ಗುಡಾರ(Tabernackle):


ಹೀಬ್ರೂ ಭಾಷೆಯಲ್ಲಿ 'ಮಿಶ್ಕಾನ್‌' ಅರ್ಥಾತ್‌ 'ಮನೆ', ಅಥವಾ 'ವಾಸಿಸುವ ಸ್ಥಳ'. ಈಜಿಪ್ಟ್ ದಾಸ್ಯದಿಂದ ವಿಮೋಚಿತರಾಗಿ ಬಂದ ಯೆಹೂದ್ಯರು ಬೆಂಗಾಡಿನಲ್ಲಿ ಅಲೆಯುತ್ತಿದ್ದಾಗ ತಂಗುತ್ತಿದ್ದುದು ಗುಡಾರಗಳಲ್ಲಿ. ಅಲ್ಲದೆ ಸಿನಾಯ್ ಪರ್ವತದ ಮೇಲೆ ಮೋಸೆಸ್ನಿಗೆ ದೈವದರ್ಶನವಾಗಿ 'ದಶಾಜ್ಞೆ'ಯ ಫಲಕಗಳು ದೊರೆತಾಗ, ಅವುಗಳು ಸರ್ವೇಶ್ವರ ದೇವರ ಪ್ರತಿನಿಧಿತ್ವವನ್ನು ಸಾರುತ್ತಿದ್ದುದರಿಂದ ಅವುಗಳನ್ನಿಡಲು ಒಂದು 'ಮಂಜೂಷ'ವನ್ನು ಮತ್ತು ಅದರ ಪಾವಿತ್ರತೆಗಾಗಿ ಮತ್ತು ಅದರ ಸಮೀಪದಲ್ಲಿ ತಾತ್ಕಾಲಿಕವಾಗಿ ಬೀಡುಬಿಟ್ಟಿದ್ದ ಇಸ್ರೇಲ್ಜನರಿಂದ ಅದನ್ನು ಪ್ರತ್ಯೇಕಗೊಳಿಸುವ ಸಲುವಾಗಿಯೂ ಗುಡಾರವೊಂದನ್ನು ನಿರ್ಮಿಸಲು ಮೋಸೆಸ್ನಿರ್ಧರಿಸುತ್ತಾನೆ. ಅದನ್ನು ಹೇಗೆ ಕಟ್ಟಬೇಕೆಂಬ ಆದೇಶವನ್ನು ಸರ್ವೇಶ್ವರ ದೇವರು ನಿರ್ಧರಿಸುತ್ತಾರೆ. ಅದನ್ನು ನಿರ್ಮಿಸುವಾಗ ದೇವರ ಆಜ್ಞೆಯಂತೆ ಸಕಲ ನಿಯಮಗಳನ್ನೂ ಪಾಲಿಸಿ ನಿರ್ಮಿಸಲಾಗುತ್ತದೆ. ಇದನ್ನು ನಿರ್ಮಿಸಿದವನು 'ಬೆಜ಼ಲೆಲ್' ಎಂಬ ಶಿಲ್ಪಶಾಸ್ತ್ರಜ್ಞ; ಈತನ ತಂದೆ ಜುದಾ ಪಂಗಡದ 'ಹುರ್‌' ಮಗ 'ಊರಿ'. ಬೆಜ಼ಲೆಲನಿಗೆ ಸಹಾಯಕನಾಗಿ ಕಾರ್ಯನಿರ್ವಹಿಸಿದವನು, 'ಒಹ್ಲಿಯಾಬ್‌'; ಅಲ್ಲದೆ ಅನೇಕ ನುರಿತ ಕುಶಲಕರ್ಮಿಗಳು ಇದರ ನಿರ್ಮಾಣಕಾರ್ಯದಲ್ಲಿ ಪಾಲ್ಗೊಂಡಿರುತ್ತಾರೆ. ಗುಡಾರವು ತಾತ್ಕಾಲಿಕವೂ ಎಲ್ಲೆಂದರಲ್ಲಿಗೆ ಒಯ್ಯಬಹುದಾದುದೂ ಆಗಿರುತ್ತದೆ. ಇಸ್ರೇಲರು ಅವುಗಳನ್ನು ಹೊತ್ತುಕೊಂಡು ವಾಗ್ದತ್ತ ನಾಡಿನವರೆಗೂ ಸಂಚರಿಸಿದ್ದರು. ಹೀಗೆ ಸಂಚರಿಸುತ್ತಿದ್ದರೂ ದಿನಕ್ಕೆ ಎರಡು ಸಲದಂತೆ ಆರಾಧನಾವಿಧಿಗಳನ್ನು ನಡೆಸಲಾಗುತ್ತಿತ್ತುಆರಾಧನಾ ವಿಧಿಗಳಿಗಾಗಿಯೇ ಲೇವಿಯರ ಪಂಗಡವಿತ್ತು. ಅದರ ನೇತೃತ್ವವನ್ನು ಮೋಸೆಸ ಸಹೋದರ ರೋನನಿಗೆ ಒಪ್ಪಿಸಲಾಗಿತ್ತು. ಮುಂದೆ 300 ವರ್ಷಗಳ ನಂತರ ಅಂದರೆ ಕ್ರಿಪೂ.960ರಲ್ಲಿ ದಾವೀದ ನಿರ್ಧಾರದ ಮೇಲೆ, ಸೊಲೊಮೋನನು ಸ್ಥಿರ ದೇಗುಲವೊಂದನ್ನು ನಿರ್ಮಿಸುವವರೆಗೂ ತಾತ್ಕಾಲಿಕ ಗುಡಾರವೇ ಮುಂದುವರಿಯಿತು. 
ನೋಡಿ: ಪರ್ಣಕುಟೀರಗಳ ಹಬ್ಬ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ