ಜೆರುಸಲೇಂ

'ಶಾಲೋಮ್(Shalom)‌' ಎಂಬ ಪದದ ಅರ್ಥ 'ಶಾಂತಿ' ಎಂಬುದಾಗಿದೆ. 'ಶಾಲೋಮ್‌' ಕ್ರಮೇಣ ಬದಲಾಗಿ 'ಸಾಲೆಮ್‌' ನಂತರ 'ಜೆರುಸಲೇಂ' ಆಗಿರಬೇಕು ಎನ್ನುವುದು ಕೆಲವರ ಅಭಿಪ್ರಾಯ. ಕ್ರಿ.ಪೂ.200ಕ್ಕೂ ಮೊದಲು ನಗರವನ್ನು 'ಸಾಲೇಮ್‌' ಎಂದು ಕರೆಯಲಾಗುತ್ತಿತ್ತು ಎನ್ನುವುದಕ್ಕೆ ಪುರಾವೆಗಳಿವೆ. ಹಿಬ್ರಿಯರಿಗೆ ಬರೆದ ಪತ್ರ'ದಲ್ಲೂ (ಪ್ರಾಯಶಃ ಪ್ರೇಷಿತ ಸಂತ ಪೌಲ) ವಿಷಯವನ್ನು ಗಮನಿಸಬಹುದು. ಜೆರುಸಲೇಂನ ದ್ವಿತಿಯಾರ್ಧದ ನೈಜ ಅರ್ಥ 'ಶಾಂತಿ' ಎಂಬುದಕ್ಕೆ ಪತ್ರವೇ ಸಾಕ್ಷಿಯಾಗುತ್ತದೆ. ಅದರಲ್ಲಿರುವ ಒಕ್ಕಣೆ ಹೀಗಿದೆ, 'ಮೆಲ್ಕಿಸದೇಕ ಎಂಬ ಹೆಸರಿನ ಮೂಲಾರ್ಥ 'ನ್ಯಾಯ ನೀತಿಯ ಅರಸ.' ಆತನು ಸಾಲೇಮಿನ ಅರಸನೂ ಆಗಿದ್ದನು. ಆದ್ದರಿಂದ 'ಶಾಂತಿಸಮಾಧಾನದ ಅರಸ' ಎಂಬ ಅರ್ಥವೂ ಉಂಟು' (ಹಿಬ್ರಿ 7:2). ಅಂದರೆ 'ಸಾಲೇಮಿನ ಅರಸ' = 'ಶಾಂತಿಸಮಾಧಾನದ ಅರಸ' ಎಂದಾಗುತ್ತದೆ. ಹಾಗಾಗಿ 'ಜೆರುಸಲೇಂ' ಅಂದರೆ 'ಇಮ್ಮಡಿ ಶಾಂತಿ'(twofold peace)ಯೆಂದೇ ಅರ್ಥ ಎಂಬುದಾಗಿ ವ್ಯಾಖ್ಯಾನಿಸಲಾಗುತ್ತಿದೆ.

ಜೆರುಸಲೇಮಿಗೆ ಸಂಬಂಧಿಸಿದಂತೆ ಬೈಬಲ್ನಲ್ಲಿ ಇನ್ನೂ ಅನೇಕ ಹೆಸರುಗಳನ್ನು ಕಾಣಬಹುದಾಗಿದೆ; ಅವು: ಸರ್ವೇಶ್ವರನ ನಗರ, ಉನ್ನತರಾಜನ ನಗರ, ದಾವೀದರಸನ ನಗರ, ಸದಾಚಾರದ ನಗರ, ನಂಬಿಕೆಯ ನಗರ, ಪವಿತ್ರ ನಗರ ಇತ್ಯಾದಿ. ಅರಬ್ಬಿಯಲ್ಲಿ ನಗರವನ್ನು 'ಎಲ್‌-ಖುದನ್‌' ಅರ್ಥಾತ್‌ 'ಪವಿತ್ರ ನಗರ' ಎನ್ನಲಾಗುತ್ತದೆ. ಅಕ್ಕಾಡಿಯನ್ನರು ನಗರವನ್ನು 'ಉರುಸಲಿಮ್‌' ಎಂಬುದಾಗಿ ಕರೆಯುತ್ತಿದ್ದರು. ಯೆಶಾಯನ ಗ್ರಂಥ ಮತ್ತು ಕೀರ್ತನೆಗಳಲ್ಲಿ ಹಲವಾರು ಕಡೆ ಇದನ್ನು 'ಸಿಯೋನ್‌' ಎಂದೂ ಕರೆಯಲಾಗಿದೆ. ಇದಕ್ಕೆ ಕಾರಣ ನಗರವಿರುವುದೇ ಕೇಂದ್ರೀಯ ಪರ್ವತಶ್ರೇಣಿಗಳ ಮೇಲೆ. ಇಲ್ಲಿರುವ ಪರ್ವತಶ್ರೇಣಿಗಳಲ್ಲಿ ಒಂದಾದ ಸಿಯೋನ್ ಮೇಲೆ ದಾವೀದರಸನು ತನ್ನ ಅರಮನೆಯನ್ನು ಕಟ್ಟಿಸಿದ್ದ. ನಗರಕ್ಕೆ ದಾವಿದರಸನ ನಗರವೆನ್ನಲಾಯಿತು.

ಕ್ರಿ.ಪೂ. 1070ರಿಂದ ಜೆರುಸಲೇಂ ಪುರಾತನ ಇಸ್ರೇಲ್ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಸೊಲೊಮೋನ ಆಳ್ವಿಕೆಯ ಬಳಿಕ ಕ್ರಿ.ಪೂ. 997ರಲ್ಲಿ ನಡೆದ ವಿಭಜನೆಯ ನಂತರ ದಕ್ಷಿಣದ ಜುದೇಯದ ರಾಜಧಾನಿಯಾಗಿ ಜೆರುಸಲೇಂ ಮುಂದುವರಿಯುತ್ತದೆ. ಸ್ಥಳದ ಬಗೆಗಿನ ಮೊದಲ ಐತಿಹಾಸಿಕ ವಿವರಣೆ ದೊರಕುವುದು ಕ್ರಿ.ಪೂ. 1943 ಮತ್ತು 1933 ನಡುವಿನ ದಶಕದಲ್ಲಿ. 'ಅಬ್ರಾಮನು ಕೆದರ್ಲಗೋವರನನ್ನು ಅವನೊಂದಿಗಿದ್ದ ರಾಜರನ್ನೂ ಸೋಲಿಸಿದ ಬಳಿಕ ಸೊದೋಮಿನ ಅರಸನು ಅವನನ್ನು ಭೇಟಿಯಾಗಲು ಧಾವಿಸಿ ಬರುತ್ತಾನೆ. ಅದೇ ವೇಳೆಗೆಸಾಲೇಮ್‌’ನ ಅರಸನೂ ಪರಾತ್ಪರ ದೇವರ ಯಾಜಕನೂ ಆಗಿದ್ದ ಮೆಲ್ಕಿಸದೇಕನೂ ಸಹ ಅಲ್ಲಿಗೆ ಬಂದು ಅಬ್ರಾಮನನ್ನು ಆಶೀರ್ವದಿಸುತ್ತಾನೆ'(ಆದಿ 14:17-18)ಎಂದು ಬೈಬಲ್‌ನಲ್ಲಿ ಓದಬಹುದು. ಜೆರುಸಲೇಮಿನ ಹೆಸರು ಬೈಬಲ್ನಲ್ಲಿ ಮೊಟ್ಟಮೊದಲು ಗೋಚಕ್ಕೆ ಬರುವುದು ವಾಕ್ಯದಲ್ಲೇ. ಬಳಿಕ ಅಬ್ರಾಮನು ಸಲೇಮಿಗೆ ಹೋಗಲೇಬೇಕಾದ ಸಂದರ್ಭವೂ ಬಂದೊದಗುತ್ತದೆ. 'ಅಬ್ರಹಾಮನನ್ನು ಪರೀಕ್ಷಿಸಲು ದೇವರು, ನಿನ್ನ ಒಬ್ಬನೇ ಮಗನಾದ ಇಸಾಕನನ್ನು ಕರೆದುಕೊಂಡು ಮೊರೀಯ ಪ್ರಾಂತಕ್ಕೆ ಹೋಗು. ಅಲ್ಲಿ ನಾನು ತೋರಿಸುವ ಬೆಟ್ಟದ ಮೇಲೆ ಅವನನ್ನು ದಹನಬಲಿಯಾಗಿ ಅರ್ಪಿಸು' ಎನ್ನುತ್ತಾರೆ(ಆದಿ 22:1-2). ಹೀಗೆ ಅಬ್ರಹಾಮನು ದಹನಬಲಿಗಾಗಿ ತನ್ನ ಮಗನನ್ನು ಕರೆದೊಯ್ಯುವ ಸ್ಥಳಮೊರೀಯ’ ಎಂಬ ಬೆಟ್ಟವಾದರೂ ಅದಿದ್ದುದು ‘ಸಾಲೇಮ್‌’ ಎಂಬ ಊರಿನ ಬಳಿಯೇ. ಮುಂದೆ ಅನೇಕ ವರ್ಷಗಳ ನಂತರ ದಾವೀದರಸನು ಮಹಾದೇಗುಲವನ್ನು ಕಟ್ಟಿಸಲು ಆರಿಸಿಕೊಂಡ ಸ್ಥಳವೇ ‘ಮೊರೀಯ’ ಎಂಬುದು ಇತಿಹಾಸ(ಬೈಬಲ್) ಪುಟಗಳಿಂದ ಲಭ್ಯವಾಗುವ ಸಂಗತಿ.

ಜೆರುಸಲೇಂ ನಗರವನ್ನು ಶುಷ್ಕ ವಾತಾವರಣವಿರುವ ಜುದೇಯದ ಬೆಂಗಾಡಿನ ಅಂಚಿನಲ್ಲಿದೆ. ರಾತ್ರಿಯಲ್ಲಿ ಹಿತವಾದ ತಂಗಾಳಿಯಿಂದ ಕೂಡಿದ ಪ್ರದೇಶದಲ್ಲಿ ಕುಡಿಯುವ ನೀರಿನ ಬಳಕೆ ಬಹು ನಿಯಮಿತ ಎನ್ನಲಾಗುತ್ತಿತ್ತು. ಪ್ರಸ್ತುತ ಸಮುದ್ರದ ನೀರನ್ನು ಶುದ್ದೀಕರಿಸಿ ನಗರಕ್ಕೆ ಒದಗಿಸಲಾಗುತ್ತಿದೆ. ಇಲ್ಲಿಯ ಸರಾಸರಿ ತಾಪಮಾನ 17 ಡಿಗ್ರಿ ಸೆಲ್ಸಿಯಸ್ಇದ್ದು ವರ್ಷಕ್ಕೆ 63 ಸೆಂ.ಮೀ.ನಷ್ಟು ಮಳೆಯಾಗುತ್ತದೆ. ನವೆಂಬರ್ಮತ್ತು ಏಪ್ರಿಲ್ನಡುವೆ ಹೆಚ್ಚಿನ ಮಳೆಯಾಗುತ್ತದೆ. ಉತ್ತರದಿಂದ ದಕ್ಷಿಣಕ್ಕೂ ಮತ್ತು ಪಶ್ಚಿಮದಿಂದ ಪೂರ್ವಕ್ಕೂ ಹಾದು ಹೋಗುವ ಎರಡು ಅಂತರರಾಷ್ಟ್ರೀಯ ಹೆದ್ದಾರಿಗಳು ನಗರದ ಸಮೀಪದಲ್ಲಿ ಸಂಗಮಿಸುತ್ತವೆ. ಮೆಡಿಟರೇನಿಯನ್ಸಮುದ್ರದಿಂದ 55 ಕಿ.ಮೀ. ಪೂರ್ವದಲ್ಲಿರುವ ನಗರದಿಂದ 25 ಕಿ.ಮೀ. ಪೂರ್ವಕ್ಕೆ ಸಾಗಿದರೆ ಲವಣ ಸಮುದ್ರ(ಮೃತ್ಯು ಸರೋವರ) ಉತ್ತರದ ಭಾಗವು ಕಾಣಲು ಸಿಗುತ್ತದೆ. ಬೈಬಲ್ಪ್ರಸಿದ್ದ ಬೆತ್ಲೆಹೆಮ್‌, ಬೆಥಾನಿ, ಜೆರಿಕೊ ಪಟ್ಟಣಗಳು ಇದರ ಆಸುಪಾಸಿನಲ್ಲೇ ಇವೆ. ಸಮುದ್ರ ಮಟ್ಟದಿಂದ ಸುಮಾರು 2500 ಅಡಿ ಎತ್ತರದಲ್ಲಿ ನಗರವಿದ್ದರೂ ಸುತ್ತಮುತ್ತಲ ಭೂಪ್ರದೇಶಗಳಿಗೆ ಹೋಲಿಸಿದರೆ ಇದು ತಗ್ಗಿನಲ್ಲೇ ಇರುವಂತೆ ಕಾಣುತ್ತದೆ. ಸಮೀಪದ 2620 ಅಡಿ ಎತ್ತರದ ಓಲಿವ್ಬೆಟ್ಟದಿಂದ ನಗರವನ್ನು ಸಂಪೂರ್ಣವಾಗಿ ವೀಕ್ಷಿಸಬಹುದಾಗಿದೆ. ನಗರದ ಮೂರು ದಿಕ್ಕುಗಳಲ್ಲೂ ಕಡಿದಾದ ಕಣಿವೆಗಳಿದ್ದು ಒಂದು ರೀತಿಯ ರಕ್ಷಣಾತ್ಮಕ ಪರಿಸರ ಇದಕ್ಕೆ ಲಭ್ಯವಾಗಿದೆ.

ಯೇಸುಕ್ರಿಸ್ತರು ಅರಸನಂತೆ ನಗರವನ್ನು ಪ್ರವೇಶಿಸಿದ್ದರು, ಇಲ್ಲಿಯ ಮಹಾದೇಗುಲವನ್ನು ವ್ಯಾಪಾರಸ್ಥಳವನ್ನಾಗಿಸಿದವರನ್ನು ಯೇಸು ಓಡಿಸಿದ್ದರು. ಯೇಸು ಬಂಧನಕ್ಕೀಡಾದದ್ದೂ, ಅವರ ವಿಚಾರಣೆಯನ್ನು ನಡೆಸಿದ್ದೂ, ಶಿಲುಬೆಗೇರಿಸಿದ್ದೂ ಮರಣಾನಂತರ ಪುನರುತ್ಥಾನರಾದದ್ದೂ ಇಲ್ಲಿಯೇ. ಘಟನೆಗಳಿಗೆ ಸಂಬಂಧಿಸಿದ ಸ್ಥಳಗಳು ಇಲ್ಲಿ ಈಗಲೂ ಕಾಣಬಹುದಾಗಿದೆ. ಕ್ರಮೇಣ ಅನೇಕ ಐತಿಹಾಸಿಕ ಸಂಗತಿಗಳಿಗೂ, ಜೊತೆಗೆ ವಿನಾಶಕ್ಕೂ ಗುರಿಯಾಗುವ ನಗರವನ್ನು ಪ್ರಸ್ತುತ ಭೂಪಟದಲ್ಲಿ ಹೆಸರಿಸಿರುವುದು 'ಯೆರುಸಲಾಯಿಮ್‌'(Yerusalayim) ಎಂದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ