ಮೃತ ಸರೋವರದ ದಕ್ಷಿಣ ತುದಿಯಿಂದ ಸುಮಾರು 70 ಕಿ. ಮೀ. ದೂರದ ಜೋರ್ಡಾನ್ ಮತ್ತು ಇಸ್ರೇಲಿನ ಗಡಿಯಂಚಿನಲ್ಲಿರುವ ಒಂದು ಪರ್ವತವೇ 'ಹೋರ್' ಪರ್ವತವಾಗಿರಬಹುದೆಂಬ ಊಹೆಯಿದೆ. ಈ ಪರ್ವತಕ್ಕೆ 'ಜೆಬೆಲ್ ನೆಬಿ ಹಾರೂನ್' ಎಂಬ ಹೆಸರಿದೆ; ಅದರರ್ಥ 'ಪ್ರವಾದಿ ಹಾರೂನ್(ಆರೋನ)'ನ ಬೆಟ್ಟ' ಎಂಬುದಾಗಿದೆ. ಬೈಬಲ್‌ನಲ್ಲಿ, 'ಎದೋಮ್ಯರ ನಾಡಿನ ಗಡಿಯ ಹತ್ತಿರ ಇರುವ ಆ ಹೋರ್ ಬೆಟ್ಟದ ಬಳಿ ಸರ್ವೇಶ್ವರ, ಮೋಶೆ ಮತ್ತು ಆರೋನನಸಂಗಡ ಮಾತಾಡಿದರು'
1 ಎಂಬ ವಿವರಣೆಯಿದೆ. ಬೈಬಲ್‌ನಲ್ಲಿ, 'ಎದೋಮ್ಯರ ನಾಡಿನ ಗಡಿಯ ಹತ್ತಿರ ಇರುವ ಆ ಹೋರ್ ಬೆಟ್ಟದ ಬಳಿ ಸರ್ವೇಶ್ವರ, ಮೋಶೆ ಮತ್ತು ಆರೋನನಸಂಗಡ ಮಾತಾಡಿದರು'
1 ಎಂಬ ವಿವರಣೆಯಿದೆ. ಈ ಪರ್ವತದಲ್ಲೇ ಆರೋನನು ಯಾಜಕ ಪದವಿಯನ್ನು ತ್ಯಜಿಸಿ, ತನ್ನ ಮಗ ಎಲಿಯಾಜ಼ರ್‌ನನ್ನು
2
|
ಆರೋನನ ಸಮಾಧಿ |
ಯಾಜಕನನ್ನಾಗಿಸಿದ್ದು. ಆರೋನನು ಮರಣಹೊಂದಿದ್ದು ಹಾಗೂ ಆತನ ಸಮಾಧಿ ಮಾಡಿದ ಸ್ಥಳವೂ ಇದೇ ಆಗಿದೆ ಎನ್ನಲಾಗುತ್ತಿದೆ. ಅದಕ್ಕೆ ಸಾಕ್ಷಿಯಾಗಿ ಆರೋನನದೆನ್ನಲಾದ ಒಂದು ಸಮಾಧಿಯೂ ಈ ಬೆಟ್ಟದ ತುತ್ತ ತುದಿಯಲ್ಲಿದೆ. ಆದರೆ ಈ ಪರ್ವತವಿದ್ದಿರಬಹುದಾದ ಪ್ರದೇಶದ ಬಗ್ಗೆ ಅನೇಕ ಚರ್ಚೆಗಳು, ಭಿನ್ನಾಭಿಪ್ರಾಯಗಳು ಇನ್ನೂ ಮುಂದುವರಿದಿವೆ. ಅದಕ್ಕೆ ಕಾರಣ ಈ ಪ್ರದೇಶವು ಎದೋಮ್ಯರ ನಾಡಿನಲ್ಲಿದ್ದು ಆ ನಾಡಿನೊಳಕ್ಕೆ ಪ್ರವೇಶಿಸುವುದಕ್ಕೆ ಎದೋಮ್ಯರ ಅರಸನು ಅನುಮತಿ ನೀಡಿರಲಿಲ್ಲ
2 ಎಂಬುದು.
ಆದರೆ ಜೋಸೆಫಸ್ ಎಂಬ ಇತಿಹಾಸಜ್ಞನು ಆರೋನನ ಬೆಟ್ಟವೆಂದು ಗುರುತಿಸಿದ್ದು ಎರಡು ಶೃಂಗಗಳಿರುವ ಪ್ರಸಕ್ತ ಬೆಟ್ಟವನ್ನೆ. ಇದು ಸಮುದ್ರ ಮಟ್ಟದಿಂದ 4790 ಅಡಿ ಎತ್ತರವಿದ್ದು ಜೋರ್ಡಾನ್-ಅರಾಬಾ ಕಣಿವೆಯ ಪೂರ್ವದಲ್ಲಿರುವ ಎದೋಮ್ಯರ ಬೆಟ್ಟಗಳ ಸಾಲಿನಲ್ಲಿದೆ. ಈ ಬೆಟ್ಟದ ತುದಿಯಲ್ಲಿ ಪ್ರವಾದಿ ಆರೋನನ ಸಮಾಧಿಯಿದ್ದು ಸನಿಹದಲ್ಲೇ ಒಂದು ಪುಣ್ಯಕ್ಷೇತ್ರವೂ ಇದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ