಮಗನೂ
ಜುದೇಯದ ಅರಸನೂ ಆದ ರೆಹಬ್ಬಾಮನಿಗೂ
ಯೆಹೂದ ಬೆನ್ಯಮೀನ್ ಕುಲಗಳವರಿಗೂ ಹಾಗೂ ಉಳಿದ ಜನರಿಗೂ
ಹೀಗೆಂದು ಹೇಳು: ಸರ್ವೇಶ್ವರನ ಮಾತನ್ನು
ಕೇಳಿರಿ: ನೀವು ನಿಮ್ಮ ಸಹೋದರರಾದ
ಇಸ್ರಯೇಲರೊಡನೆ ಯುದ್ದ ಮಾಡಲು ಹೋಗಬಾರದು;
ಎಲ್ಲರೂ ಹಿಂದಿರುಗಿ ಹೋಗಿರಿ; ಈ ವಿಭಜನಾಕಾರ್ಯ
ಸರ್ವೇಶ್ವರನಿಂದಾಗಿದೆ, ಎಂದು ಹೇಳಬೇಕು."' ಎಂಬುದಾಗಿ
ಸರ್ವೇಶ್ವರ ದೇವರು ಶೆಮಾಯನ ಮುಖಾಂತರ
ಹೇಳಿಸಿದ ಮಾತುಗಳನ್ನು ಅರಸುಗಳ ಮೊದಲ ಗ್ರಂಥದಲ್ಲಿ
ಓದಬಹುದು(1ಅರಸು 12:22-24). ಮೋಸೆಸ್‌ನನ್ನೂ ಪ್ರವಾದಿ ಎನ್ನುವವರು ಇದ್ದಾರೆ.
ಕೆಲವು ಕ್ರೈಸ್ತೇತರರು ಯೇಸುವನ್ನೂ ಒಬ್ಬ ಪ್ರವಾದಿಯೆಂದೇ ಪರಿಗಣಿಸುತ್ತಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ